Corona virus alert : ದೇಶದಲ್ಲಿ ಕೊರೊನಾ ವೈರಸ್ ಭಯ ಹೆಚ್ಚಾಗ್ತಿದೆ. ರೋಗಿಗಳ ಸಂಖ್ಯೆಯೂ ಏರ್ತಿದೆ. ಕೊರೊನಾ ವೈರಸ್ ನಾಲ್ವರನ್ನು ಬಲಿ ಪಡೆದಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ ಗೊತ್ತಾ?
ಮಳೆಗಾಲ ಶುರುವಾಗ್ತಿದ್ದಂತೆ ಕೊರೊನಾ ಅಬ್ಬರ ಶುರುವಾಗುತ್ತೆ. ದೇಶದಾದ್ಯಂತ ಈಗ ಮತ್ತೆ ಕೊರೊನಾ ಕಾಣಿಸಿಕೊಳ್ತಿದೆ. ಜುಲೈ ತಿಂಗಳ ಕೇವಲ 17 ದಿನಗಳಲ್ಲಿ, ದೇಶದಲ್ಲಿ 339 ಹೊಸ ಪ್ರಕರಣಗಳು ವರದಿಯಾಗಿವೆ. ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ.
ಕೊರೊನಾ ಎಚ್ಚರಿಕೆ
ಕೊರೊನಾ ಸೋಂಕು ಈಗಾಗಲೇ 339 ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಲಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಕೇಳದಲ್ಲಿ 115 ರೋಗಿಗಳಿಗೆ ಸೋಂಕು ತಗುಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 64 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 43 ಮಂದಿ ಸೋಂಕಿಗೊಳಗಾಗಿದ್ದಾರೆ. ದೆಹಲಿಯಲ್ಲಿ 18 ಮಂದಿ, ತಮಿಳುನಾಡಿನಲ್ಲಿ 39 ಮಂದಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 18 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಇನ್ನು ರಾಜಸ್ಥಾನದಲ್ಲಿ 12 ಮಂದಿ ಮತ್ತು ಆಂಧ್ರಪ್ರದೇಶದಲ್ಲಿ 12 ಮಂದಿಗೆ ಕೊರೊನಾ ತಗುಲಿದೆ. ಆಂಧ್ರಪ್ರದೇಶದಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ.
ಎಥೆನಾಲ್ ವಿವಾದ ಬೆನ್ನಲ್ಲೇ ಮೋದಿ ಸರ್ಕಾರದಿಂದ ಹೊಸ ಇಂಧನ ನೀತಿ ಪ್ರಸ್ತಾನೆ,
ಈ ವರ್ಷ ದೇಶದಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿತ್ತು. ಕಡಪ ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕು ಮೊದಲು ಕಾಣಿಸಿಕೊಂಡಿದೆ. ದೇಶದಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ಜೂನ್ 26 ರಂದು ವರದಿಯಾಗಿದೆ. ತರುವಾಯ, ಜುಲೈ 1 ಮತ್ತು ಜುಲೈ 17 ರ ನಡುವೆ 12 ಪ್ರಕರಣಗಳು ವರದಿಯಾಗಿವೆ. ಜೂನ್ 26 ಮತ್ತು ಜುಲೈ 17 ರ ನಡುವೆ, ರಾಜ್ಯಾದ್ಯಂತ 67 ಜನರನ್ನು COVID-19 ಪರೀಕ್ಷೆಗೆ ಒಳಪಡಿಸಲಾಯಿತು, ಅದರಲ್ಲಿ 12 ಜನರಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನಲ್ಲಿ 12 ನೇ ಪ್ರಕರಣ ಪತ್ತೆಯಾಗಿದೆ.
ಹೈಡ್ರೋಜನ್ ರೈಲು ಸಾಮಾನ್ಯ ಟ್ರೈನ್‌ಗಿಂತ ಹೇಗೆ ಭಿನ್ನ? 1 ಕಿ.ಮೀ ಸಂಚಾರಕ್ಕೆ
ಕೋವಿಡ್ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. COVID-19 ಗೆ ಬಲಿಯಾದ ರೋಗಿಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಮೂತ್ರಪಿಂಡ ಕಾಯಿಲೆಯಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತರಲ್ಲಿ ಮೂವರು ಕಡಪ ಮತ್ತು ಒಬ್ಬರು ಕಾಕಿನಾಡದವರು ಎಂದು ವರದಿಯಲ್ಲಿ ಹೇಳಲಾಗಿದೆ. ಕಡಪದಲ್ಲಿರುವ RIMS ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಲಾಗಿದೆ. ಜನರಿಗೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಮಾಹಿತಿ ನೀಡಲಾಗ್ತಿದೆ.


