Asianet Suvarna News Asianet Suvarna News

Hubballi Violence: ಹುಬ್ಬಳ್ಳಿ ಹಿಂಸಾಚಾರದ ಹಿಂದಿನ 8 ರೋಚಕ ಸಿಕ್ರೇಟ್ಸ್‌!

ಕಳೆದ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ಹಠಾತ್ತನೆ ಸಂಭವಿಸಿದ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ಒಂದೊಂದೇ ದೃಶ್ಯಾವಳಿಗಳು ಹಾಗೂ ಧ್ವನಿ ಸಂದೇಶಗಳು ಬಹಿರಂಗವಾಗುತ್ತಿದ್ದು, ಇಡೀ ಘಟನೆ ಪೂರ್ವನಿಯೋಜಿತವಾಗಿತ್ತಾ?

ಹುಬ್ಬಳ್ಳಿ (ಏ.21): ಕಳೆದ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ಹಠಾತ್ತನೆ ಸಂಭವಿಸಿದ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ಒಂದೊಂದೇ ದೃಶ್ಯಾವಳಿಗಳು ಹಾಗೂ ಧ್ವನಿ ಸಂದೇಶಗಳು ಬಹಿರಂಗವಾಗುತ್ತಿದ್ದು, ಇಡೀ ಘಟನೆ ಪೂರ್ವನಿಯೋಜಿತವಾಗಿತ್ತಾ? ಕೆಲ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ವಾಣಿಜ್ಯ ನಗರಿ ಕಂಗೆಡುವಂತಾಯಿತಾ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿವೆ. ಮೆಕ್ಕಾ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿದಂತೆ ಎಡಿಟ್‌ ಮಾಡಿದ ವಿಡಿಯೋವೊಂದನ್ನು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದಲ್ಲಿಂದ ಆರಂಭವಾದ ವಿವಾದ ಏ.16ರ ಶನಿವಾರ ರಾತ್ರಿ ಭಾರೀ ಗಲಭೆ, ಕಲ್ಲು ತೂರಾಟ, ಹಿಂಸಾಚಾರ ಆಗುವ ಮಟ್ಟಿಗೆ ಮುಂದುವರಿದಿತ್ತು. 

ಹಳೇ ಹುಬ್ಬಳ್ಳಿ ಠಾಣೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಭೇಟಿ

ಪಿಎಸ್‌ಐ ಸೇರಿ 12 ಪೊಲೀಸರು ಗಾಯಗೊಂಡಿದ್ದರು. ದೇಗುಲವೊಂದರ ಮೇಲೂ ದಾಳಿ ನಡೆದಿತ್ತು. ಬಸ್ಸು, ಪೊಲೀಸ್‌ ಜೀಪು ಸೇರಿ 12 ವಾಹನಗಳು ಜಖಂಗೊಂಡಿದ್ದವು. ಶಾಂತವಾಗಿದ್ದ ಹುಬ್ಬಳ್ಳಿ ನಗರ ಕೆಲವೇ ತಾಸುಗಳಲ್ಲಿ ಉದ್ವಿಗ್ನತೆಯಿಂದ ಬೇಯುವಂತಾಯಿತು. ಹಾಗಾದರೆ ಅಲ್ಪಾವಧಿಯಲ್ಲಿ ಇಷ್ಟುದೊಡ್ಡ ಪ್ರಮಾಣದ ಗಲಭೆ ಸಂಭವಿಸಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ? ಎಂಬುದಕ್ಕೆ ಗಲಭೆ ಫೈಲ್ಸ್, ಇನ್‌ಸೈಡ್‌ ಮಿಸ್ಟರಿ ಹುಬ್ಬಳ್ಳಿ ಹಿಂಸಾಚಾರದ ಹಿಂದಿನ 8 ರೋಚಕ ಸಿಕ್ರೇಟ್ಸ್‌ ಅನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

Video Top Stories