MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • TV Talk
  • ಮಿಡ್-ವೀಕ್ ಶಾಕ್! ಬಿಗ್ ಬಾಸ್ ಮಾಸ್ಟರ್ ಮೈಂಡ್‌ಗಳು ಸೀಕ್ರೆಟ್ ರೂಮ್‌ನಲ್ಲಿ? ಮನೆಮಂದಿಗೆ ಕಾದಿದೆ ದೊಡ್ಡ ಟ್ವಿಸ್ಟ್!

ಮಿಡ್-ವೀಕ್ ಶಾಕ್! ಬಿಗ್ ಬಾಸ್ ಮಾಸ್ಟರ್ ಮೈಂಡ್‌ಗಳು ಸೀಕ್ರೆಟ್ ರೂಮ್‌ನಲ್ಲಿ? ಮನೆಮಂದಿಗೆ ಕಾದಿದೆ ದೊಡ್ಡ ಟ್ವಿಸ್ಟ್!

ಬಿಗ್ ಬಾಸ್ ಕನ್ನಡ ಸೀಸನ್ 13' ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಸ್ಪರ್ಧಿಗಳ ನಡುವಿನ ಕಿತ್ತಾಟ, ಭಿನ್ನಾಭಿಪ್ರಾಯ, ಟಾಸ್ಕ್‌ನಂತಹ ಪೈಪೋಟಿ ಸೇರಿದಂತೆ ಮನೆಯೊಳಗಿನ ಪ್ರತಿಯೊಂದು ಬೆಳವಣಿಗೆಯೂ ಸೋಶಿಯಲ್ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

2 Min read
Author : Sushma Hegde
Published : Sep 21 2026, 11:05 AM IST
Share this Photo Gallery
  • FB
  • TW
  • Linkdin
  • Whatsapp
14
ಬಿಗ್ ಬಾಸ್ ಕನ್ನಡ ಸೀಸನ್ 13
Image Credit : ‍X

ಬಿಗ್ ಬಾಸ್ ಕನ್ನಡ ಸೀಸನ್ 13

'ಬಿಗ್ ಬಾಸ್ ಕನ್ನಡ ಸೀಸನ್ 13' ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಸ್ಪರ್ಧಿಗಳ ನಡುವಿನ ಕಿತ್ತಾಟ, ಭಿನ್ನಾಭಿಪ್ರಾಯ, ಟಾಸ್ಕ್‌ನಂತಹ ಪೈಪೋಟಿ ಸೇರಿದಂತೆ ಮನೆಯೊಳಗಿನ ಪ್ರತಿಯೊಂದು ಬೆಳವಣಿಗೆಯೂ ಸೋಶಿಯಲ್ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಈ ವಾರದ ಎಲಿಮಿನೇಷನ್ ದೃಶ್ಯಾವಳಿಗೆ ಭಾರೀ ಕುತೂಹಲ ಮೂಡಿಸಿದೆ.

ಒಬ್ಬರಲ್ಲ.. ಇಬ್ಬರು ಸ್ಪರ್ಧಿಗಳು ಔಟ್!

ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಇಬ್ಬರು ಸ್ಪರ್ಧಿಗಳು ಆಟದಿಂದ ಹೊರಬಂದಿದ್ದಾರೆ. ನಾಮಿನೇಟ್ ಆಗಿದ್ದ ಸ್ಪರ್ಧಿಗಳ ಮೇಲಕ್ಕೆ ಅವಿನಾಶ್, ವೈಷ್ಣವಿ, ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ ಅವರಿಗೆ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆಗೆ ಒಳಪಡಿಸಲಾಯಿತು. ಈ ನಾಲ್ವರನ್ನು ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿದ 'ಬಿಗ್ ಬಾಸ್', ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ವೇಳೆ ಸ್ಪರ್ಧಿಗಳು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಕನ್ನಡಿ ಒಡೆದು ಶಾಕ್ ಕೊಟ್ಟ ಬಿಗ್ ಬಾಸ್!
Image Credit : Colors Kannada

ಕನ್ನಡಿ ಒಡೆದು ಶಾಕ್ ಕೊಟ್ಟ ಬಿಗ್ ಬಾಸ್!

ಬಳಿಕ ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ ಅವರ ಸರದಿ ಬಂದಿತ್ತು. ಇಬ್ಬರೂ ಕನ್ನಡಿ ಮುಂದೆ ನಿಂತು ತಮ್ಮ ಮನದ ಮಾತು ಹೇಳಿಕೊಳ್ಳುತ್ತಿರುವುದು ಅಚ್ಚರಿಯ ಬೆಳವಣಿಗೆ. ಇಬ್ಬರೂ ನಿಂತಿದ್ದ ಕನ್ನಡಿಗಳು ಏಕಾಏಕಿ ಒಡೆದು ಚೂರುಚೂರಾದವು. ಕನ್ನಡಿ ಒಡೆಯುವಂತೆ ಕಿರಣ್ ಶಾಸ್ತ್ರಿ ಹಾಗೂ ಮಾಡ್ರನ್ ಮಹಾಕವಿ ಮಂಜ ಆಟದಿಂದ ಹೊರಬೀಳಬೇಕಿತ್ತು. ಕಿರಣ್ ಶಾಸ್ತ್ರಿ ಭಾವುಕರಾಗಿ ಬಿಗ್ ಬಾಸ್ ಮನೆಯಿಂದ ಹೊರನಡೆದರೆ, ಮಂಜ ಅವರು 'ಮತ್ತೆ ಬರ್ತೇನೆ' ಎನ್ನುವ ಮಾತಿನಲ್ಲಿ ಎಕ್ಸಿಟ್ ಆಗಿ ಮತ್ತೆ ಪ್ರೊಮೊದಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಇದು ನಿಜವಾದ ಎಲಿಮಿನೇಷನ್ ಅಲ್ಲವೇ?

ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿರುವುದು ಕಂಡು ಮನೆಯ ಸದಸ್ಯರು, ವೀಕ್ಷಿಸಿ ಶಾಕ್ ಆಗಿದ್ದಾರೆ. ಆದರೆ ಇಲ್ಲಿಯೇ 'ಬಿಗ್ ಬಾಸ್' ದೊಡ್ಡ ಟ್ವಿಸ್ಟ್ ಇರುವ ಸಾಧ್ಯತೆಯಿದೆ. ಅಸಲಿ ವಿಷಯ ಏನೆಂದರೆ, ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್ ಮಹಾಕವಿ ಮಂಜ ಅವರು ಎಲಿಮಿನೇಟ್ ಆದ ಬಳಿಕ ನೇರವಾಗಿ ಮುಖ್ಯ ವೇದಿಕೆಗೆ ಬಂದಿಲ್ಲ. ಹೀಗಾಗಿ ಇವರಿಬ್ಬರ ಎಲಿಮಿನೇಷನ್ ನಿಜವೇ ಅಥವಾ ಫೇಕ್ ಎಲಿಮಿನೇಷನ್ ಆಗಿದೆಯೇ ಎಂಬ ಅನುಮಾನ ಮೂಡಿದೆ.

34
ಸೀಕ್ರೆಟ್ ರೂಮ್ನಲ್ಲಿ ಇರಿಸಿದ್ದಾರಾ?
Image Credit : Insatgram

ಸೀಕ್ರೆಟ್ ರೂಮ್ನಲ್ಲಿ ಇರಿಸಿದ್ದಾರಾ?

ಇಬ್ಬರೂ ಅಧಿಕೃತವಾಗಿ ಎಲಿಮಿನೇಟ್ ಆಗದಿರುವುದು ಗಮನಿಸಿದರೆ, ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಬಹುದೇ ಎಂಬ ಚರ್ಚೆ ಶುರುವಾಗಿದೆ. ಸೀಕ್ರೆಟ್ ರೂಮ್ ಟ್ವಿಸ್ಟ್‌ನಲ್ಲಿ ಎಲಿಮಿನೇಟ್ ಆದಂತೆ ತೋರಿಸಲಾದ ಸ್ಪರ್ಧಿಗಳು ಮತ್ತೆ ಮನೆಯ ಆಟಕ್ಕೆ ಮರಳುವ ಅವಕಾಶ ಇರುತ್ತದೆ. ಅಲ್ಲಿ ಇದ್ದುಕೊಂಡೇ ಮನೆಯೊಳಗಿನ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ಆಟಕ್ಕೆ ತಂತ್ರ ರೂಪಿಸುವ ಅವಕಾಶವೂ ಸಿಗುತ್ತದೆ. ಹೀಗಾಗಿ ಕಿರಣ್ ಶಾಸ್ತ್ರಿ ಮತ್ತು ಮಂಜ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ? ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

44
ಸೀಸನ್ 12ರಲ್ಲೂ ನಡೆದಿತ್ತು ಇದೇ ರೀತಿಯ ಟ್ವಿಸ್ಟ್!
Image Credit : others

ಸೀಸನ್ 12ರಲ್ಲೂ ನಡೆದಿತ್ತು ಇದೇ ರೀತಿಯ ಟ್ವಿಸ್ಟ್!

'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲೂ ಇದೇ ರೀತಿಯ ಫೇಕ್ ಎಲಿಮಿನೇಷನ್ ಮತ್ತು ಸೀಕ್ರೆಟ್ ರೂಮ್ ಟ್ವಿಸ್ಟ್ ನಡೆದಿತ್ತು. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಎಲಿಮಿನೇಟ್ ಆದಂತೆ ತೋರಿಸಿ ಸೀಕ್ರೆಟ್ ರೂಮ್‌ನಲ್ಲಿ ಇರಿಸಲಾಗಿದೆ. ಸೀಕ್ರೆಟ್ ರೂಮ್‌ನಲ್ಲಿ ಮನೆಯೊಳಗಿನ ಆನಂದ ವೀಕ್ಷಿಸಲು. ಆದರೆ ಧ್ರುವಂತ್ ಜೊತೆ ಸೀಕ್ರೆಟ್ ರೂಮ್‌ನಲ್ಲಿ ಇರಬೇಕಾದ ಪರಿಸ್ಥಿತಿ ರಕ್ಷಿತಾ ಅವರಿಗೆ ಬೇಸರ ತಂದಿತ್ತು ಎಂಬುದೂ ಆಗ ಚರ್ಚೆಯಾಗಿತ್ತು. ಹೀಗಾಗಿ ಸೀಸನ್ 13ರಲ್ಲೂ ಇದೇ ಮಾದರಿಯ ಟ್ವಿಸ್ಟ್ ಮುಂದುವರಿದಿದೆಯೇ ಎಂಬ ಕುತೂಹಲವಿದೆ. ಕಿರಣ್ ಶಾಸ್ತ್ರಿ ಮತ್ತು ಮಂಜ ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರಾ? ಅಥವಾ ಸೀಕ್ರೆಟ್ ರೂಮ್‌ನಲ್ಲಿ ಕುಳಿತು ಆಟ ನೋಡುತ್ತಿದ್ದಾರಾ? ಈ ಕುತೂಹಲಕ್ಕೆ ಮುಂದಿನ ಎಪಿಸೋಡ್‌ನಲ್ಲಿ ಉತ್ತರ ಸಿಗಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
BBK13: ಬಿಗ್ ಬಾಸ್ ಮನೇಲಿ Emergency Alert! 14 ಕಂಟೆಸ್ಟೆಂಟ್‌ಗಳಿಗೆ ಮನೆಯಿಂದ ಹೊರಹೋಗಲು ಕಿಚ್ಚ ನಾಮಿನೇಟ್!
Recommended image2
BBK 13: ಜಗಳಗಳ ನಡುವೆ ನಗೆಯ ಕಚಗುಳಿ ಇಡಲು ಬರ್ತಿದ್ದಾರಾ ಪ್ರಶಾಂತ್ ಗೌಡ? ವೈರಲ್ ಆಯ್ತು ಪೋಸ್ಟ್!
Recommended image3
ನಟಿ ಕೃಷಿ ತಾಪಂಡ ಮತ್ತೊಬ್ಬ ಆತ್ಮೀಯರ ಅಗಲಿಕೆ; ಗೆಳೆಯನ ಸಾವಿನ ಬೆನ್ನಲ್ಲೇ ಮತ್ತೊಂದು ಶಾಕ್, ಭಾವುಕ ಪೋಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved