ಬಿಗ್ ಬಾಸ್ ಮಾಜಿ ಸ್ಪರ್ಧಿ ಆರೋಗ್ಯ ಕ್ಷೀಣಿಸದೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸ್ಪರ್ಧಿ 5ನೇ ಸುತ್ತಿನ ಕೀಮೋ ಥೆರಪಿ ಬಳಿಕ ಆರೋಗ್ಯ ಹದಗೆಟ್ಟಿದ್ದು, ಐಸಿಯುವಿಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ.
ಕೋಟಯಂ (ಸೆ.23) ಬಿಗ್ ಬಾಸ್ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಅಪಾರ ಅಭಿಮಾನಿ ಬಳಗ ಸೃಷ್ಟಿಸಿರುವ ರೇಣು ಸುಧಿ (ರೇಶ್ಮಾ ಪಿ ಥಂಕಚ್ಚನ್) ಆರೋಗ್ಯ ಹದಗೆಟ್ಟಿದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೇಣು ಸುಧಿ ಕೀಮೋ ಥೆರಪಿಗೆ ಒಳಗಾಗಿದ್ದರು. 5ನೇ ಸುತ್ತಿನ ಕೀಮೋ ಥೆರಪಿ ಬಳಿಕ ರೇಣು ಸುಧಿ ಅಸ್ವಸ್ಥರಾಗಿದ್ದಾರೆ. ಪರಿಣಾಮ ರೇಣು ಸುಧಿಯನ್ನು ಆಸ್ಪತ್ರೆಯ ತೀವ್ರ ನಿಘಾ ಘಟಕಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಲೆಯಾಳಂ ಬಿಗ್ ಬಾಸ್ 7 ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರೇಣು ಸುಧಿಗೆ ಚಿಕಿತ್ಸೆ ಮುಂದುವರಿದಿದೆ. ಇದರ ನಡುವೆ ಸಹ ಸ್ಪರ್ಧಿ ಸಾರಿಕಾ ಕೆಬಿ ಮಾಹಿತಿ ನೀಡಿದ್ದಾರೆ.
ಸಾರಿಕೆ ಕೆಬಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ರೇಣು ಸುಧಿ ಆರೋಗ್ಯ ಆಪ್‌ಡೇಟ್ ನೀಡಿದ್ದಾರೆ. ರೇಣು ಸುಧಿಗೆ ಕ್ಯಾನ್ಸರ್ ಚಿಕಿತ್ಸೆ ನಡೆಯುತ್ತಿತ್ತು. ಇದರ ನಡುವೆ 5ನೇ ಸುತ್ತಿನ ಕೀಮೋ ಥೆರಪಿ ಬಳಿಕ ರೇಣು ಸುಧಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ರೇಣು ಸುಧಿಯನ್ನು ಕೋಟಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ಗಂಭೀರವಾಗಿದೆ
ರೇಣು ಸುಧಿ ಅವರ ಅಭಿಮಾನಿಗಳಿಗೆ ಈ ಮಾಹಿತಿ ನೀಡಲೇಬೇಕಾಗಿದೆ. ರೇಣು ಸುಧಿ ಸದ್ಯದ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಗೆಳತಿ ಸಾರಿಕೆ ಕೆಬಿ ಮಾಹಿತಿ ನೀಡಿದ್ದಾರೆ. ಪ್ಲೇಟ್‌ಲೆಟ್ ಕೌಂಡ್ ಗಣನೀಯವಾಗಿ ಕುಸಿದಿದೆ. ಕೀಮೋ ಥೆರಪಿ ನಡುವೆ ರೇಣು ಸುಧಿ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದರು. ಆದರೆ 5ನೇ ಸುತ್ತಿನ ಕೀಮೋ ಬಳಿಕ ಸಂಪೂರ್ಣ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು ರೇಣು ಸುಧಿಗಾಗಿ ಪ್ರಾರ್ಥಿಸಿ ಎಂದು ಸಾರಿಕಾ ಮನವಿ ಮಾಡಿದ್ದಾರೆ.
ಮತ್ತೊಂದು ಸುತ್ತಿನ ಕೀಮೋ ಸಾಧ್ಯವಿಲ್ಲ
ಆಸ್ಪತ್ರೆ ಮೂಲಗಳ ಪ್ರಕಾರ ರೇಣು ಸುದ್ಧಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ರೇಣು ಸುಧಿಗೆ ಮತ್ತೊಂದು ಸುತ್ತಿ ಕೀಮೋ ಥೆರಪಿ ನೀಡಲು ಅಸಾಧ್ಯ. ಅವರ ದೇಹ ತಡೆದುಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಈ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಳು ಸಾಧ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ರೇಣು ಸುಧಿಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ PICC ಲೈನ್ ಅಳವಡಿಕೆ ಮಾಡಲಾಗಿದೆ.
ನೋವಿನಲ್ಲೇ ಮುಳುಗಿದ ಕುಟುಂಬ
ರೇಣು ಸುಧಿ ಖ್ಯಾತ ಮಳೆಯಾಂ ಕಾಮಿಡಿ ನಟ ಕೊಲ್ಲಂ ಸುಧಿ ಪತ್ನಿ. 2023ರ ರಸ್ತೆ ಅಪಘಾತದಲ್ಲಿ ಕೊಲ್ಲಂ ಸುಧಿ ಮೃತಪಟ್ಟಿದ್ದಾರೆ. ಕೊಲ್ಲಂ ಸುಧಿ ನಿಧನದ ಬಳಿಕ ಜೀವನ ಸಾಗಿಸಲು ಸೋಶಿಯಲ್ ಮೀಡಿಯಾ ಮೂಲಕ ಕಂಟೆಂಟ್ ಕ್ರಿಯೇಟರ್ ಆಗಿ ಮಿಂಚಲು ಆರಂಭಿಸಿದ ರೇಣು ಸುಧಿ ಬಳಿಕ ಬಿಗ್ ಬಾಸ್ 7ನೇ ಆವೃತ್ತಿಯಲ್ಲೂ ಕಾಣಿಸಿಕೊಂಡಿದ್ದರು. 2026ರ ಜೂನ್ ತಿಂಗಳಲ್ಲಿ ರೇಣು ಸುಧಿ ಕ್ಯಾನ್ಸರ್ ಸಮಸ್ಯೆಗೆ ತುತ್ತಾಗಿರುವುದಾಗಿ ಬಹಿರಂಗಪಡಿಸಿದ್ದರು.


