Asianet Suvarna News Asianet Suvarna News

ಹಳೇ ಹುಬ್ಬಳ್ಳಿ ಠಾಣೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಮ್‌ ಭೇಟಿ

*    ಹಿಂಸಾಚಾರ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಅಬ್ದುಲ್‌ ಅಜೀಮ್‌ 
*   ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಇರಬೇಕು
*   ಸೌಹಾರ್ದತೆ ಬರೋವರೆಗೆ ದೇಶದಲ್ಲಿ ಶಾಂತಿ ಕಾಪಾಡೋದಕ್ಕೆ ಅಗೋದಿಲ್ಲ
 

ಹುಬ್ಬಳ್ಳಿ(ಏ.21): ಹಿಂಸಾಚಾರ ನಡೆದ ಹಳೇ ಹುಬ್ಬಳ್ಳಿ ಠಾಣೆಗೆ ಅಲ್ಪಸಂಖ್ಯಾತರ ಆಯೋಗದ ಆಧ್ಯಕ್ಷ ಅಬ್ದುಲ್‌ ಅಜೀಮ್‌ ಭೇಟಿ ನೀಡಿದ್ದಾರೆ.  ಹಿಂಸಾಚಾರ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಜನರಿಗೆ ಶಾಂತಿ ಸಂದೇಶ ಸಾರಲು ಬಂದಿದ್ದೇನೆ. ಆಯೋಗದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಇರಬೇಕು, ಸೌಹಾರ್ದತೆ ಬರೋವರೆಗೆ ದೇಶದಲ್ಲಿ ಶಾಂತಿ ಕಾಪಾಡೋದಕ್ಕೆ ಅಗೋದಿಲ್ಲ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ವರದಿಯನ್ನ ನೀಡುತ್ತೇನೆ ಅಂತ ಹೇಳಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಅಂತ ಅಬ್ದುಲ್‌ ಅಜೀಮ್‌ ತಿಳಿಸಿದ್ದಾರೆ. 

ಪ್ರೆಸ್‌ಕ್ಲಬ್‌ನಲ್ಲಿ ನವೀಕೃತ ಸಭಾಂಗಣ, ಮಾಧ್ಯಮ ಕೇಂದ್ರ, ಡಿಜಿಟಲ್‌ ಲೈಬ್ರರಿಗೆ ಚಾಲನೆ

Video Top Stories