ಬಿಜೆಪಿ ಬೆಂಬಲಿಸುವ ಮುಸ್ಲಿಮರಿಗೆ ಬಹಿಷ್ಕಾರ ಹಾಕಿ, ಮುಸ್ಲಿಂ ಲಾ ಬೋರ್ಡ್ ವೋಟ್ ಜಿಹಾದ್‌ಗೆ ಕರೆ!

ಕೋಲಾಹಲ ಸೃಷ್ಟಿಸಿದ ಸಜ್ಜದ್ ನುಮಾನಿ ಹೇಳಿಕೆ, ಬಿಜೆಪಿ, ಕಾಂಗ್ರೆಸ್ ಶಾಸಕರ ಇಬ್ಬರ ಆಸ್ತಿಯೂ ವಕ್ಫ್ ಗುಳುಂ, ವಕ್ಫ್ ವಿರುದ್ಧ ಬಳ್ಳಾರಿ ಮಠಾಧೀಶರ ಹೋರಾಟ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕ್ತಾರ ವೋಟ್ ಜಿಹಾದ್ ಹೇಳಿಕೆ ಕೊಟ್ಟಿದ್ದಾರೆ. ಯಾರಾದರೂ ಮುಸ್ಲಿಮರು ಬಿಜೆಪಿ ಬೆಂಬಲಿಸಿದರೆ ಅನ್ನ ನೀರು ಕೊಡಬೇಡಿ, ಬಹಿಷ್ಕಾರ ಹಾಕಿ ಎಂದು ಸಜ್ಜದ್ ನುಮಾನಿ ಕರೆ ಕೊಟ್ಟಿದ್ದಾರೆ. ಮಹಾರಾಷ್ಟ್ರ ಚುನಾವಣೆ ವೇಳೆ ಸಜ್ಜದ್ ನುಮಾನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಸೋಲಿಸಿದರೆ, ಕೇಂದ್ರ ಸರ್ಕಾರದ ಬುಡವನ್ನು ಅಲ್ಲಾಡಿಸುತ್ತೆ ಎಂದು ನುಮಾನಿ ಹೇಳಿದ್ದಾರೆ. ಇದನ್ನು ದೇವೇಂದ್ರ ಫಡ್ನವಿಸ್ ಚಾಲೆಂಜ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video