- Home
- Entertainment
- TV Talk
- ಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?
ಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?
'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಹಾಗೂ ರೀಲ್ಸ್ ಪಾರ್ಟನರ್ ಆಗಿದ್ದ ಅರುಣ್ ವೆಂಕಟೇಶ್ ಜೊತೆ ದಿಢೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು 'ವಿಡಿಯೋ ಪಾರ್ಟನರ್' ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ನಟಿ ರಜಿನಿ
‘ನಾಬಿಬ್ಬರೂ ಗಂಡ-ಹೆಂಡತಿ ಅಲ್ಲ. ವಿಡಿಯೋ ಪಾರ್ಟನರ್ ಅಷ್ಟೇ ಎಂದು ಕೊನೆಯವರೆಗೂ ಹೇಳುತ್ತಲೇ ಇದೀಗ ದಿಢೀರ್ ಎಂದು ಅವರ ಜೊತೆನೇ ಮದುವೆಯಾಗಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ 'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ರಜಿನಿ. ಇವರು ಜಿಮ್ ಟ್ರೈನರ್ ಅರುಣ್ ವೆಂಕಟೇಶ್ (Arun Venkatesh) ಜೊತೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಟ್ಟಿಗೇ ರೀಲ್ಸ್
ಇವರಿಬ್ಬರೂ ಹಲವಾರು ವಿಡಿಯೋಗಳನ್ನು, ರೀಲ್ಸ್ಗಳನ್ನು ಹಲವು ತಿಂಗಳುಗಳಿಂದ ಒಟ್ಟಿಗೇ ಮಾಡುತ್ತಿದ್ದರು. ಆಗ ಮದುವೆಯ ಪ್ರಶ್ನೆ ಎದುರಾಗಿತ್ತು. ಅದನ್ನು ನಟಿ ನಿರಾಕರಿಸಿದ್ದರು. ಆದರೂ, ಗೆಳೆಯನ ಮದುವೆ ಆದರೂ ತಪ್ಪಿಲ್ಲ. ಅವರು ಹಲವು ವರ್ಷಗಳಿಂದ ನಮ್ಮ ಜೊತೆ ಇದ್ದಿರುತ್ತಾರೆ. ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅದೇ ರೀತಿ ಬೇರೆಯವರನ್ನು ಮದುವೆ ಆದರೂ ತಪ್ಪಿಲ್ಲ ಎಂದು ಹಿಂಟ್ ಕೂಡ ನೀಡಿದ್ದರು.
ವಿಶೇಷ ವಿಡಿಯೋ ರಿಲೀಸ್
ಇದೀಗ ಅವರು ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಮದುವೆಯಾದ ದಿನದಿಂದಲೂ ಇಬ್ಬರಿಗೂ ಬೇರೆ ಬೇರೆ ರೀತಿಯ ಕೆಲಸ ಇರುವುದರಿಂದ ನಾವಿಬ್ಬರೂ ಒಟ್ಟಿಗೇ ಸಿಕ್ಕಿದ್ದೇ ಕಡಿಮೆ ಎಂದಿದ್ದಾರೆ ನಟಿ.
ಪತಿಗೆ ಟ್ರೋಲ್
ನನ್ನ ಪತಿಯ ಬಾಡಿಯ ಬಗ್ಗೆ ಹಲವಾರು ಮಂದಿ ಟ್ರೋಲ್ ಮಾಡುವುದನ್ನು ನೋಡಿದ್ದೇನೆ. ಆದರೆ, ನನಗೆ ಅದರಿಂದ ಬೇಸರವಿಲ್ಲ. ಅವರು ಈ ರೀತಿಯ ಬಾಡಿ ಬಿಲ್ಡ್ ಮಾಡಲು ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದು ನುಡಿದಿದ್ದಾರೆ.
ತಲೆ ಕೆಡಿಸಿಕೊಳ್ಳುವುದಿಲ್ಲ
ಬೇರೆಯವರಿಗಾಗಿ ನಾವು ಬದುಕಬಾರದು. ನಮಗಾಗಿ ನಾವು ಬದುಕಬೇಕು. ಆದ್ದರಿಂದ ಇಂಥ ಟೀಕೆಗಳಿಗೆ ಬೇಸರಪಟ್ಟುಕೊಳ್ಳುವುದಿಲ್ಲ. ನಮ್ಮ ವಿರುದ್ಧ ಮಾತನಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ವಿದೇಶಕ್ಕೆ ಹೊರಟ ಅರುಣ್
ಪತಿ ಅಥ್ಲಿಟ್ ಆಗಿರುವ ಕಾರಣ, ಇದೇ ಕಾರಣಕ್ಕೆ ಅವರು ವಿದೇಶಕ್ಕೆ ಹೊರಟಿದ್ದಾರೆ. ಅವರನ್ನು ಕಳುಹಿಸಿ ಒಂಟಿಯಾಗಿ ಇರುವುದು ನನಗೆ ನೋವಿದೆ. ಆದರೆ, ಅವರು ಹೋಗಲೇಬೇಕಿರುವ ಕಾರಣ ಅವರನ್ನು ಕಳಿಸುಕೊಡುತ್ತಿದ್ದೇನೆ ಎಂದು ಪತಿಯನ್ನು ವಿದೇಶಕ್ಕೆ ಬೀಳ್ಕೊಟ್ಟಿದ್ದಾರೆ ನಟಿ ರಜಿನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

