ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಂಸದೆ ಸುಮಲತಾ ಬೆನ್ನಲ್ಲೇ ನಟಿ ಕಾರುಣ್ಯ ರಾಮ್ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸಿ, ₹15 ಸಾವಿರ ಗೌರವಧನ ನೀಡಬೇಕು ಹಾಗೂ ಸಾರ್ವಜನಿಕರು ಇವರಿಗೆ ಸಾಥ್ ನೀಡಬೇಕು ಎಂದು ಅವರು ಮನವಿ
ಬೆಂಗಳೂರು (ನ.22): ಗೌರವಧನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇದೀಗ ಸ್ಯಾಂಡಲ್ವುಡ್ ನಟಿಯರು ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲಿಸಿ ಹಿರಿಯ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಹೋರಾಟಕ್ಕೆ ಬೆಂಬಲಿಸಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಇದೀಗ ನಟಿ ಕಾರುಣ್ಯ ರಾಮ್ ಕೂಡ ಹೋರಾಟಕ್ಕೆ ಸಾಥ್ ನೀಡದ್ದಾರೆ.
ಇದನ್ನೂ ಓದಿ: ಮೊಮಕ್ಕಳನ್ನ ನೋಡಿಕೊಳ್ಳೋಕೆ ಸೊಸೆಯ ಹೋರಾಟಕ್ಕೆ ಬೆಂಬಲವಾಗಿ ಬಂದ 80 ವರ್ಷದ ಅತ್ತೆ!
ಆಶಾ ಕಾರ್ಯಕರ್ತೆಯರಿಗೆ ಬೆಂಬಲ ನೀಡಲು ಬಂದಿದ್ದೇನೆ:
ಆಶಾ ಕಾರ್ಯಕರ್ತೆಯರ ಹೋರಾಟ, ಅವರ ಬೇಡಿಕೆಗಳು, ಸರ್ಕಾರದ ನಿರ್ಲಕ್ಶ್ಯ ಕುರಿತಂತ ಮಾತನಾಡಿದ್ದಾರೆ. ಪಾಪ ಆ ಮಹಿಳೆಯರು ಕಳೆದ ಆರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಹೆಣ್ಣುಮಕ್ಕಳ ಕೂಗು ಕೇಳಬೇಕು. ಅವರಿಗೆ 15 ಸಾವಿರ ಗೌರವಧನ ನೀಡಬೇಕು. ಈ 15 ಸಾವಿರ ಜಾಸ್ತಿ ಅಲ್ಲ, ಈಗಿನ ದುಬಾರಿ ದುನಿಯಾದಲ್ಲಿ ಅಷ್ಟರಲ್ಲಿ ಜೀವನ ನಡೆಸೋದೇ ಕಷ್ಟ. ಕಳೆದ ಆರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲಂದ್ರೆ ಈ ಮಹಿಳೆಯರ ಕಷ್ಟ ನೋಡಿ ನೋವು ಆಗುತ್ತಿದೆ. ಅವರನ್ನ ಮೊನ್ನೆ ಹತ್ತಿರದಿಂದ ನೋಡಿದೆ. ಇಂದು ಅವರಿಗೆ ಬೆಂಬಲಕ್ಕೆ ಕೊಡೋದಕ್ಕೆ ಇಲ್ಲಿಗೆ ಬಂದಿದ್ದೇನೆ. ಇವತ್ತು ಮಾತ್ರವಲ್ಲ, ಹೋರಾಟ ಮುಗಿಯುವವರೆಗೆ ಅವರ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆಶಾ ಕಾರ್ಯಕರ್ತೆಯರ ಹೋರಟಕ್ಕೆ ಮತ್ತಷ್ಟು ಬಲ; ಪ್ರತಿಭಟನೆಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ನೀಡಿ ಸಿಎಂಗೆ ಪತ್ರ
ಕಂಫರ್ಟ್ ಜೋನ್ ಬಿಟ್ಟು ಬಂದು ನೋಡಿದ್ರೆ ಅವರ ಕಷ್ಟ ಏನು ಅಂತಾ ಗೊತ್ತಾಗುತ್ತೆ:
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಿನಿಮಾ ಇಂಡಸ್ಟ್ರಿಯವರು ಮಾತ್ರವಲ್ಲ, ಪ್ರತಿಯೊಬ್ಬರೂ ಬೆಂಬಲ ಕೊಡಬೇಕು ಎಂದು ಕರೆ ನೀಡಿದ ನಟಿ ಕಾರುಣ್ಯರಾಮ್, ಕಂಫರ್ಟ್ ಜೋನ್ ನಲ್ಲಿ ಇರೋರಿಗೆ ಈ ಮಹಿಳೆಯರ ಹೋರಾಟ, ಅವರ ಪರಿಸ್ಥಿತಿ ಅರ್ಥವಾಗೋಲ್ಲ. ಕಂಫರ್ಟ್ ಜೋನ್ ಬಿಟ್ಟು ಬಂದು ಇವರ ಕಷ್ಟ ನೋಡಿದ್ರೆ ಗೊತ್ತಾಗುತ್ತೆ ಎಂದರು.
ಕಳೆದ ಆರು ದಿನಗಳಿಂದ ಹೋರಾಟ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ತೀವ್ರ ಚಳಿಯಿದೆ. ಇಂಥ ಚಳಿಯಲ್ಲಿ ರಸ್ತೆಬದಿ ಮಲಗಿ, ಹೋರಾಟ ಮಾಡಿ ದಿನ ಕಳೆಯೋದು ತುಂಬಾ ಕಷ್ಟ. ಸರ್ಕಾರ ಶೀಘ್ರ ಬೇಡಿಕೆ ಈಡೇರಿಸಬೇಕು. ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ಗೌರವಧನ ನೀಡಬೇಕು. ಆ ಹೆಣ್ಣುಮಕ್ಕಳ ನೋವು ಅರ್ಥ ಮಾಡಿಕೊಳ್ಳಬೇಕು. ಕಂಫರ್ಟ್ ಜೋನ್ ಬಿಟ್ಟು ಬಂದು ಇವರ ಕಷ್ಟ ನೋಡಿದ್ರೆ ಅರ್ಥಾಗುತ್ತೆ. ನಾನು ಇವತ್ತು ಬೆಂಬಲಿಸಲು ಇಲ್ಲಿಗೆ ಬಂದಿದ್ದೇನೆ. ಇದು ಇವತ್ತಿಗೆ ಮಾತ್ರವಲ್ಲ, ಹೋರಾಟ ಮುಗಿಯುವವರೆಗೆ ಅವರ ಜೊತೆಗೆ ನಿಲ್ಲುತ್ತೇನೆ, ಇಂಡಸ್ಟ್ರಿಯವರು ಅಲ್ಲದೆ ಪ್ರತಿಯೊಬ್ಬರು ಹೆಣ್ಣುಮಕ್ಕಳ ಹೋರಾಟಕ್ಕೆ ಬೆಂಬಲಿಸುವತೆ ನಟ ಕಾರುಣ್ಯ ರಾಮ್ ಕರೆ ನೀಡಿದರು.
















