ಮದುವೆ ಹೆಚ್ಚು ದಿನ ಬಾಳೋದಿಲ್ಲ ಎಂದಿದ್ದೇಕೆ ನಿಮ್ರಿತ್?: ಮುರಿದೇ ಹೋಯ್ತಾ ಅಭಿಷೇಕ್ -ಐಶ್ವರ್ಯ ದಾಂಪತ್ಯ?
ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ನಡುವಿನ ಬಿರುಕಿಗೆ ನಟಿ ನಿಮ್ರತ್ ಕೌರ್ ಕಾರಣ ಅನ್ನೋ ವದಂತಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ., ಈ ನಡುವೆ ಅಭಿಷೇಕ್ ಅಂಡ್ ನಿಮ್ರಿತ್ ಕ್ಲೋಸ್ ಆಗಿರೋ ಫೋಟೊವೊಂದು ವೈರಲ್ ಆಗಿದೆ.
ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ ನಡುವಿನ ಬಿರುಕಿಗೆ ನಟಿ ನಿಮ್ರತ್ ಕೌರ್ ಕಾರಣ ಅನ್ನೋ ವದಂತಿ ಇತ್ತೀಚಿಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ., ಈ ನಡುವೆ ಅಭಿಷೇಕ್ ಅಂಡ್ ನಿಮ್ರಿತ್ ಕ್ಲೋಸ್ ಆಗಿರೋ ಫೋಟೊವೊಂದು ವೈರಲ್ ಆಗಿದೆ. ಅಷ್ಟೇ ಅಲ್ಲ ಮದುವೆಗಳು ಹೆಚ್ಚು ದಿನ ಬಾಳಲ್ಲ ಅಂತ ನಿಮ್ರಿತ್ ಅಭಿಷೇಕ್ ಎದುರು ಹೇಳಿರೋ ಹಳೆ ವಿಡಿಯೋ ಕೂಡ ಸದ್ದು ಮಾಡ್ತಾ ಇದೆ. ಹಾಗಾದ್ರೆ ನಿಜಕ್ಕೂ ಜ್ಯೂ.ಬಚ್ಚನ್, ನಿಮ್ರತ್ ಜೊತೆ ರಿಲೇಷನ್ಶಿಪ್ನಲ್ಲಿದ್ದಾರಾ..? ಬಾಲಿವುಡ್ನ ತಾರಾ ಜೋಡಿ ಐಶ್ವರ್ಯ & ಅಭಿಷೇಕ್ ದಾಂಪತ್ಯದಲ್ಲಿ ಬಿರುಕು ಮೂಡೋದಕ್ಕೆ ನಟಿ ನಿಮೃತ್ ಕೌರ್ ಕಾರಣ ಅನ್ನೋ ಸುದ್ದಿ ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿದೆ.
ಅಸಲಿಗೆ 2022ರಲ್ಲಿ ದಸ್ವಿ ಅನ್ನೋ ಓಟಿಟಿ ಸಿನಿಮಾದಲ್ಲಿ ಅಭಿಷೇಕ್ ಜೊತೆಗೆ ನಿಮೃತ್ ನಟನೆ ಮಾಡಿದ್ಳು. ಆಗಿನಿಂದಲೇ ಅಭಿಷೇಕ್ ಜೊತೆಗೆ ನಿಮೃತ್ ಒಡನಾಟ ಶುರುವಾಗಿತ್ತು. ಇವರ ಲವ್ವಿ ಡವ್ವಿ ಕಾರಣದಿಂದಲೇ ಐಶ್ವರ್ಯ, ಅಭಿಷೇಕ್ರನ್ನ ತೊರೆದು ಪ್ರತ್ಯೇಕವಾಗಿ ವಾಸ ಮಾಡ್ತಾ ಇದ್ದಾರೆ ಅಂತ ಗಾಸಿಪ್ ಹರಿದಾಡ್ತಾ ಇದೆ. ಈ ನಡುವೆ ದಸ್ವಿ ಟೈಂನಲ್ಲಿ ಅಭಿಷೇಕ್ ಌಂಡ್ ನಿಮೃತ್ ಒಟ್ಟಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ರು. ಈ ಸಂದರ್ಭದಲ್ಲಿ ಮದುವೆ, ಮಕ್ಕಳು, ಸಿನಿಮಾ ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಅಭಿಷೇಕ್ ಬಚ್ಚನ್ ಮದುವೆಯ ಬಗ್ಗೆ ಮಾತನಾಡುತ್ತಲೇ ತಮ್ಮ ದಾಂಪತ್ಯದ ಬಗ್ಗೆಯೂ ಮಾತನಾಡಿದ್ರು. ಆಗ ನಿಮ್ರತ್ "ಮದುವೆಗಳು ಹೆಚ್ಚು ಕಾಲ ಉಳಿಯೋದಿಲ್ಲ" ಅಂತ ವ್ಯಂಗ್ಯ ಮಾಡಿದ್ರು.
ಅಭಿಷೇಕ್ ಕೂಡ ನಿಮೃತ್ ಮಾತಿಗೆ ನಕ್ಕು ಧನ್ಯವಾದಗಳು ಅಂತ ತಮಾಷೆಯಾಗಿ ಹೇಳಿದ್ದರು. ಆಗ ಇದು ತಮಾಷೆಯಾಗಿ ಕಂಡಿದ್ದರೂ ಈಗ ನಿಮ್ರತ್ ಮಾತು ವೈರಲ್ ಆಗ್ತಾ ಇವೆ. ಆವತ್ತು ನಿಮೃತ್ ಹೀಗೇಕೆ ಹೇಳಿದ್ರು ಅನ್ನೋದ್ರ ಬಗ್ಗೆ ಜೋರಾಗಿ ಚರ್ಚೆಯಾಗ್ತಾ ಇದೆ. ಅಷ್ಟೊತ್ತಿಗಾಗಲೇ ಅಭಿಷೇಕ್-ನಿಮೃತ್ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. ಅದೇ ಕಾರಣಕ್ಕೆ ನಿಮೃತ್ ಹೀಗೆ ಹೇಳಿದ್ರು ಅಂತ ಫ್ಯಾನ್ಸ್ ಕಾಮೆಂಟ್ ಮಾಡ್ತಾ ಇದ್ದಾರೆ. ಈ ನಡುವೆ ಅಭಿಷೇಕ್ ಮತ್ತು ನಿಮೃತ್ ತುಂಬಾನೇ ಕ್ಲೋಸ್ ಆಗಿರೋ ಡೀಪ್ ಫೇಕ್ ಫೋಟೋವೊಂದು ಕೂಡ ವೈರಲ್ ಅಗಿದ್ದು ಎಲ್ಲೆಡೆ ಓಡಾಡ್ತಾ ಇದೆ. ಒಟ್ನಲ್ಲಿ ಐಶ್ವರ್ಯ ರೈ - ಅಭಿಷೇಕ್ ಡಿವೋರ್ಸ್ ಕಹಾನಿ ಓಡಾಡೋದಕ್ಕೆ ಶುರುವಾಗಿ ತುಂಬಾ ದಿನಗಳಾಯ್ತು. ಈಗ ಈ ಕಹಾನಿಯಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇದರ ಅಸಲೀಯತ್ತೇನು ಅನ್ನೋದು ಹೊರಗೆ ಬರಬೇಕಿದೆ.