10:24 PM (IST) Nov 02

Karnataka News Live Updates: ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕಕ್ಕೆ ಹೊಸ ಗರಿ - ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಮನ್ನಣೆ

ಕರ್ನಾಟಕ ಸರ್ಕಾರ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಮಲೆನಾಡಿನ ಮರಗಂತಿ ಕಪ್ಪೆಯನ್ನು ರಾಜ್ಯದ ಅಧಿಕೃತ ಉಭಯಜೀವಿಯಾಗಿ ಘೋಷಿಸಿದೆ. ‘ಪೆಟು’ ಎಂದೇ ಕರೆಯಲ್ಪಡುವ ಈ ಕಪ್ಪೆಯ ವೈಜ್ಞಾನಿಕ ಹೆಸರು Pedostibes tuberculosus.

Read Full Story
10:02 PM (IST) Nov 02

Karnataka News Live Updates: ಡಿಜಿಟಲ್ ಜಗತ್ತಲ್ಲಿ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ? ಈ ಈಸಿ ಟಿಪ್ಸ್ ಪಾಲಿಸಿ ಮ್ಯಾಜಿಕ್ ನೋಡಿ!

ಭಾರತದಲ್ಲಿ ಯುಪಿಐ ವಹಿವಾಟುಗಳು ಹೊಸ ದಾಖಲೆ ಬರೆಯುತ್ತಿವೆ. ಆದರೆ ಡಿಜಿಟಲ್ ಪಾವತಿಯ ಸುಲಭತೆಯಿಂದ ಸಣ್ಣಪುಟ್ಟ ಖರ್ಚುಗಳು ಹೆಚ್ಚಾಗುತ್ತಿವೆಯೇ? ಪ್ರತ್ಯೇಕ ಬ್ಯಾಂಕ್ ಖಾತೆ, ಯುಪಿಐ ಲೈಟ್, ಖರ್ಚಿನ ಮಿತಿ ಹಾಗೂ..

Read Full Story
08:28 PM (IST) Nov 02

Karnataka News Live Updates: ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು

ವಾರಾಂತ್ಯದ ರಜೆ ಕಳೆಯಲು ಗೋಕರ್ಣಕ್ಕೆ ತೆರಳಿದ್ದ ಬೆಂಗಳೂರಿನ ಐಟಿ ಕಂಪನಿಯ ಸಿಬ್ಬಂದಿ ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿದ್ದಾರೆ. ಈ ದುರಂತದಲ್ಲಿ ಮೂವರು ಉದ್ಯೋಗಿಗಳು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story
08:27 PM (IST) Nov 02

Karnataka News Live Updates: ‘ಆನಂದ ನಿಲಯ’ ಭುವನ್‌ಗೆ ಜಗ್ಗೇಶ್ ಜೊತೆ ಆಕಸ್ಮಿಕ ಭೇಟಿ - ಬಾ ಪಾ, ಕುತ್ಕೋ.. ಎಂದು ಏನೆಲ್ಲಾ ಹೇಳಿದ್ರು?

‘ಆನಂದ ನಿಲಯ’ ಧಾರಾವಾಹಿಯ ಭುವನ್ ಪಾತ್ರದ ನಟ ಕೌಶಿಕ್ ಅವರಿಗೆ ನವರಸ ನಾಯಕ ಜಗ್ಗೇಶ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ, ಜಗ್ಗೇಶ್ ಅವರ..

Read Full Story
07:56 PM (IST) Nov 02

Karnataka News Live Updates: 'ಕಳೆದ 11 ವರ್ಷಗಳಿಂದ ಬಸ್‌ ಟಿಕೆಟ್‌ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್‌, 2025ರ ಶೇ.15ರಷ್ಟ ಏರಿಕೆ ಮರೆತುಹೋಯ್ತಾ?

ರಾಜ್ಯದಲ್ಲಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ಸಜ್ಜಾಗಿದೆ. ಕಳೆದ 11 ವರ್ಷಗಳಿಂದ ದರ ಏರಿಸಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸಮರ್ಥಿಸಿಕೊಂಡಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
07:26 PM (IST) Nov 02

Karnataka News Live Updates: ಮೊಸರಿನ ಬೆಲೆ ಕಡಿಮೆ ಮಾಡೋಕೆ ಹೇಳಿದ್ದೇನೆ, ಜನಾಕ್ರೋಶಕ್ಕೆ ತಣ್ಣಗಾದ ಸಿಎಂ ಡಿಕೆ ಶಿವಕುಮಾರ್; ಹಾಲು, ಬಸ್‌ ದರ ಏರಿಕೆಗೆ ಸಮರ್ಥನೆ!

ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಮತ್ತು ಬಸ್ ದರ ಏರಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 25 ಲಕ್ಷ ಹೈನುಗಾರರ ಹಿತರಕ್ಷಣೆ ಹಾಗೂ ಸಾರಿಗೆ ಸಂಸ್ಥೆಗಳ ಉಳಿವಿಗಾಗಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
07:23 PM (IST) Nov 02

Karnataka News Live Updates: ವಿಮಾನ ಪ್ರಯಾಣಕ್ಕಿಂತಲೂ ವಿಭಿನ್ನ ಅನುಭವ - ಭಾರತದಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ 5 ಸುಂದರ ರೈಲು ಪ್ರಯಾಣಗಳು!

ಭಾರತದ 5 ಅತ್ಯಂತ ಸುಂದರ ರೈಲು ಪ್ರಯಾಣಗಳ ಮಾಹಿತಿ ಇಲ್ಲಿದೆ. ಐತಿಹಾಸಿಕ ಡಾರ್ಜಿಲಿಂಗ್ ಟಾಯ್ ಟ್ರೈನ್, ಕಾಲ್ಕಾ-ಶಿಮ್ಲಾ ರೈಲ್ವೆಯಿಂದ ಹಿಡಿದು ಕೊಂಕಣ ಮಾರ್ಗದವರೆಗೆ, ಬೆಟ್ಟ-ಗುಡ್ಡಗಳು ಹಾಗೂ ಕರಾವಳಿಯ ಅದ್ಭುತ ಸೌಂದರ್ಯವನ್ನು ಈ ಪ್ರಯಾಣದಲ್ಲಿ ನೀವು ಸವಿಯಬಹುದು.
Read Full Story
07:03 PM (IST) Nov 02

Karnataka News Live Updates: 6 ವರ್ಷಗಳ ಹಿಂದೆ ಮೊದಲ ಪತಿಗೆ ವಿಚ್ಛೇದನ, ಈಗ ಮತ್ತೊಂದು ಮದುವೆಗೆ ಸಜ್ಜಾದ ಖ್ಯಾತ ಗಾಯಕಿ!

ಜನಪ್ರಿಯ ಗಾಯಕಿ ರಿಮಿ ಟಾಮಿ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದ ಆರು ವರ್ಷಗಳ ಬಳಿಕ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮುಂಬೈ ಮೂಲದ ಬಾಡಿ ಬಿಲ್ಡರ್ ಲಿಬಿನ್ ಮ್ಯಾಥ್ಯೂ ಜೊತೆ ಇದೇ ತಿಂಗಳು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Read Full Story
06:51 PM (IST) Nov 02

Karnataka News Live Updates: ಚಿತ್ರದುರ್ಗದ ಹಿರಿಯೂರಿಗೆ ಸಂಜೀವಿನಿ - 244 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಗೆ ನ.3ಕ್ಕೆ ಸಿಎಂ ಚಾಲನೆ

ಚಿತ್ರದುರ್ಗದ ಬರಪೀಡಿತ ಹಿರಿಯೂರು ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸಲು ₹244 ಕೋಟಿ ವೆಚ್ಚದ ಬೃಹತ್ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದೆ. ಈ ಯೋಜನೆಯಡಿ ವೇದಾವತಿ ನದಿಯಿಂದ ನೀರೆತ್ತಿ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುತ್ತದೆ.

Read Full Story
06:48 PM (IST) Nov 02

Karnataka News Live Updates: ಇದೇ 13ಕ್ಕೆ ಮೆಟ್ರೋ ಗುಲಾಬಿ ಮಾರ್ಗ ಪ್ರಧಾನಿ ಮೋದಿಯಿಂದ ಉದ್ಘಾಟನೆ - ಎಲ್ಲೆಲ್ಲಿ ಸಂಚಾರ

ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆಯು ನವೆಂಬರ್ 13 ರಂದು ನಡೆಯಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಮೊದಲು ನವೆಂಬರ್ 15 ರಂದು ಪ್ರಧಾನಿ ಮೋದಿ ಉದ್ಘಾಟಿಸುವ ನಿರೀಕ್ಷೆಯಿತ್ತು, ಆದರೆ ಈಗ ಎರಡು ದಿನ ಮುಂಚಿತವಾಗಿ ನಡೆಯಲಿದೆ. ಈ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 7.5 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.
Read Full Story
06:36 PM (IST) Nov 02

Karnataka News Live Updates: Cyclone Murasu - 120KM ವೇಗದಲ್ಲಿ ಕರಾವಳಿಗೆ ಅಪ್ಪಳಿಸಲಿರುವ ಚಂಡಮಾರುತ; ಕರ್ನಾಟಕದ ಮೇಲೆ ಏನೆಲ್ಲಾ ಪ್ರಭಾವ ಬೀರಲಿದೆ?

ಅರ್ನಬ್ ಬೆನ್ನಲ್ಲೇ 'ಮುರಸು' ಚಂಡಮಾರುತ ಪೂರ್ವ ಕರಾವಳಿಗೆ ಅಪ್ಪಳಿಸಲು ಸಜ್ಜಾಗಿದ್ದು, ಐಎಂಡಿ ಕಟ್ಟೆಚ್ಚರ ವಹಿಸಿದೆ. 120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಆಂಧ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗಲಿದೆ. ಇದರ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ನವೆಂಬರ್ 3ರಿಂದ 6ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ.
Read Full Story
06:18 PM (IST) Nov 02

Karnataka News Live Updates: ನೋರಾ ಫತೇಹಿಗೆ ದೆಹಲಿ ನ್ಯಾಯಾಲಯ ಛೀಮಾರಿ; 'ದಾರಿ ತಪ್ಪಿಸ್ಬೇಡಿ' ಅಂದಿದ್ಯಾಕೆ? ಏನ್ ಮಾಡ್ತಿದ್ದಾರೆ ಈ ನಟಿ?

Jailer 2 song Bollywood actress Nora Fatehi warned by a Delhi court not to mislead the court. ‘ಜೈಲರ್ 2’ ಚಿತ್ರದ ಹಾಡಿನಮೂಲಕ ಗಮನ ಸೆಳೆದಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

Read Full Story
06:00 PM (IST) Nov 02

Karnataka News Live Updates: ಗ್ರಾಮದ ಮಧ್ಯೆ ಪಾಳುಬಿದ್ದ 300 ವರ್ಷದ ಶಾಪಗ್ರಸ್ಥ ಮನೆ; ನಿಧಿ ಇದ್ರೂ ಮುಟ್ಟಂಗಿಲ್ಲ!

300 ವರ್ಷಗಳ ಹಳೆಯ ಪಾಳುಬಿದ್ದ ಮನೆಯೊಂದು ಶಾಪಗ್ರಸ್ಥವಾಗಿದ್ದು, ಇಲ್ಲಿ ಅಪಾರ ನಿಧಿ ಇದೆ ಎಂದು ನಂಬಲಾಗಿದೆ. ಇಷ್ಟು ಮಾತ್ರವಲ್ಲ ಈ ಮನೆಗೊಂದು ದೊಡ್ಡ ಶಾಪವೊಂದು ಇರೋ ಕಾರಣ, ಇಲ್ಲಿ ಯಾರೂ ವಾಸವಾಗಿಲ್ಲ. ಆರು ಕೋಣೆ ಹೊಂದಿರುವ ಮನೆ ರಹಸ್ಯ ಇಲ್ಲಿದೆ ನೋಡಿ.

Read Full Story
05:52 PM (IST) Nov 02

Karnataka News Live Updates: ಹುಬ್ಬಳ್ಳಿ SWR ರೈಲ್ವೆಯಲ್ಲಿ ಸುವರ್ಣಾವಕಾಶ, 258 ಗೂಡ್ಸ್ ವ್ಯವಸ್ಥಾಪಕ, ಜೂನಿಯರ್ ಎಂಜಿನಿಯರ್ ಹುದ್ದೆಗೆ ನೇಮಕಾತಿ

ರೈಲ್ವೇ ನೇಮಕಾತಿ ಕೋಶ ಹುಬ್ಬಳ್ಳಿಯು ಗೂಡ್ಸ್ ರೈಲು ವ್ಯವಸ್ಥಾಪಕ ಮತ್ತು ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 258 ಹುದ್ದೆಗಳಿದ್ದು, ಡಿಪ್ಲೊಮಾ ಅಥವಾ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 8, 2026 ಕೊನೆಯ ದಿನಾಂಕವಾಗಿದೆ.
Read Full Story
05:33 PM (IST) Nov 02

Karnataka News Live Updates: ರಿಯಲ್ ಎಸ್ಟೇಟ್‌ನಲ್ಲಿ ಮೆಗಾ ಡೀಲ್, ದಕ್ಷಿಣ ಭಾರತದಲ್ಲಿ ಬೆಂಗಳೂರಿನ ಕಂಪನಿಯಿಂದ ₹1,500 ಕೋಟಿ ವೆಚ್ಚದ ಬೃಹತ್ ವಸತಿ ಯೋಜನೆ!

ಬೆಂಗಳೂರು ಮೂಲದ ದಿವ್ಯಶ್ರೀ ಡೆವಲಪರ್ಸ್ ಮತ್ತು ಎಚ್‌ಡಿಎಫ್‌ಸಿ ಕ್ಯಾಪಿಟಲ್ ಜಂಟಿಯಾಗಿ 1,500 ಕೋಟಿ ರೂ. ಮೊತ್ತದ ವಸತಿ ಅಭಿವೃದ್ಧಿ ವೇದಿಕೆಯನ್ನು ಸ್ಥಾಪಿಸಿವೆ. ಈ ಮೂಲಕ ಮುಂದಿನ 3-4 ವರ್ಷಗಳಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ 6,750 ಕೋಟಿ ರೂ. ಮೌಲ್ಯದ ಮಧ್ಯಮ ಆದಾಯದ ವಸತಿ ಯೋಜನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
Read Full Story
05:20 PM (IST) Nov 02

Karnataka News Live Updates: ಪುಣ್ಯಕೋಟಿ ಕಥೆಗೂ ಈ ಸಿನಿಮಾಗೂ ಏನು ಸಂಬಂಧ? ಉಪೇಂದ್ರ ಬಿಡುಗಡೆ ಮಾಡಿದ ಟೀಸರ್‌ನಲ್ಲಿ ಏನಿದೆ?

ನಟ ಉಪೇಂದ್ರ ಅವರು ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಪುಣ್ಯಕೋಟಿ ಕಥೆಯಿಂದ ಸ್ಫೂರ್ತಿ ಪಡೆದ ಈ ಸಿನಿಮಾದಲ್ಲಿ ಗೌರವ್ ಆರ್ಯನ್, ಸಿಂಚನಾ ಪಿ. ರಾವ್ ನಟಿಸಿದ್ದಾರೆ.

Read Full Story
05:04 PM (IST) Nov 02

Karnataka News Live Updates: ಸೌತ್ ಇಂಡಿಯಾ ಬುಲೆಟ್ ರೈಲಿಗೆ ಕೇಂದ್ರ ಅಸ್ತು, ಬೆಂಗಳೂರಿಂದ ಜಸ್ಟ್ 2 ಗಂಟೆ 10 ನಿಮಿಷದಲ್ಲಿ ದಕ್ಷಿಣದ 3 ರಾಜ್ಯಕ್ಕೆ ರೀಚ್!

ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ಬೆಸೆಯುವ ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಇಳಿಕೆಯಾಗಲಿದೆ. ಇದರ ಜೊತೆಗೆ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೂ ಚಾಲನೆ ನೀಡಲಾಗಿದೆ.

Read Full Story
04:48 PM (IST) Nov 02

Karnataka News Live Updates: 'ಕನ್ನಡವೇ ನನ್ನ ಉಸಿರು ಎಂದ್ರು ನಮ್ಮ ರಾಜಣ್ಣ' - ವಿಶೇಷ ಗೀತೆಗೆ ಸಾಥ್ ಕೊಟ್ರು ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಿಕ್ರಮಾರ್ಕ' ಚಿತ್ರದ ವಿಶೇಷ ಕನ್ನಡಾಭಿಮಾನಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಜಣ್ಣನ ನೆನಪು, ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್ ನಾಗ್ ಅವರ ಶೈಲಿಯಲ್ಲಿ ಭಾರ್ಗವ್ ಮಿಂಚಿರುವ ಈ ಗೀತೆ ಗಮನ ಸೆಳೆಯುತ್ತಿದೆ.

Read Full Story
04:31 PM (IST) Nov 02

Karnataka News Live Updates: ಉಡುಪಿಯ ಮಲ್ಪೆ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣವಾಯ್ತು ನಾರ್ವೆ ದೇಶದ ಅತ್ಯಂತ ಬೃಹತ್ ಸರಕು ಹಡಗು ವಿಲ್ಸನ್ ಎನರ್ಜಿ 1

ಉಡುಪಿಯ ಮಲ್ಪೆಯಲ್ಲಿರುವ 'ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್' ನಾರ್ವೆ ದೇಶದ ಸಂಸ್ಥೆಗಾಗಿ ತನ್ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಸರಕು ಹಡಗನ್ನು ನಿರ್ಮಿಸಿದೆ. ₹1,041 ಕೋಟಿ ಮೌಲ್ಯದ ಒಪ್ಪಂದದ ಭಾಗವಾಗಿ ನಿರ್ಮಾಣಗೊಂಡಿರುವ 99 ಮೀಟರ್ ಉದ್ದದ ಈ ಹಡಗಿಗೆ 'ವಿಲ್ಸನ್ ಎನರ್ಜಿ 1' ಎಂದು ಹೆಸರಿಡಲಾಗಿದೆ.

Read Full Story
04:29 PM (IST) Nov 02

Karnataka News Live Updates: ವಿಜಯ ರಾಘವೇಂದ್ರಗೆ 'ಆನ್ ಡ್ಯೂಟಿ' ಚಾಲೆಂಜ್ - 20 ವರ್ಷಗಳ ಬಳಿಕ ವಿನಯಾ ಪ್ರಸಾದ್ ಸಾಥ್

ವಿಜಯ ರಾಘವೇಂದ್ರ ಅಭಿನಯದ 'ಆನ್ ಡ್ಯೂಟಿ' ಚಿತ್ರದ ಶೇ.75ರಷ್ಟು ಚಿತ್ರೀಕರಣ ಪೂರ್ಣ. ಕೃಷ್ಣಸಾಯಿ ಜೊತೆ ಸೂರ್ಯ-ಚಂದ್ರನಾಗಿ ನಟಿಸುತ್ತಿರುವ ವಿಜಯ ರಾಘವೇಂದ್ರಗೆ 20 ವರ್ಷಗಳ ಬಳಿಕ ವಿನಯಾ ಪ್ರಸಾದ್ ಜೊತೆ ಅಭಿನಯಿಸುವ ಅವಕಾಶ.

Read Full Story