'ಗಾರ್ಗಿ'ಯಾಗಿ ಕನ್ನಡ ಬರಲ್ಲ ಎನ್ನುವ ನಟಿಯರಿಗೆ ಟಾಂಗ್ ಕೊಟ್ಟ ಸಾಯಿ ಪಲ್ಲವಿ..!

ಕಾಲಿವುಡ್ ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಆಕ್ಟಿಂಗ್ , ಡ್ಯಾನ್ಸ್ , ಲುಕ್ ಎಲ್ಲಾ ವಿಚಾರದಲ್ಲಿಯೂ ಸೂಪರ್. ಇವರನ್ನು ಇಷ್ಟ ಇಲ್ಲ ಅನ್ನದವರಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಿಂಪ್ಲಿಸಿಟಿ ಹಾಗೂ ಅಭಿನಯದಿಂದ ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕಾಲಿವುಡ್ ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಆಕ್ಟಿಂಗ್ , ಡ್ಯಾನ್ಸ್ , ಲುಕ್ ಎಲ್ಲಾ ವಿಚಾರದಲ್ಲಿಯೂ ಸೂಪರ್. ಇವರನ್ನು ಇಷ್ಟ ಇಲ್ಲ ಅನ್ನದವರಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಿಂಪ್ಲಿಸಿಟಿ ಹಾಗೂ ಅಭಿನಯದಿಂದ ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ. ಇಷ್ಟು ದಿನ ಬೇರೆ ಭಾಷೆ ಸಿನಿಮಾ ನೋಡಿ ಸಾಯಿ ಪಲ್ಲವಿಯನ್ನ ಇಷ್ಟಪಡ್ತಿದ್ರು ಕನ್ನಡಿಗರು. ಆದ್ರೆ ಈಗ ಸಾಯಿ ಪಲ್ಲವಿ ಅಭಿನಯದ ಸಿನಿಮಾ ಕನ್ನಡದಲ್ಲಿಯೇ ರಿಲೀಸ್ ಆಗ್ತಿದೆ. ಇನ್ನು ವಿಶೇಷ ಅಂದ್ರೆ ತಮ್ಮ ಚಿತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದಾರೆ ಸಾಯಿ ಪಲ್ಲವಿ. 

ವೈರಲ್ ಆಗ್ತಿದೆ ಹುಡುಗನ ಜೊತೆ ಇರೋ ರಮ್ಯಾ ಫೋಟೋ; ಯಾರು ಆ ಹುಡುಗ.?

ಕನ್ನಡದ ನಟಿಯರೇ ತಮ್ಮ ಚಿತ್ರಗಳಿಗೆ ಡಬ್ಬಿಂಗ್ (Dubbing) ಮಾಡಲು ಹಿಂದು ಮುಂದು ನೋಡ್ತಾರೆ. ಆದ್ರೆ ಸಾಯಿ ಪಲ್ಲವಿ ತಮ್ಮ ಚಿತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ ಉಚ್ಛರಣೆ ಕಷ್ಟವಾದ್ರು ಕೂಡ ಹಠ ಬಿಡದೇ ಕಲಿತು ತಾವೇ ಡಬ್ ಮಾಡಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದು, ವಿಷ್ ಮಾಡಿದ ಅಭಿಮಾನಿಗಳಿಗೆ ರಿಟರ್ನ್ ಗಿಫ್ಟ್ ಆಗಿ ಗಾರ್ಗಿ ಮೇಕಿಂಗ್ ಅನ್ನು ನೀಡಿದ್ದಾರೆ. ಗಾರ್ಗಿ ನ್ಯಾಯಕ್ಕಾಗಿ ಹೋರಾಟ ಮಾಡುವ ಹೆಣ್ಣು ಮಗಳ ಕಥೆಯಾಗಿದ್ದು ಚಿತ್ರ ಮೂರು ಭಾಷೆಯಲ್ಲಿ ತೆರೆಗೆ ಬರ್ತಿದೆ...ಚಿತ್ರವನ್ನ ಗೌತಮ್ ಚಂದ್ರನ್ ನಿರ್ದೇಶಿಸಿದ್ದಾರೆ.


Related Video