ಅರ್ನಬ್ ಬೆನ್ನಲ್ಲೇ 'ಮುರಸು' ಚಂಡಮಾರುತ ಪೂರ್ವ ಕರಾವಳಿಗೆ ಅಪ್ಪಳಿಸಲು ಸಜ್ಜಾಗಿದ್ದು, ಐಎಂಡಿ ಕಟ್ಟೆಚ್ಚರ ವಹಿಸಿದೆ. 120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಆಂಧ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗಲಿದೆ. ಇದರ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ನವೆಂಬರ್ 3ರಿಂದ 6ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ.

ಅಮರಾವತಿ: ಆಂಧ್ರ ಪ್ರದೇಶ, ಒರಿಸ್ಸಾ ಸೇರಿದಂತೆ ದೇಶದ ಪೂರ್ವ ಕರಾವಳಿ ರಾಜ್ಯಗಳಲ್ಲಿ ವಿಧ್ವಂಸಕ್ಕೆ ಕಾರಣವಾಗಿದ್ದ ಅರ್ನಬ್ ಚಂಡಮಾರುತ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಆಗಮಿಸುತ್ತಿದೆ. ಇದರೊಂದಿಗೆ ಕರಾವಳಿ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಗಳನ್ನು ಈಗಾಗಲೇ ರವಾನೆ ಮಾಡಿದೆ. ಇದರ ನಡುವೆ ಮುರಸು ಚಂಡಮಾರುತ ಕುರಿತಂತೆ ಇಸ್ರೋ ಉಪಗ್ರಹ ಕಳುಹಿಸಿರುವ ಹೊಸ ಫೋಟೋಗಳು ಮಹತ್ವದ ಮುನ್ಸೂನಚೆಯನ್ನು ನೀಡಿದ್ದು, ಇದರ ಬೆನ್ನಲ್ಲೇ ಮತ್ತೊಂದು ಸುತ್ತಿನ ಎಚ್ಚರಿಕೆಯನ್ನು ಐಎಂಡಿ ಬಿಡುಗಡೆ ಮಾಡಿದೆ.

ಈ ಪ್ರದೇಶಗಳಲ್ಲಿ ಪ್ರವಾಹದ ಅಲರ್ಟ್

ಮುರಸು ಚಂಡಮಾರುತ ಪೂರ್ವ ಕರಾವಳಿಯತ್ತ ಸಾಗುತ್ತಿರುವ ಹೊಸ ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಈ ಬಗ್ಗೆ ಐಎಂಟಿ ನಿಯಂತರವಾಗಿ ಗಮನಿಸುತ್ತಿದೆ. ಮುರಸು ಚಂಡಮಾರುತ ಎಫೆಕ್ಟ್ ದಕ್ಷಿಣ ಭಾರತ ಸೇರಿದಂತೆ ಮಧ್ಯ ಭಾರತದ ಕೆಲವು ರಾಜ್ಯಗಳ ಮೇಲೆ ತೀವ್ರವಾಗಿ ಇರುತ್ತದೆ ಎಂದು ಐಎಂಡಿ ಮುನ್ಸೂಚನೆ ನಿಡಿದೆ. ಆಂಧ್ರ ಪ್ರದೇಶದ ರಾಯಲಸೀಮಾ ಮತ್ತು ತೆಲಂಗಾಣ, ತಮಿಳುನಾಡು ಪ್ರದೇಶಗಳಲ್ಲಿ ಭಾರೀ ನವೆಂಬರ್ 03 ರಂದು ಭಾರೀ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ.

120 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ

ಮಂಗಳವಾರ ಮುಂಜಾನೆ ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಗೆ ಮುರಸು ಚಂಡಮಾರುತ ಅಪ್ಪಳಿಸಲಿದ್ದು, ಅದರಲ್ಲೀ ಒಂಗೋಲ್ ಜಿಲ್ಲೆಯ ನೆಲ್ಲೂರು ಮತ್ತು ನರಸಾಪುರ ನಡುವೆ ಭೂಮಿಗೆ ಅಪ್ಪಳಿಸಲಿದೆ. 100 ರಿಂದ 110 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ ಭೂಮಿಗೆ ಅಪ್ಪಳಿಸುವ ವೇಳೆ 120 ಕಿಲೋ ಮೀಟರ್ ವೇಗವನ್ನು ಪಡೆದುಕೊಳ್ಳುವ ಮುನ್ಸೂಚನೆ ಇದೆ. ಇದರಿಂದ ಭಾರೀ ಪ್ರಮಾಣದಲ್ಲಿ ನಷ್ಟ ಎದುರಾಗುವ ಸಾಧ್ಯತೆ ಇದೆ. ಮರಗಳು ಬುಡಮೇಲು ಆಗುವುದು, ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಭೂಕುಸಿತಗಳ ಕಾರಣದಿಂದ ರಸ್ತೆ ಮಾರ್ಗ ಸಂಪರ್ಕಗಳು ಕಟ್ ಆಗುವ ಸಾಧ್ಯತೆ ಇದೆ.

ಕರ್ನಾಟಕದ ಮಳೆ ಆಗುತ್ತಾ?

ಭಾರೀ ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಲಿದ್ದು, ಈಗಾಗಲೇ ಅಸ್ಸಾಂ, ಒಡಿಶಾ ಮತ್ತು ಕೇರಳದ ಕೆಲವು ಭಾಗಗಳಲ್ಲಿ 7-11 ಸೆಂ.ಮೀ ಮಳೆಯಾಗಿದೆ. ಆಂಧ್ರ ಪ್ರದೇಶ ಸರ್ಕಾರ ಸೇರಿದಂತೆ ಸ್ಥಳೀಯ ಆಡಳಿತಗಳು ಚಂಡಮಾರುತವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ತೀವ್ರವಾಗಿ ಹಾನಿಗೊಳಗಾಗುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಮುರತ ಚಂಡಮಾರುತ ನೇರ ಪರಿಣಾಮ ಕರ್ನಾಟಕ ಮೇಲೆ ಕಡಿಮೆ ಇದ್ದರೂ, ಸೈಕ್ಲೋನ್‌ನಿಂದ ಕರ್ನಾಟಕದ ಹಲವು ಭಾಗಗಳಲ್ಲಿ ನವೆಂಬರ್ 03 ರಿಂದ 6ರ ವರೆಗೂ ಭಾರೀ ಗಾಳಿಯೊಂದಿಗೆ ರಾಜ್ಯಾದಾದ್ಯಂತ ಮಳೆಯಾಗುವ ನಿರೀಕ್ಷೆ ಇದೆ. ನವೆಂಬರ್ 2ರಂದು ಕರ್ನಾಟಕದ ಒಳನಾಡು ಪ್ರದೇಶ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ನವೆಂಬರ್ 3 ರಿಂದ 5ರ ವರೆಗೂ ರಾಜ್ಯಾದಾದ್ಯಂತ ಉತ್ತಮ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.