Asianet Suvarna News Asianet Suvarna News

Suvarna FIR ಕಾಂಗ್ರೆಸ್‌-ಬಿಜೆಪಿ ಗ್ಯಾಂಗ್‌ವಾರ್‌ನಲ್ಲಿ ಬಿತ್ತು ಕಾರ್ಯಕರ್ತನ ಹೆಣ, ಅವಳಿಗಾಗಿಯೇ ಇವನ ಪ್ರಾಣ ತೆಗೆದ್ರಾ?

ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಗ್ಯಾಂಗ್ ವಾರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ನಡೆದಿದ್ದು ಈ ವಾರ ಸುದ್ದಿಯಾಗಿತ್ಉತ. ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದ ಘಟನೆಯಲ್ಲಿ ಕೆಜಿಎಫ್ ಸಿನಿಮಾ ನೋಡೋದಕ್ಕೆ ಪ್ಲ್ಯಾನ್ ಮಾಡಿ ಕೂತವರು ಕೊನೆಗೆ ಮರ್ಡರ್ ಮಾಡಿದ್ದರು. ಈ ಮರ್ಡರ್ ನ ಹಿಂದಿನ ರಹಸ್ಯ ಸುವರ್ಣ ಎಫ್ ಐಆರ್ ನಲ್ಲಿ.

ಬೆಂಗಳೂರು (ಏ.21): ರಾಜಕೀಯ ದ್ವೇಷಕ್ಕಾಗಿ ಅದರಲ್ಲೂ ಕೇವಲ ನಗರಸಭೆಯ ಚುನಾವಣೆಯ ಕಾರಣಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ಕಾರ್ಯಕರ್ತರ ನಡುವೆ ನಡೆದ ಗ್ಯಾಂಗ್ ವಾರ್ ಒಬ್ಬನ ಸಾವಿನೊಂದಿಗೆ ಕೊನೆಯಾಗಿದೆ. ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತಮಂಜುನಾಥ ಬಡಾವಣೆಯ ಗಜೇಂದ್ರ ಸಿಂಗ್ ಸೊಲ್ಲಾಪುರ (30) (Gajendra Singh Sollapura) ಹತ್ಯೆಯಾದ ಯುವಕ.

ಚುನಾವಣೆ ಮುಗಿದು ವರ್ಷ ಕಳೆದರೂ, ಚುನಾವಣೆ ಸಂದರ್ಭದಲ್ಲಿ ಉಂಟಾದ ದ್ವೇಷದಿಂದ ನಡೆದ ಘಟನೆ ಇದಾಗಿದೆ. ಕಳೆದ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಜೇಂದ್ರ ಹಾಗೂ ಶಿವರಾಜ್ ಪೂಜಾರ್ ಅಲಿಯಾಸ್ (ಮೊಬೈಲ್ ಶಿವ್ಯಾ) (Shivraj Poojar alias Mobile Shivya)ಮಧ್ಯೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದು ನಂತರ ವಿಕೋಪಕ್ಕೆ ತಿರುಗಿದ್ದು ಮಾತಿಗೆ ಮಾತು ಬೆಳೆದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ, ಶಿವರಾಜ್ (Shivraj), ಮಲ್ಲೇಶ್ (Mallesh) ಎಂಬುವರನ್ನು ಬೆಟಗೇರಿಯ (Betagari) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಗಜೇಂದ್ರ ಅಲಿಯಾಸ್ ಗಣೇಶ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.

ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಯುವಕ ಯುವತಿಯರ ಮೊಬೈಲ್ ನಂಬರ್ ಸಂಗ್ರಹಿಸಿ, ಡಿಜಿಟಲ್ ಪ್ರಚಾರ ಮಾಡ್ಲಾಗ್ತಿತ್ತಂತೆ‌.. ಲೀಸ್ಟ್ ನಲ್ಲಿದ್ದ ಹುಡುಗಿಯರ ನಂಬರ್ ಇಟ್ಕೊಂಡು ಶಿವರಾಜ್ ಕಡೆಯ ಕೆಲ ಹುಡುಗ್ರು ಮೆಸೇಜ್ ಮಾಡೋದು ಮಾಡ್ತಿದ್ರಂತೆ. ಈ ವಿಚಾರವನ್ನ ಮನೆ ಬಳಿಯ ಓರ್ವ ಯುವತಿ ಗಜೇಂದ್ರನಿಗೆ ತಿಳಿಸಿದ್ಲಂತೆ. ಹೀಗಾಗಿ ಗಜೇಂದ್ರ ಆ ಯುವಕರನ್ನ ಕರೆದು ಬುದ್ಧಿ ಹೇಳಿದ್ರಂತೆ. ಇದ್ರಿಂದ ಕೆರಳಿದ್ದ ಶಿವು, ಗಜೇಂದ್ರ ಮೇಲೆ ಸಿಟ್ಟಾಗಿದ್ದ. ಹೀಗಾಗಿ ಹಲ್ಲೆ ಮಾಡಿದ್ದ ಅನ್ನೋ ಮಾತನ್ನ ಗಜೇಂದ್ರ ಕುಟುಂಬ ಹೇಳ್ತಿದೆ.
 

Video Top Stories