11:31 PM (IST) Nov 21

Karnataka News Liveಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು

ಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು , ವೇಗವಾಗಿ ಸಾಗುತ್ತಿದ್ದ ಬೈಕ್ ಟ್ರಾಕ್ಟರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳೀಯರು ಅಪಘಾತಕ್ಕೆ ಕಾರಣ ಹೇಳಿದ್ದಾರೆ.

Read Full Story
11:04 PM (IST) Nov 21

Karnataka News Liveಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ

ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ, ಇದೀಗ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ನೇರವಾಗಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ.

Read Full Story
09:55 PM (IST) Nov 21

Karnataka News Liveಬೆಂಗಳೂರು-ಕಲಬುರಗಿ ಪ್ರಯಾಣಿಕರಿಗೆ ಸಿಹಿಸುದ್ದಿ, ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ..

ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ, ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ಹೊಸ ನಿಲುಗಡೆ ನೀಡಲಾಗಿದೆ.

Read Full Story
09:46 PM (IST) Nov 21

Karnataka News Live'ಬಾಹ್ಯಾಕಾಶಕ್ಕೆ ಹೋಗೋದೇ ಸುಲಭ..' ಪ್ರಿಯಾಂಕ್‌ ಖರ್ಗೆ ಎದುರಲ್ಲೇ ಬೆಂಗಳೂರು ಟ್ರಾಫಿಕ್‌ ಬಗ್ಗೆ ತಮಾಷೆ ಮಾಡಿದ ಗಗನಯಾತ್ರಿ ಶುಭಾಂಶು ಶುಕ್ಲಾ!

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಪರೀಕ್ಷಾ ಪೈಲಟ್. 2027 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಅವರು ಒಬ್ಬರು.

Read Full Story
09:04 PM (IST) Nov 21

Karnataka News Liveಸಿದ್ದರಾಮಯ್ಯನವರೇ ಸಿಎಂ, ದೊಡ್ಡವ್ರು ಹೇಳಿದ ಮೇಲೆ ನಾವು ನಮ್ರತೆಯಿಂದ ಇರ್ಬೇಕು, ಡಿಕೆ ಶಿವಕುಮಾರ್

ಸಿದ್ದರಾಮಯ್ಯನವರೇ ಸಿಎಂ, ದೊಡ್ಡವ್ರು ಹೇಳಿದ ಮೇಲೆ ನಾವು ನಮ್ರತೆಯಿಂದ ಇರ್ಬೇಕು, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡದೇ ಮನೆಗೆ ಮರಳಿದ ಡಿಕೆ ಶಿವಕುಮಾರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Read Full Story
08:55 PM (IST) Nov 21

Karnataka News Liveಕನ್ನಡದ ಸೀರಿಯಲ್‌ ನಟಿಗೆ ತಮಿಳು ಸೂಪರ್‌ ಸ್ಟಾರ್‌ ಧನುಷ್‌ ಮ್ಯಾನೇಜರ್‌ನಿಂದ ಕಾಸ್ಟಿಂಗ್‌ ಕೌಚ್‌ ಬೇಡಿಕೆ?

ನಟಿ ಮಾನ್ಯ ಆನಂದ್‌, ಧನುಷ್‌ ಮ್ಯಾನೇಜರ್‌ ಶ್ರೇಯಸ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಸ್ಟಿಂಗ್‌ ಕೌಚ್‌ಗೆ ಆಹ್ವಾನಿಸಿದ್ದಾಗಿ ಆರೋಪಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಧನುಷ್‌ ಹೆಸರು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story
08:51 PM (IST) Nov 21

Karnataka News LiveBigg Bossನಲ್ಲಿ ಸು ಫ್ರಂ ಸೋ - ಎಲ್ಲ ಬಿದ್ದೂ ಬಿದ್ದೂ ನಕ್ಕರೂ, ನಗಲಿಲ್ಲ ಅಶ್ವಿನಿ ಗೌಡ! ರಾಜಮಾತೆ ಸ್ಥಿತಿ ಗಂಭೀರ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳ ತಾರಕಕ್ಕೇರಿದೆ. ಹೆಸರಿನಿಂದ ಕರೆದಿದ್ದಕ್ಕೆ ಅಶ್ವಿನಿ ಗೌಡರಿಗೆ ಕೋಪ ಬಂದಿದ್ದು, ಗಿಲ್ಲಿ ನಟ ಹಾಸ್ಯದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ. 

Read Full Story
08:47 PM (IST) Nov 21

Karnataka News Liveಕುಟುಂಬದ ಮೂರು ತಲೆಮಾರನ್ನು ಬಾವಿಗೆ ದೂಟಿ ಆತ್ಮ*ಹತ್ಯೆಗೆ ಶರಣಾದ ಪುತ್ರ, ಒಂದೇ ಕುಟುಂಬದ 4 ಮಂದಿ ಸಾವು!

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ, ನಾರಾಯಣ ಶಿಂಧೆ ಎಂಬಾತ ತನ್ನ ಇಬ್ಬರು ಮಕ್ಕಳು ಹಾಗೂ ವೃದ್ಧ ತಂದೆಯೊಂದಿಗೆ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸಾಲಬಾಧೆಯಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

Read Full Story
08:14 PM (IST) Nov 21

Karnataka News Liveಸಿಎಂ ಬದಲಾವಣೆ ವ್ಯಾಪಕ ಚರ್ಚೆ, ಅಚ್ಚರಿಯ ಹೇಳಿಕೆ ಕೊಟ್ರು ಸಚಿವ ಬೋಸರಾಜ್

ಕೊಡಗು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಎಸ್.ಎನ್. ಭೋಸರಾಜ್, ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಹಂಚಿಕೆ ವಿಷಯ ತಮ್ಮ ಗಮನದಲ್ಲಿಲ್ಲ ಮತ್ತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
08:08 PM (IST) Nov 21

Karnataka News Liveಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮತ್ತೆ ಕುಸಿದ ಚಿನ್ನದ ಬೆಲೆ, ಖರೀದಿಗೆ ಸುವರ್ಣಾವಕಾಶ?

Gold prices in your city today: ನವೆಂಬರ್ 21 ರಂದು ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಕುಸಿದಿದ್ದು, ಎಂಸಿಎಕ್ಸ್ ಗೋಲ್ಡ್ ಡಿಸೆಂಬರ್ ಫ್ಯೂಚರ್‌ಗಳು 0.52% ಇಳಿಕೆಯಾಗಿ 10 ಗ್ರಾಂಗೆ ₹1,22,085 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಸಹ 1.82% ರಷ್ಟು ಕಡಿಮೆಯಾಗಿದೆ.

Read Full Story
07:45 PM (IST) Nov 21

Karnataka News Liveಸಿಎಂ ಸಿದ್ದರಾಮಯ್ಯ ಬಳಿಕ ಡಿ ಕೆ ಶಿವಕುಮಾರ್ ಗೆ ನಾಯಕತ್ವ, ತಕ್ಷಣವೇ ಅಲ್ಲ ಎಂದ ಶಾಸಕ ಪೊನ್ನಣ್ಣ

ಸಿಎಂ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಅವರೇ ಪಕ್ಷದ ನಾಯಕರು, ಆದರೆ ಅದು ತಕ್ಷಣ ಆಗಬೇಕಿಲ್ಲ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗುವುದನ್ನು ಬಣ ರಾಜಕೀಯ ಎನ್ನಲಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
07:29 PM (IST) Nov 21

Karnataka News Liveಚಿಕ್ಕಮಗಳೂರು ಗ್ರಾಮದಲ್ಲಿ ಪತ್ತೆಯಾದ ಹೊಸ ಜಾತಿಯ ಜೇಡ, ಮಲೆನಾಡಿಗರಿಗೆ ಹೆಮ್ಮೆ ಮೂಡುವಂಥ ಹೆಸರಿಟ್ಟ ಸಂಶೋಧಕರು

ಚಿಕ್ಕಮಗಳೂರಿನ ಮಧುಗುಂಡಿ ಗ್ರಾಮದಲ್ಲಿ ಸಂಶೋಧಕರು 'ಪಿಲಿಯಾ ಮಲೆನಾಡು' ಎಂಬ ಹೊಸ ಜಿಗಿಯುವ ಜೇಡದ ಪ್ರಭೇದವನ್ನು ಕಂಡುಹಿಡಿದಿದ್ದಾರೆ. ಸುಮಾರು 123 ವರ್ಷಗಳ ನಂತರ ಈ ಕುಲದ ಜೇಡ ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಗಂಡು ಮತ್ತು ಹೆಣ್ಣು ಎರಡೂ ಜೇಡಗಳು ಪತ್ತೆಯಾಗಿವೆ. 

Read Full Story
07:22 PM (IST) Nov 21

Karnataka News Liveಡೇಂಜರಸ್​ ಜಾಗದ ಚಾಲೆಂಜ್​ ಜೊತೆ ಮತ್ತೆ ಡಾ.ಬ್ರೋ ಪ್ರತ್ಯಕ್ಷ - ಈ ಬಾರಿ ಸೀದಾ ಪಾತಾಳ ಲೋಕದ ದರ್ಶನ!

ಕೆಲಕಾಲ ಯುಟ್ಯೂಬ್​ನಿಂದ ದೂರವಿದ್ದ ಡಾ.ಬ್ರೋ ಅಲಿಯಾಸ್ ಗಗನ್, ಇದೀಗ ಮಾರಿಟೇನಿಯಾ ದೇಶದ ವೀಡಿಯೋದೊಂದಿಗೆ ಮರಳಿದ್ದಾರೆ. ಇಲ್ಲಿನ ಭೂಗತ ಕೊಳವೆ ವ್ಯವಸ್ಥೆಯನ್ನು 'ಪಾತಾಳ ಲೋಕ' ಎಂದು ಹಾಸ್ಯಮಯವಾಗಿ ವರ್ಣಿಸಿ, ಅದರ ನಿಜವಾದ ಉದ್ದೇಶವನ್ನು ಕುತೂಹಲಕಾರಿಯಾಗಿ ವಿವರಿಸಿದ್ದಾರೆ.
Read Full Story
07:09 PM (IST) Nov 21

Karnataka News Liveಕರ್ನಾಟಕ ಹೊಸ ಐಟಿ ನೀತಿ - ಬೆಂಗಳೂರಿಂದ ಹೊರಗೆ ಸಿಟಿಗಳಲ್ಲಿ ಕೆಲಸ ಮಾಡೋರಿಗೆ 50 ಸಾವಿರ ಪ್ರೋತ್ಸಾಹ ಧನ!

ಕರ್ನಾಟಕ ಹೊಸ ಐಟಿ ನೀತಿ 2025-30 ಅನ್ನು ಘೋಷಿಸಿದ್ದು, ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 2ನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಈ ನೀತಿಯಡಿ, ಉದ್ಯೋಗಿಗಳನ್ನು ಸ್ಥಳಾಂತರಿಸುವ ಕಂಪನಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಮತ್ತು ಪ್ರತಿ ಉದ್ಯೋಗಿಗೆ ₹50,000 ವರೆಗೆ ಪ್ರೋತ್ಸಾಹ ಧನ.

Read Full Story
05:52 PM (IST) Nov 21

Karnataka News Liveಅನಿಷ್ಠ ಪದ್ದತಿ ಇನ್ನೂ ಜೀವಂತ! ಬಹಿಷ್ಕಾರ ಹಿಂಪಡೆಯಲು 16 ಊರು ಕಟ್ಟೆಮನೆಯವರ ವಿರೋಧ 80 ಕುಟುಂಬಗಳ ಮೌನ ರೋಧನೆ!

ಚಾಮರಾಜನಗರ ಜಿಲ್ಲೆಯ ಯಡವನಹಳ್ಳಿ ಗ್ರಾಮದಲ್ಲಿ, ಎರಡು ವರ್ಷಗಳ ಹಿಂದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮ*ಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ 80 ಕುಟುಂಬಗಳನ್ನು ಕುಲದಿಂದ ಹೊರಹಾಕಲಾಗಿದೆ. ಕಟ್ಟೆಮನೆಯ ಈ ತೀರ್ಪಿನಿಂದಾಗಿ ಯಾವುದೇ ಶುಭ ಸಮಾರಂಭಗಳಲ್ಲಿ ಹೋಗುವಂತಿಲ್ಲ.

Read Full Story
05:44 PM (IST) Nov 21

Karnataka News Liveನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ

ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ, ನಿವೃತ್ತಿ ಜೀವನದಲ್ಲಿ ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದ 78 ವರ್ಷದ ಹಿರಿಯ ನಾಗರೀಕನ ಪ್ರಶ್ನೆಗೆ ಸದ್ಯ ಪೊಲೀಸರ ಬಳಿಯೂ ಉತ್ತರ ಸಿಕ್ಕಿಲ್ಲ.

Read Full Story
05:03 PM (IST) Nov 21

Karnataka News Liveಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?

'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಹಾಗೂ ರೀಲ್ಸ್ ಪಾರ್ಟನರ್ ಆಗಿದ್ದ ಅರುಣ್ ವೆಂಕಟೇಶ್ ಜೊತೆ ದಿಢೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು 'ವಿಡಿಯೋ ಪಾರ್ಟನರ್' ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

Read Full Story
04:56 PM (IST) Nov 21

Karnataka News Liveಅದ್ದೂರಿ ಮದುವೆಯಾಗಿ, ಹನಿಮೂನ್‌ಗೆ ಹೊರಟ Amruthadhaare Serial ನಟಿ ಮೇಘಾ ಶೆಣೈ; ಫೋಟೋಗಳಿವು

Amruthadhaare Serial Actress Megha Shenoy Photos: ಅಮೃತಧಾರೆ ಧಾರಾವಾಹಿಯ ಸುಧಾ ಪಾತ್ರಧಾರಿ ನಟಿ ಮೇಘಾ ಶೆಣೈ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಮದುವೆಯ ಅದ್ದೂರಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಹನಿಮೂನ್‌ಗೆ ತೆರಳಿದ್ದಾರೆ. 

Read Full Story
04:18 PM (IST) Nov 21

Karnataka News LiveBigg Boss - ಮಲಗಿರೋ ಸೂರಜ್​ನ ಮಧ್ಯರಾತ್ರಿ ಎಬ್ಬಿಸಿ ಪಕ್ಕದಲ್ಲಿ ಬಂದು ರಾಶಿಕಾ ಶೆಟ್ಟಿ ಹೀಗೆ ಮಾಡೋದಾ?

ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ನಡುವಿನ ಪ್ರೇಮ ಕಹಾನಿ ಸದ್ದು ಮಾಡುತ್ತಿದೆ. ವೀಕೆಂಡ್ ಟೆನ್ಷನ್ ನಡುವೆಯೂ, ರಾಶಿಕಾ ಶೆಟ್ಟಿ ನೀರಿನಲ್ಲಿ ಏನೋ ಕಾಣಿಸುತ್ತಿದೆ ಎಂದು ಸೂರಜ್ ತಲೆ ಕೆಡಿಸಿದ್ದು, ಇವರಿಬ್ಬರ ಜೋಡಿಗೆ ಅಭಿಮಾನಿಗಳು 'ಸುರಾಶಿ' ಎಂದು ಹೆಸರಿಟ್ಟಿದ್ದಾರೆ.

Read Full Story
04:14 PM (IST) Nov 21

Karnataka News Liveನಾನೇ ಸಿಎಂ, ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ, ಮೈಸೂರಿನಿಂದ ಸಿದ್ದರಾಮಯ್ಯ ಖಡಕ್ ಸಂದೇಶ!

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳನ್ನು ತಳ್ಳಿಹಾಕಿದ್ದು, ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರದ ಆಮದು ನೀತಿಯನ್ನು ವಿರೋಧಿಸಿ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.

Read Full Story