MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Anant Nag Dada Saheb Phalke
Renuka Swamy Case Update
CM DK Shivakumar on KPSC
Upper Bhadra Project
Bengaluru-Mangaluru Vande Bharat
Karnataka Lokayukta Raids
Bengaluru Property Records
Archaeological Discovery Karnataka
Trump’s Greenland Agreement
MLA Suresh Gowda Daughter
IMD Weather Forecast
  • Home
  • Entertainment
  • TV Talk
  • ಟಾಕ್ ಆಫ್ ದಿ ಟೌನ್ ಆಯ್ತು ‘ಜಗದ್ಧಾತ್ರಿ’... ಜಾಣ ವೀಕ್ಷಕರು ಹೇಳಿದ್ದು ಅದೊಂದೇ ಕಿವಿ ಮಾತು

ಟಾಕ್ ಆಫ್ ದಿ ಟೌನ್ ಆಯ್ತು ‘ಜಗದ್ಧಾತ್ರಿ’... ಜಾಣ ವೀಕ್ಷಕರು ಹೇಳಿದ್ದು ಅದೊಂದೇ ಕಿವಿ ಮಾತು

Jagaddhatri Kannada serial: ಕನ್ನಡ ಕಿರುತೆರೆಯ ಬಹುನಿರೀಕ್ಷಿತ ‘ಜಗದ್ಧಾತ್ರಿ’ ಧಾರಾವಾಹಿಯ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಸದ್ಯ ಈ ಸೀರಿಯಲ್‌ನ ಪ್ರೊಮೊ ಸಿನಿಮಾ ಟ್ರೈಲರ್‌ನಂತೆ ಧೂಳೆಬ್ಬಿಸುತ್ತಿದ್ದು, ಕಿರುತೆರೆ ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

2 Min read
Author : Ashwini HR
Published : Sep 23 2026, 11:58 AM IST
Share this Photo Gallery
  • FB
  • TW
  • Linkdin
  • Whatsapp
14
ಸಖತ್ ಸದ್ದು ಮಾಡುತ್ತಿದೆ ಹೊಸ ಪ್ರೊಮೊ
Image Credit : Instagram

ಸಖತ್ ಸದ್ದು ಮಾಡುತ್ತಿದೆ ಹೊಸ ಪ್ರೊಮೊ

ಕನ್ನಡ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ‘ಜಗದ್ಧಾತ್ರಿ’ ಧಾರಾವಾಹಿ ಪ್ರಸಾರದ ದಿನಾಂಕ ಫೈನಲ್ ಆಗಿದೆ. ಇದೇ ಸೆಪ್ಟೆಂಬರ್ 28 ರಿಂದ ಈ ಬಹುನಿರೀಕ್ಷಿತ ಧಾರಾವಾಹಿ ಪ್ರಸಾರವಾಗಲಿದೆ ಎಂದು ವಾಹಿನಿ ಅಧಿಕೃತವಾಗಿ ಘೋಷಿಸಿದೆ. ಪ್ರಸಾರದ ದಿನಾಂಕ ಪ್ರಕಟವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ‘ಜಗದ್ಧಾತ್ರಿ’ಯ ಹೊಸ ಪ್ರೊಮೊ ಸಖತ್ ಸದ್ದು ಮಾಡುತ್ತಿದ್ದು, ಸದ್ಯ ‘ಟಾಕ್ ಆಫ್ ದಿ ಟೌನ್’ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಬಿಗ್ ಬಜೆಟ್ ಸಿನಿಮಾ ಟ್ರೈಲರ್‌ನಾ?
Image Credit : Instagram

ಬಿಗ್ ಬಜೆಟ್ ಸಿನಿಮಾ ಟ್ರೈಲರ್‌ನಾ?

ಸಾಮಾನ್ಯವಾಗಿ ಸೀರಿಯಲ್ ಪ್ರೊಮೊಗಳು ಅತ್ತೆ-ಸೊಸೆಯ ಕೌಟುಂಬಿಕ ಕಲಹದ ಸುತ್ತಲೇ ಇರುತ್ತವೆ. ಆದರೆ 'ಜಗದ್ಧಾತ್ರಿ' ಪ್ರೊಮೊ ನೋಡಿದ ನೆಟ್ಟಿಗರು, "ಇದೇನು ಧಾರಾವಾಹಿ ಪ್ರೊಮೊನಾ ಅಥವಾ ಯಾವುದಾದರೂ ಬಿಗ್ ಬಜೆಟ್ ಸಿನಿಮಾ ಟ್ರೈಲರ್‌ನಾ?" ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಪ್ರೊಮೊದಲ್ಲಿನ ಶ್ರೀಮಂತ ಮೇಕಿಂಗ್, ಅದ್ಭುತ ಹಿನ್ನೆಲೆ ಸಂಗೀತ, ಸಾಹಿತ್ಯ ಹಾಗೂ ಖಳನಾಯಕನ ಖಡಕ್ ಡೈಲಾಗ್ ಡೆಲಿವರಿ ವೀಕ್ಷಕರ ಮನಗೆದ್ದಿದೆ. ವಿಶೇಷವಾಗಿ ಕಿರುತೆರೆಯ ಖ್ಯಾತ ತಾರೆಯರಾದ ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಅವರನ್ನು ತೆರೆಯ ಮೇಲೆ ಹೊಸ ಅವತಾರದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Related Articles

Related image1
ಬಿಗ್ ಬಾಸ್ ಮನೆಯಲ್ಲಿ ಕಾಮನರ್ಸ್ ಗ್ಯಾಂಗ್ ಛಿದ್ರ! ಧನುಷ್-ಶಾಸ್ತ್ರಿ ನಿರ್ಧಾರದಿಂದ ಆಟಕ್ಕೆ ಹೊಸ ತಿರುವು
Related image2
ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?
34
ಜಾಣ ಪ್ರೇಕ್ಷಕರು ಹೇಳಿದ್ದೇನು?
Image Credit : Instagram

ಜಾಣ ಪ್ರೇಕ್ಷಕರು ಹೇಳಿದ್ದೇನು?

ಪ್ರೊಮೊ ಬಿಡುಗಡೆಯಾದ ಬೆನ್ನಲ್ಲೇ ಕಮೆಂಟ್ ಬಾಕ್ಸ್‌ನಲ್ಲಿ ಪ್ರೇಕ್ಷಕರಿಂದ ಮಿಶ್ರ ಹಾಗೂ ಕುತೂಹಲಕಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಕೊನೆಗೂ ನಮ್ಮ ಕಾಯುವಿಕೆಗೆ ತೆರೆಬಿದ್ದಿದೆ" ಎಂದು ಅಭಿಮಾನಿಗಳು ಸಂಭ್ರಮಿಸಿದರೆ, ಇನ್ನು ಕೆಲವರು ನಾಯಕಿ ಮೋಕ್ಷಿತಾ ಪೈ ಅವರ ಅಂದ ಮತ್ತು ನಟನೆಯನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, "ಪ್ರೊಮೊ ಸೃಷ್ಟಿಸಿರುವ ಭರವಸೆಯನ್ನು ಕಥೆಯು ಕೊನೆಯವರೆಗೂ ಉಳಿಸಿಕೊಳ್ಳಲಿ, ಬೇರೆ ವಾಡಿಕೆಯ ಸೀರಿಯಲ್‌ಗಳಂತೆ ಇದು ‘ಕ್ರಿಂಜ್’ ಆಗದೆ ಪ್ರೊಮೊದಷ್ಟೇ ರೋಚಕವಾಗಿರಲಿ" ಎಂಬ ಆಶಯವನ್ನು ಜಾಣ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

44
ಪ್ರೇಕ್ಷಕ ವಲಯದಲ್ಲಿ ಕೇಳಿಬಂದ ಮಾತಿದು
Image Credit : Instagram

ಪ್ರೇಕ್ಷಕ ವಲಯದಲ್ಲಿ ಕೇಳಿಬಂದ ಮಾತಿದು

ಮೊದಲ ಪ್ರೊಮೊ ಬಿಡುಗಡೆಯಾಗಿ ಸುಮಾರು 9 ತಿಂಗಳ ದೀರ್ಘ ಕಾಯುವಿಕೆಯ ನಂತರ ಈ ಧಾರಾವಾಹಿ ಪ್ರಸಾರವಾಗುತ್ತಿರುವುದರಿಂದ ನಿರೀಕ್ಷೆಗಳು ಗಗನಕ್ಕೇರಿವೆ. ಈಗಾಗಲೇ ಅನ್ಯ ಭಾಷೆಗಳಲ್ಲಿ ಯಶಸ್ಸು ಕಂಡಿರುವ ಈ ಕಥೆಯು ಕನ್ನಡದಲ್ಲೂ ಮೋಡಿ ಮಾಡುವುದು ಖಚಿತ ಎನ್ನಲಾಗುತ್ತಿದೆ. ರಾತ್ರಿ 9 ಗಂಟೆಯ ಪ್ರೈಮ್ ಟೈಮ್ ಸ್ಲಾಟ್ ಸಿಕ್ಕಿರುವುದು ಹಾಗೂ ವಿಜಯ್ ಸೂರ್ಯ, ಮೋಕ್ಷಿತಾ ಪೈ ಜೊತೆಗೆ ಕವಿತಾ ಗೌಡ ಅವರಂತಹ ದೊಡ್ಡ ತಾರಾಗಣವಿರುವುದರಿಂದ ‘ಜಗದ್ಧಾತ್ರಿ’ ಟಿಆರ್‌ಪಿ ರೇಸ್‌ನಲ್ಲಿ ಧೂಳೆಬ್ಬಿಸಿ ಭರ್ಜರಿ ಹಿಟ್ ಆಗಲಿದೆ ಎಂಬ ಮಾತುಗಳು ಪ್ರೇಕ್ಷಕ ವಲಯದಲ್ಲಿ ಕೇಳಿಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಆಸ್ಪತ್ರೆಗೆ ಹೋದಾಗ್ಲೂ ಚೆನ್ನಾಗೇ ಇದ್ರು: ಡಿಸೈನರ್​ ಪಲ್ಲವಿ ಸಾವಿಗೆ ಅಸಲಿ ಕಾರಣ ತೆರೆದಿಟ್ಟ Bigg Boss ಮಲ್ಲಮ್ಮ
Recommended image2
Bigg Boss: ಮತ್ತೊಂದು ಮಹಾ ಟ್ವಿಸ್ಟ್; ವೈಲ್ಡ್‌ಕಾರ್ಡ್‌ ಸ್ಪರ್ಧಿಯಾಗಿ ಇವರಿಬ್ಬರಲ್ಲಿ ಎಂಟ್ರಿ ಕೊಡಲಿರೋದು ಯಾರು? ಹೆಚ್ಚಿದ ಕುತೂಹಲ!
Recommended image3
'ಆ ಹುಡುಗ ಸೂರಜ್​ ಅಲ್ಲ ಕಣ್ರೀ' ಎನ್ನುತ್ತಲೇ ಮದ್ವೆ ಕುರಿತು ಬಿಗ್​ ಅಪ್​ಡೇಟ್​ ಕೊಟ್ಟ Bigg Boss ಸ್ಪಂದನಾ ಸೋಮಣ್ಣ
Related Stories
Recommended image1
ಬಿಗ್ ಬಾಸ್ ಮನೆಯಲ್ಲಿ ಕಾಮನರ್ಸ್ ಗ್ಯಾಂಗ್ ಛಿದ್ರ! ಧನುಷ್-ಶಾಸ್ತ್ರಿ ನಿರ್ಧಾರದಿಂದ ಆಟಕ್ಕೆ ಹೊಸ ತಿರುವು
Recommended image2
ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved