ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳನ್ನು ತಳ್ಳಿಹಾಕಿದ್ದು, ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರದ ಆಮದು ನೀತಿಯನ್ನು ವಿರೋಧಿಸಿ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.
ಮೈಸೂರು: ಕರ್ನಾಟಕದಲ್ಲಿ ಪವರ್ ಶೇರಿಂಗ್ ಬಗ್ಗೆ ಚರ್ಚೆ ಜೋರಾಗಿದೆ. ಈ ಬೆನ್ನಲ್ಲೇ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ. ನಿಮಗೆ ಯಾಕೆ ಅನುಮಾನ. ಯಾಕೆ ಮತ್ತೆ ಮತ್ತೆ ಅದನ್ನ ಕೇಳುತ್ತೀರಾ. ಹೈ ಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ಯಾ. ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಎಲ್ಲದನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಹೈ ಕಮಾಂಡ್ ಇಲ್ಲಿಯವರೆ ಏನಾದರು ಮಾತನಾಡಿದ್ಯಾ? ಇಲ್ಲ ತಾನೇ.. ಹಾಗಾದ್ರೆ ಮತ್ತೆ ಯಾಕೆ ಆ ಪ್ರಶ್ನೆ. ಕೈ ಕಮಾಂಡ್ ಹೇಳುವುದನ್ನ ನಾನು ಪಾಲಿಸಬೇಕು ಶಾಸಕರು ಪಾಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿಕೆ ನೀಡಿದ್ದಾರೆ.
ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ: ಸಿಎಂ
ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆಗೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ. ನಾಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡ್ತಿನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕ ಕೆ ಹರೀಶ್ ಗೌಡ ಸಿಎಂ ಗುಸುಗುಸು ಮಾತು
ಇನ್ನು ಮೈಸೂರು ಪ್ರವಾಸಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚಾಮರಾಜ ಕ್ಷೇತ್ರ ಶಾಸಕ ಕೆ ಹರೀಶ್ ಗೌಡ ಮಾತನಾಡಿದ್ದು ಗಮನ ಸೆಳೆಯಿತು. ಶಾಸಕ ಕೆ ಹರೀಶ್ ಗೌಡ ಸಹ ದೆಹಲಿಗೆ ತೆರಳಿದ್ದ ಬಗ್ಗೆ ಮಾಹಿತಿ ಇದ್ದು, ನಿನ್ನೆ ದೆಹಲಿಗೆ ಹೋಗಿ ಇಂದು ವಾಪಸ್ಸು ಬಂದಿರುವ ಬಗ್ಗೆ ಮಾಹಿತಿ ಇದೆ. ಮೈಸೂರು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಬರುತ್ತಿದ್ದಂತೆ ಅವರ ಬಳಿ ಓಡಿದ ಹರೀಶ್ ಗೌಡ, ಗೌಪ್ಯವಾಗಿ ಸಿಎಂ ಜೊತೆ ಕೆಲ ನಿಮಿಷ ಮಾತನಾಡಿದ್ದಾರೆ. ವೇದಿಕೆಯಲ್ಲೇ ಸಿಎಂ ಸಿದ್ದರಾಮಯ್ಯ ಶಾಸಕ ಹರೀಶ್ ಗೌಡ ಗುಸು ಗುಸು ಮಾತುಕತೆ ಮಾಡಿರುವುದು ಗಮನ ಸೆಳೆಯಿತು.
ಸಿದ್ದರಾಮಯ್ಯ ಭಾಷಣದ ಮಧ್ಯ ನೀವೇ 5 ವರ್ಷ ಸಿಎಂ ಆಗಿರಿ ಎಂದ ಅಭಿಮಾನಿಗೆ ಉತ್ತರವೇನು ಕೊಟ್ರು?
ಇನ್ನು ಸಿಎಂ ಭಾಷಣದ ಮಧ್ಯ 5 ವರ್ಷ ಮುಖ್ಯಮಂತ್ರಿಯಾಗಿರಬೇಕೆಂದು ಅಭಿಮಾನಿಗಳು ಹೇಳಿದ್ದಕ್ಕೆ, ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಬಿಡಪ್ಪ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೀರ್ವಾದ ಇದ್ರೆ ಮಾತ್ರ ಅಧಿಕಾರ ಸಿಗುತ್ತೆ. ಜನ ಆಶೀರ್ವಾದ ಮಾಡದೆ ಇದ್ರೆ ಅಧಿಕಾರ ಸಿಗಲ್ಲ. 9 ಬಾರಿ ಚುನಾವಣೆಯಲ್ಲಿ ಗೆದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಆಶೀರ್ವಾದ ಮಾಡದೆ ಇದ್ರೆ ಏನು ಮಾಡಲು ಸಾಧ್ಯ ಎಂದರು.
ಮೆಕ್ಕೆ ಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಿಲ್ಲ:
ಇನ್ನು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿ ನೀಡಿ ಮೆಕ್ಕೆ ಜೋಳದ ಬಗ್ಗೆ ಮೀಟಿಂಗ್ ಮಾಡಲಾಗಿದೆ. ಎಂಎಸ್ ಪಿ 2400 ನಿಗದಿಯಾಗಿದೆ. ಖರೀದಿ ಕೇಂದ್ರ ಸ್ಥಾಪನೆ ಮಾಡಿಲ್ಲ ಎಂದು ರೈತರಿಗೆ ಖರೀದಿ ಕೇಂದ್ರ ಸ್ಥಾಪನೆ ಮಾಡಲು ಒತ್ತಾಯಿಸಿದ್ರು. ಮಾರುಕಟ್ಟೆಯಲ್ಲಿ ರೇಟ್ ಬಿದ್ದಿದ್ದೆ. ಮೆಕ್ಕೆ ಜೋಳವನ್ನ ರೈತರು ಜಾಸ್ತಿ ಬೆಳೆದಿದ್ದಾರೆ. 55 ಲಕ್ಷ ಮೆಟ್ರಿಕ್ಟ್ ಟನ್ ಉತ್ಪಾದನೆಯಾಗಿದೆ. ಇದು ಗೊತ್ತಿದ್ರು ಕೂಡ ಕೇಂದ್ರ ಸರ್ಕಾರ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳವನ್ನ ಆಮದು ಮಾಡಿಕೊಳ್ಳುತ್ತಿದೆ. ಇದರ ಅಗತ್ಯ ಇರಲಿಲ್ಲ. ಕರ್ನಾಟಕದಲ್ಲಿ ಬೆಳೆದಿದ್ದೇವೆ, ಇಲ್ಲೇ ಖರೀದಿ ಮಾಡಬಹುದಾಗಿತ್ತು. ಕೇಂದ್ರ ಸರ್ಕಾರ ಖರೀದಿ ಮಾಡುವ ಪ್ರಕ್ರಿಯೆ ಮಾಡಿಲ್ಲ. ಡಿಸ್ಟಿಲ್ರಿಸಿಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದಾರೆ. ಇದು ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ. ಡಿಸ್ಟಲರಿಸ್ ಗಳ ಜೊತೆ ಮಾತನಾಡಿ ಖರೀದಿ ಮಾಡುವಂತೆ ತಿಳಿಸಿದ್ದೇನೆ. ರೈತರಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತದೆ. ಮಾರುಕಟ್ಟೆ ಫೆಡರೇಷನ್ ಗೆ ಖರೀದಿ ಮಾಡಲು ಸೂಚನೆ ಮಾಡಿದ್ದೇನೆ. 10 ಲಕ್ಷ ಖರೀದಿ ಮಾಡಲು ಸೂಚನೆ ನೀಡಿದ್ದೇನೆ. ಖರೀದಿ ಕೇಂದ್ರ ಸ್ಥಾಪನೆ ಮಾಡಲು ತಿಳಿಸಿದ್ದೇನೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಅಮದು ಮಾಡಿಕೊಳ್ಳುವಂತೆ ಪತ್ರ ಬರೆಯುತ್ತೇನೆ. ನಮ್ಮಲ್ಲಿ ಹೆಚ್ಚು ಬೆಳೆದಿದ್ದಾರೆ ಹೊರಗಡೆ ಅಮದು ಮಾಡಿಕೊಳ್ಳುವುದುನ್ನ ನಿಲ್ಲಿಸುವಂತೆ ಪತ್ರ ಬರೆಯುತ್ತೇನೆ. ಹಣಕಾಸು ಸೆಕ್ರೆಟರಿ ಈ ಬಗ್ಗೆ ಮೀಟಿಂಗ್ ಮಾಡಲು ಸೂಚನೆ ನೀಡಿದ್ದೇನೆ ಎಂದರು.


