ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ, ಇದೀಗ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ನೇರವಾಗಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ. 

ಬೆಂಗಳೂರು (ನ.21) ಕರ್ನಾಟಕ ರಾಜಕೀಯದಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿದೆ. ಅಧಿಕಾರ ಬದಲಾವಣೆ, ಸಂಪುಟ ವಿಸ್ತರಣೆ, ಏನಿಲ್ಲಾ ಏನಿಲ್ಲಾ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ರಾಜ್ಯ ರಾಜಕಾರಣ ಭಾರಿ ಚರ್ಚೆಯಾಗುತ್ತಿದೆ. ಬಣ ನಾಯಕರು, ಶಾಸಕರ ಗುಂಪು ಪ್ರತ್ಯೇಕವಾಗಿ ಸಭೆ ನಡೆಸುತ್ತಿದೆ. ಹೈಕಮಾಂಡ್ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಒಂದೆಡೆ ಮುಖ್ಯಮಂತ್ರಿ ನಾನೇ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಬಲಿಗರು ಸಭೆ ನಡೆಸಿದರೆ, ಇತ್ತ ಡಿಕೆ ಶಿವಕುಮಾರ್ ಬೆಂಬಲಿಗರೂ ದೆಹಲಿ ಪ್ರಯಾಣ, ಹೈಕಮಾಂಡ್ ಭೇಟಿ, ಮಾತುಕತೆ, ಸಭೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಮೊರೆ ಹೋಗಿದ್ದಾರೆ.

ದೇವರ ಮೊರೆ ಹೋದ ಡಿಕೆ ಶಿವಕುಮಾರ್

ರಾಜಕೀಯ ಚರ್ಚೆ,ಮಾತುಕತೆ ನಡುವೆ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಹಾಸನ ಜಿಲ್ಲೆ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಇದೀಗ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ. ಡಿಕೆಶಿವಕುಮಾರ್ ನಿವಾಸದ ಒಳಗೆ ವಿಶೇಷ ಪೂಜೆ ನೇರವೆರಿಸಲಾಗಿದೆ. ಡಿಕೆ ಶಿವಕುಮಾರ್ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಮೊರೆಹೋಗಿದ್ದಾರೆ.

ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕ ಭೇಟಿ ನೀಡಿದ್ದ ಡಿಕೆ ಶಿವಕುಮಾರ್

ಕೆಲ ತಿಂಗಳ ಹಿಂದೆ ಕಾರ್ಯಕ್ರಮಗಳ ನಡುವೆ ಡಿಕೆ ಶಿವಕುಮಾರ್ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಡಿಕೆ ಶಿವಕುಮಾರ್ ಮತ್ತೆ ಸಿದ್ದೇಶ್ವರ ಸ್ವಾಮಿ ಅನುಗ್ರಹ ಪಡೆದುಕೊಂಡಿದ್ದಾರೆ. ನಂಬಿದರ ಎಲ್ಲಾ ಇಷ್ಟಾರ್ಥಗಳನ್ನು ನೆರೆವೇರಿಸುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕಯಾಗಿದೆ.

ಇದೇ ದೇಗುಲಕ್ಕೆ ಭೇಟಿ ಬಳಿಕ ಯಡಿಯೂರಪ್ಪಗೆ ಒಲಿದಿತ್ತು ಸಿಎಂ ಪಟ್ಟ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದೇ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿದ ಬಳಿಕ ಮುಖ್ಯಮಂತ್ರಿ ಸ್ಥಾನ ಒಲಿದಿತ್ತು.

ಡಿಸಿಎಂ ಡಿಕೆಶಿವಕುಮಾರ್ ನಿವಾಸದಲ್ಲಿ ಶಾಸಕರ ಸಭೆ

ಒಂದೆಡೆ ಡಿಕೆ ಶಿವಕುಮಾರ್ ವಿಶೇಷ ಪೂಜೆ ಪ್ರಾರ್ಥನ ಸಲ್ಲಿಸಿದ್ದರೆ, ಮತ್ತೊಂದೆಡೆ ಸತತ ಸಭೆ ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲೇ ಮಹತ್ವದ ಸಭೆ ನಡೆದಿದೆ. ನಾಯಕತ್ವ ಚರ್ಚೆ ಬೆನ್ನಲ್ಲೇ ಶಾಸಕರ ಮೀಟಿಂಗ್ ತೀವ್ರ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಶಾಸಕರಾದ ಸಿ ಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್, ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಮುಖಂಡ ಆನಂದಗಡ್ಡದೇವರ ಮಠ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ. ನಿನ್ನೆಯಿಂದ ಶಾಸಕರ ಜೊತೆ‌ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಸತತ ಸಭೆ ನಡೆಸುತ್ತಿದ್ದಾರೆ. ಎಂಎಲ್ಎ ಹಾಗೂ ಎಂಎಲ್ ಸಿಗಳನ್ನ ಬೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಎಂಎಲ್ ಸಿಗಳ ಸಭೆ ನಡೆಸಿದ್ದರು. ಇಂದು ಶಾಸಕರ ಜೊತೆ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ.