MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • TV Talk
  • BBK13: ಬಿಗ್ ಬಾಸ್ ಮನೇಲಿ Emergency Alert! 14 ಕಂಟೆಸ್ಟೆಂಟ್‌ಗಳಿಗೆ ಮನೆಯಿಂದ ಹೊರಹೋಗಲು ಕಿಚ್ಚ ನಾಮಿನೇಟ್!

BBK13: ಬಿಗ್ ಬಾಸ್ ಮನೇಲಿ Emergency Alert! 14 ಕಂಟೆಸ್ಟೆಂಟ್‌ಗಳಿಗೆ ಮನೆಯಿಂದ ಹೊರಹೋಗಲು ಕಿಚ್ಚ ನಾಮಿನೇಟ್!

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಇದೇ ಮೊದಲ ಬಾರಿಗೆ ಎಮರ್ಜೆನ್ಸಿ ಅಲಾರಂ ಮೊಳಗಿದ್ದು, ಸ್ಪರ್ಧಿಗಳು ಆತಂಕಕ್ಕೊಳಗಾಗಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲರನ್ನೂ ನಾಮಿನೇಟ್ ಮಾಡಿದ್ದು, ಯಾರು ಬೇಕಾದರೂ ಹೊರಹೋಗಬಹುದು ಎಂದು ಎಚ್ಚರಿಸಿದ್ದಾರೆ.

2 Min read
Author : Sathish Kumar KH
Published : Sep 21 2026, 10:59 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : @ColorsKannada

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 13ರ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಎಮರ್ಜೆನ್ಸಿ ಅಲರ್ಟ್ ಆಗುತ್ತಿದೆ. ನಿದ್ದೆಯ ಮಂಪರಿನಲ್ಲಿದ್ದ ಎಲ್ಲ ಸ್ಪರ್ಧಿಗಳಿಗೆ ಇದು ಶಾಕ್ ಆಗಿದ್ದು, ದಡಬಡನೇ ಎದ್ದು ಏನಾಗುತ್ತಿದೆ ಎಂದು ಮನೆಯಿಂದ ಹೊರಗೆ ಓಡಲು ಸಿದ್ಧರಾಗಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಬರುವ ಕಿಚ್ಚ ಸುದೀಪ್ ಅವರು ಎಮರ್ಜೆನ್ಸಿ ಘೋಷಣೆ ಮಾಡಿ ಎಲ್ಲರೂ ಮನೆಯಿಂದ ಹೊರಗೆ ಹೋಗಬಹುದು ಎಂಬ ಮುನ್ನೆಚ್ಚರಿಕೆ ಕೊಟ್ಟು ಮಾಯವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : @ColorsKannada

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ಹದಿನೈದು ದಿನಗಳು ಕಳೆದಿವೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ರಿಯಾಲಿಟಿ ಶೋ ನಡೆಸುತ್ತಿದ್ದ ವೇದಿಕೆಯಲ್ಲಿ ಎಮರ್ಜೆನ್ಸಿ ಅಲಾರಂ ಬಡಿದುಕೊಂಡಿದೆ. ಇಡೀ ಮನೆ ಸಂಪೂರ್ಣವಾಗಿ ಕೆಂಪು ಬಣ್ಣದ ಲೈಟ್‌ನಲ್ಲಿ ಅಪಘಾತ ಸಂಭವಿಸುವ ಮುನ್ನೆಚ್ಚರಿಕೆಯನ್ನು ನೀಡಿದೆ.

Related Articles

Related image1
BBK 13: ಜಗಳಗಳ ನಡುವೆ ನಗೆಯ ಕಚಗುಳಿ ಇಡಲು ಬರ್ತಿದ್ದಾರಾ ಪ್ರಶಾಂತ್ ಗೌಡ? ವೈರಲ್ ಆಯ್ತು ಪೋಸ್ಟ್!
Related image2
ಮಲ್ಲಮ್ಮ ಬಿಗ್ ಬಾಸ್ ಮನೆಗೆ ಹೋಗಲು ಕಾರಣರಾಗಿದ್ದ Rishi Design ಫೌಂಡರ್ ಪಲ್ಲವಿ ಇನ್ನಿಲ್ಲ
36
Image Credit : @ColorsKannada

ಎಮರ್ಜೆನ್ಸಿ ಅಲಾರಂನಿಂದಾಗಿ ಎಲ್ಲರೂ ಗಾಬರಿಗೊಂಡು ಮಲಗಿದ್ದ ಸ್ಥಳದಿಂದ ಎದ್ದು ಹೊರಗೆ ಓಡಿ ಬಂದು ಲಿವಿಂಗ್ ಏರಿಯಾದಲ್ಲಿ ಭಯದಲ್ಲಿಯೇ ನಿಂತುಕೊಂಡಿದ್ದಾರೆ. ಮುಂದೆ ಏನಾಗುತ್ತದೆ ಎಂಬ ಭಯದಿಂದ ಕುಳಿತುಕೊಂಡು, ಎಲ್ಲರೂ ಏನಾಯ್ತು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಯಾರಿಂದರೂ ಸರಿಯಾದ ಉತ್ತರ ಸಿಕ್ತಿಲ್ಲ. ನನಗೇನೂ ಗೊತ್ತಿಲ್ಲ ಎಂಬ ಉತ್ತರವೇ ಬಂದಿದೆ.

46
Image Credit : @ColorsKannada

ಆಗ, ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ ನಿರೂಪಕ ಕಿಚ್ಚ ಸುದೀಪ್ ಅವರು, ಈ ಒಂದು ಪ್ರಯಾಣದಲ್ಲಿ ಒಂದು ಎಮರ್ಜೆನ್ಸಿ ಬಂದಿದೆ. ಈ ವಾರ ಈ ಬಿಗ್ ಬಾಸ್ ಮನೆಯಲ್ಲಿ ಯಾರೂ ಉಳಿಯೋದು ಗ್ಯಾರಂಟಿ ಇಲ್ಲ. ಪ್ರತೀ ಕಂಟೆಸ್ಟೆಂಟ್‌ಗಳನ್ನು ನಾವೇ ಖುದ್ದಾಗಿ ನಾಮಿನೇಟ್ ಮಾಡ್ತಿದ್ದೇವೆ. ಈ ವಾರ ಯಾವಾಗ, ಏನು ಬೇಕಾದರೂ ಆಗಬಹುದು. ನೀವೆಲ್ಲರೂ ಈ ಎಮರ್ಜೆನ್ಸಿಯಲ್ಲಿ ಹೊರಗೆ ಹೋಗುವುದಕ್ಕೆ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.

56
Image Credit : @ColorsKannada

ಒಂದು ಕ್ಷಣ ಕಿಚ್ಚ ಸುದೀಪ್ ಅವರ ಮಾತುಗಳನ್ನು ಕೇಳಿದ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳು ದಂಗಾಗಿ ಹೋಗಿದ್ದಾರೆ. ಈ ಮನೆಗೆ ಬಂದು ಕೇವಲ 2 ವಾರಗಳು ಮುಕ್ತಾಯಗೊಂಡ ಬೆನ್ನಲ್ಲಿಯೇ ಇಂತಹದ್ದೊಂದು ತಿರುವನ್ನು ನೋಡುತ್ತೇವೆಂದು ಕನಸು, ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ವಿಮಾನದ ಪ್ರಯಾಣಿಕರಾಗಿ ಬಿಗ್ ಬಾಸ್ ಮನೆಯೊಳಗೆ ಬಂದ ಸ್ಪರ್ಧಿಗಳು ಇದೀಗ, ಎಮರ್ಜೆನ್ಸಿಗೆ ಸಿಕ್ಕು ನಲುಗುತ್ತಿದ್ದಾರೆ.

66
Image Credit : @Colors Kannada

ಇನ್ನು ಕಿಚ್ಚನ 2ನೇ ವಾರದ ಪಂಚಾಯಿತಿ ವೇಳೆ ಬಿಗ್ ಬಾಸ್ ಮನೆಯಿಂದ ಮಾಡ್ರನ್ ಮಹಾಕವಿ ಮಂಜು ಹಾಗೂ ಕಿರಣ್ ಶಾಸ್ತ್ರಿ ಇಬ್ಬರನ್ನೂ ಎಲಿಮಿನೆಟ್ ಮಾಡಿ ಹೊರಗೆ ಕಳುಹಿಸಲಾಗಿತ್ತು. ಆದರೆ, ಮಂಜು ಮಾತ್ರ ಮನೆಯ ಒಳಗೆ ವಾಪಸ್ ಬಂದಿದ್ದಾರೆ. ಕಿರಣ್ ಶಾಸ್ತ್ರಿ ಮನೆಯೊಳಗೆ ಬಂದಿಲ್ಲ. ಅವರನ್ನು ಸೀಕ್ರೆಟ್ ರೂಮಿಗೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಕಾರಣ ಈ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದರೂ ಎಲಿಮಿನೇಟ್ ಆಗುವುದಿಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಸ್ಪಷ್ಟಪಡಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಲರ್ಸ್ ಕನ್ನಡ
ರಿಯಾಲಿಟಿ ಶೋ
 

Latest Videos
Recommended Stories
Recommended image1
BBK 13: ಜಗಳಗಳ ನಡುವೆ ನಗೆಯ ಕಚಗುಳಿ ಇಡಲು ಬರ್ತಿದ್ದಾರಾ ಪ್ರಶಾಂತ್ ಗೌಡ? ವೈರಲ್ ಆಯ್ತು ಪೋಸ್ಟ್!
Recommended image2
ನಟಿ ಕೃಷಿ ತಾಪಂಡ ಮತ್ತೊಬ್ಬ ಆತ್ಮೀಯರ ಅಗಲಿಕೆ; ಗೆಳೆಯನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್, ಭಾವುಕ ಪೋಸ್ಟ್!
Recommended image3
Bigg Boss ವೇದಿಕೆ ಮೇಲೆಯೇ ಸಲ್ಮಾನ್​ ಖಾನ್​ಗೆ ಹೃದಯಾಘಾತ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್​​- ಅಸಲಿಗೆ ಆಗಿದ್ದೇನು
Related Stories
Recommended image1
BBK 13: ಜಗಳಗಳ ನಡುವೆ ನಗೆಯ ಕಚಗುಳಿ ಇಡಲು ಬರ್ತಿದ್ದಾರಾ ಪ್ರಶಾಂತ್ ಗೌಡ? ವೈರಲ್ ಆಯ್ತು ಪೋಸ್ಟ್!
Recommended image2
ಮಲ್ಲಮ್ಮ ಬಿಗ್ ಬಾಸ್ ಮನೆಗೆ ಹೋಗಲು ಕಾರಣರಾಗಿದ್ದ Rishi Design ಫೌಂಡರ್ ಪಲ್ಲವಿ ಇನ್ನಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved