20 ತಿಂಗಳಲ್ಲಿ 19 ಉಗ್ರರು ಮಟಾಷ್: ಮೋಸ್ಟ್ ವಾಂಟೆಡ್ ಉಗ್ರರ ಎದೆಯಲ್ಲಿ ಶುರುವಾಯ್ತು ಢವಢವ

ವಿದೇಶದಲ್ಲಿ ಬೀಳುತ್ತಲೇ ಇವೆ ಮೋಸ್ಟ್ ವಾಂಟೆಂಡ್ ಉಗ್ರರ ಹೆಣ.. ನಿಜ್ಜರ್ನಿಂದ ಅಕ್ರಮ್ ತನಕ.. ಭಾರತ ಶತ್ರುಗಳು ನಿರ್ನಾಮವಾಗ್ತಾ ಇದಾರೆ.. ಅದನ್ನ ನೋಡಿ, ಭಯೋತ್ಪಾದಕ ಎದೆಯಲ್ಲಿ ಡೈನಾಮೇಟ್ ಇಟ್ಟಂತಾಗಿದೆ.. ಅಷ್ಟಕ್ಕೂ ಉಗ್ರರ ಸರಣಿ ಕೊಲೆಗಳ ಹಿಂದೆ ಇರೋ ಮರ್ಮವೇನು.?
 

Share this Video
  • FB
  • Linkdin
  • Whatsapp

ವಿದೇಶದಲ್ಲಿ ಬೀಳುತ್ತಲೇ ಇವೆ ಮೋಸ್ಟ್ ವಾಂಟೆಂಡ್ ಉಗ್ರರ ಹೆಣ.. ನಿಜ್ಜರ್ನಿಂದ ಅಕ್ರಮ್ ತನಕ.. ಭಾರತ ಶತ್ರುಗಳು ನಿರ್ನಾಮವಾಗ್ತಾ ಇದಾರೆ.. ಅದನ್ನ ನೋಡಿ, ಭಯೋತ್ಪಾದಕ ಎದೆಯಲ್ಲಿ ಡೈನಾಮೇಟ್ ಇಟ್ಟಂತಾಗಿದೆ.. ಅಷ್ಟಕ್ಕೂ ಉಗ್ರರ ಸರಣಿ ಕೊಲೆಗಳ ಹಿಂದೆ ಇರೋ ಮರ್ಮವೇನು.? ಗುಂಡಿನ ಸುರಿಮಳೆ ಸುರಿಸ್ತಾ ಇರೋ ಗಂಡೆದೆ ಯಾರದ್ದು.? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಜೈ ಅಪರಿಚಿತ ಬಂದೂಕುಧಾರಿ. ಭಯೋತ್ಪಾದಕರ ಎದೆಯಲ್ಲೇ ಈಗ ಭಯದ ಬೀಜ ಬಿತ್ತನೆಯಾಗಿದೆ.. ಆದ್ರೆ ಆ ಮಹತ್ಕಾರ್ಯ ಮಾಡಿದ್ಯಾರು..? 

ಭಾರತ ದ್ರೋಹಿಗಳನ್ನ ಹುಡುಕು ಹುಡುಕಿ ಕೊಲ್ತಾ ಇರೋ, ಆ ಅಪರಿಚಿತ ಬಂದೂಕುಧಾರಿ ಯಾರು.? ಜಗತ್ತನ್ನೇ ವಿಲವಿಲ ಅಂತ ವದ್ದಾಡೋ ಹಾಗೆ ಮಾಡ್ಬೇಕು ಅಂತ ಕನಸು ಕಟ್ಕೊಂಡಿದ್ದೋರು, ಭಾರತದ ವಿರುದ್ಧ ಕಂಠಮಟ್ಟ ದ್ವೇಷ ಇಟ್ಕೊಂಡಿದ್ದೋರು, ಈಗ ಸದ್ದೇ ಇಲ್ಲದೆ ಸಾಯ್ತಾ ಇದಾರೆ.. ಈ ಉಗ್ರ ಸಾವಿನ ಹಿಂದಿರೋ ಬಂದೂಕಧಾರಿಗಳ ಕೈವಾಡ ಎಂಥದ್ದು ಗೊತ್ತಾ..? ಈ ಸಾವಿನ ಲಿಸ್ಟ್ ಇಲ್ಲಿಗೇ ಮುಗಿಯೋದಿಲ್ಲ.. ನಿಮಗೆ ಹೇಳ್ಬೇಕಿರೋ ಕತೆ ಇನ್ನೂ ಬಾಕಿ ಇದೆ. ಸಾಲು ಸಾಲು ಉಗ್ರರ ಸಾವು, ಜಗತ್ತಿನ ಟೆರರಿಸ್ಟುಗಳಿಗೆ ಭಯ ಹುಟ್ಟಿಸಿದೆ.. ಅವರ ಭಯ ಸಾವಿಗಿಂತಾ ಹೆಚ್ಚಾಗಿ ಭಾರತದ ಬಗ್ಗೆನೇ ಇದೆ.. ಅದಕ್ಕೆ ಕಾರಣ ಏನು? ನೀವೇ ನೋಡಿ.

Related Video