prayagraj mankameshwar temple : ಭಕ್ತಿ ಹಾಗೂ ನಂಬಿಕೆಯ ಜಾಗ ದೇವಸ್ಥಾನ. ಅಲ್ಲಿಗೆ ಬರುವ ಭಕ್ತರು, ದೇವಸ್ಥಾನದ ನಿಯಮಗಳನ್ನು ಪಾಲಿಸಬೇಕು. ಈಗ ಪ್ರಯಾಗರಾಜದ ದೇವಸ್ಥಾನವೊಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.

ಪ್ರಯಾಗರಾಜದ ಮಂಕಮೇಶ್ವರ ದೇವಸ್ಥಾನದಲ್ಲಿ ಹೊಸ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಭಕ್ತರು ತಮಗಿಷ್ಟದ ಡ್ರೆಸ್‌ ಧರಿಸಿ ಇನ್ಮುಂದೆ ದೇವಸ್ಥಾನ ಪ್ರವೇಶ ಮಾಡುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ನಿರ್ಧಾರ 

ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಪ್ರಸಿದ್ಧ ಮಂಕಮೇಶ್ವರ ಶಿವ ದೇವಸ್ಥಾನದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಮಹಿಳೆಯರು ಚಿಕ್ಕ ಅಥವಾ ಆಕರ್ಷಕ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವಂತಿಲ್ಲ.

ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್

ಏಕೆ ಈ ನಿರ್ಧಾರ? 

ದೇವಸ್ಥಾನ ಆಡಳಿತಮಂಡಳಿ ಪ್ರಕಾರ, ದೇವಸ್ಥಾನವು ಭಕ್ತಿ ಮತ್ತು ಆರಾಧನೆಯ ಪವಿತ್ರ ಸ್ಥಳವಾಗಿದೆ. ಭಕ್ತರ ಗಮನ ಬೇರೆಡೆ ಸೆಳೆಯದಂತೆ ಹಾಗೂ ಪೂಜೆಯ ಏಕಾಗ್ರತೆ ಕಾಪಾಡುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ದೇವಸ್ಥಾನ ಆಡಳಿತ ತಿಳಿಸಿದೆ.

ಹೊಸ ನಿಯಮಗಳೇನು? 

ದೇವಸ್ಥಾನದ ಹೊಸ ನಿಯಮದ ಪ್ರಕಾರ, ರುದ್ರಾಭಿಷೇಕ ಮಾಡುವ ಪುರುಷರು ಧೋತಿ ಧರಿಸುವುದು ಕಡ್ಡಾಯ. ಮಹಿಳೆಯರು ಸೀರೆ ಅಥವಾ ಸೂಟ್ ಧರಿಸಬೇಕು. ಮಹಿಳೆಯರು ಹಾಗೂ ಯುವತಿಯರು ಚಿಕ್ಕ ಅಥವಾ ಅತಿಯಾಗಿ ಆಕರ್ಷಕ ಉಡುಪಿನಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಶಿಸ್ತಿನ ಉಡುಪು ಧರಿಸಬೇಕು. ಅತಿಯಾದ ಚಿನ್ನ-ಬೆಳ್ಳಿ ಆಭರಣ ಧರಿಸದಂತೆ ಸೂಚಿಸಲಾಗಿದೆ. ಪುರುಷರೂ ಸಹ ಶಿಸ್ತಿನ ಉಡುಪು ಧರಿಸಬೇಕು. ಶಿವಲಿಂಗದ ಬಳಿ ಹೆಚ್ಚು ಸಮಯ ಕುಳಿತುಕೊಳ್ಳದೆ ಪೂಜೆ ಮುಗಿದ ತಕ್ಷಣ ಹೊರಬರಬೇಕು. ದೇವಸ್ಥಾನದೊಳಗೆ ಸೆಲ್ಫಿ ಹಾಗೂ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬಳಕೆ ನಿಷೇಧ. ಗುಟ್ಕಾ, ಪಾನ್ ಸೇವನೆ ಸಂಪೂರ್ಣ ನಿಷೇಧ.

ಮತ್ತೆ ನಾಲ್ವರ ಪ್ರಾಣ ತೆಗೆದ ಕೊರೊನಾ, ಕರ್ನಾಟಕದಲ್ಲಿ ಎಷ್ಟು ಮಂದಿಗೆ ಸೋಂಕು?

ಭಕ್ತರ ಬೆಂಬಲ 

ದೇವಸ್ಥಾನಕ್ಕೆ ಬರುವ ಅನೇಕ ಭಕ್ತರು ಆಡಳಿತ ಮಂಡಳಿ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ದೇವಸ್ಥಾನಗಳಿಗೆ ಅದರದೆ ಆದ ಪವಿತ್ರತೆ ಇದೆ. ನಂಬಿಕೆ ಹಾಗೂ ಭಕ್ತಿಯ ಸ್ಥಳವಾದ ದೇವಸ್ಥಾನದ ಈ ನಿಯಮಗಳನ್ನು ಗೌರವಿಸುತ್ತೇವೆ ಎಂದು ಭಕ್ತರು ಹೇಳಿದ್ದಾರೆ.