ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ 1.42 ಲಕ್ಷ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲು ಸಿದ್ಧತೆ ನಡೆದಿದೆ. ಕಳೆದ 4 ತಿಂಗಳುಗಳಿಂದ ನಡೆದ ಸಮೀಕ್ಷೆಯಲ್ಲಿ ದಾಖಲೆ ಒದಗಿಸದ ಹಾಗೂ ಅಸಹಕಾರ ತೋರಿದವರನ್ನು ಅನರ್ಹರೆಂದು ಪರಿಗಣಿಸುವ ಸಾಧ್ಯತೆಯಿದೆ. ಶೀಘ್ರದಲ್ಲೇ ಇಂಧನ ಇಲಾಖೆಗೆ ವರದಿ ಸಲ್ಲಿಕೆಯಾಗಲಿದೆ.
- Home
- News
- State
- Karnataka News Live: ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್ - ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!
Karnataka News Live: ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್ - ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಹಾಗೂ ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಮತ್ತು ಡಿ.ಕೆ.ಶಿವಕುಮಾರ್ ನಂಟಿದೆ ಎಂಬುದನ್ನು ನಿರೂಪಿಸಲು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಹರಡಿದ ವ್ಯಕ್ತಿ ಜತೆ ನನಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿದ ಆರೋಪದ ಪ್ರಕರಣದ 2ನೇ ಆರೋಪಿ ಕಾರ್ತಿಕ್ ಜತೆಗೆ ಹಾಲಿ ಮುಖ್ಯಮಂತ್ರಿ ಸಂಬಂಧ ಹೊಂದಿದ್ದಾರೆ. ಶಿವಕುಮಾರ್ ಮನೆಗೆ ಕಾರ್ತಿಕ್ ಬಂದಿರುವ ಕುರಿತು ನನ್ನ ಬಳಿ ಸಿಡಿಆರ್ ದಾಖಲೆ ಇದೆ. ಅಶ್ಲೀಲ ವಿಡಿಯೋ ಹಂಚಿದ ಪ್ರಕರಣದಲ್ಲಿ ಈ ಇಬ್ಬರೂ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ನನ್ನ ವಿರುದ್ಧ ಆರೋಪ ಮಾಡುವ ಮುಖ್ಯಮಂತ್ರಿಗಳು ತಾವು ಎಸಗಿರುವ ಅಕ್ರಮದ ಬಗ್ಗೆ ಏನು ಹೇಳುತ್ತಾರೆ? ಅದರ ಬಗ್ಗೆ ನಾನು ನೇರವಾಗಿ ಜನರಿಗೆ ಹೇಳಿದ್ದೇನೆ. ಈ ವ್ಯಕ್ತಿ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
Karnataka News Live ಬೆಸ್ಕಾಂ ವ್ಯಾಪ್ತಿಯ ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್ - ಬರೋಬ್ಬರಿ 1.42 ಲಕ್ಷ ಮಂದಿ ಯೋಜನೆಯಿಂದ ಔಟ್?!
Karnataka News Live ಸ್ಟಿಂಗ್ ಕೇಸ್ - ಸುದ್ದಿವಾಹಿನಿ ಮುಖ್ಯಸ್ಥನ ಮನೆ, ಕಚೇರಿಗೆ ಪೊಲೀಸರ ದಾಳಿ - ತನಿಖೆ ವೇಳೆ ಲಂಚಕ್ಕಾಗಿ ಬೇಡಿಕೆ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ದೂರಿನ ಮೇರೆಗೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
Karnataka News Live ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಜನಾಕ್ರೋಶ - ಸಿಎಂ ಸೂಚನೆ ಬೆನ್ನಲ್ಲೇ ಮೊಸರಿಗೆ ₹2 ಬೆಲೆ ಇಳಿಸಿದ ಕೆಎಂಎಫ್!
ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಕೆಎಂಎಫ್, ಸಾರ್ವಜನಿಕರ ಆಕ್ರೋಶದ ನಂತರ ಮೊಸರಿನ ದರವನ್ನು ಇಳಿಕೆ ಮಾಡಿದೆ. ಸರ್ಕಾರದ ಸೂಚನೆಯ ಮೇರೆಗೆ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ ₹2 ಕಡಿತಗೊಳಿಸಲು ನಿರ್ಧರಿಸಲಾಗಿದೆ. ಈ ಪರಿಷ್ಕೃತ ಹೊಸ ದರವು ನಾಳೆಯಿಂದಲೇ ಜಾರಿಗೆ ಬರಲಿದೆ.
Karnataka News Live ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್ - ಕೃಪಾ ಆಳ್ವಾ ಸೇರಿ 3 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು!
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಸೇರಿ ಮೂವರಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಷರತ್ತುಬದ್ಧ ಜಾಮೀನು ನೀಡಲಾಗಿದ್ದು, ಸೈಬರ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.
Karnataka News Live ರಾಜ್ಯದಲ್ಲಿ ಮರೆಯಾದ ಲಾಳಗೊಂಡ ಸಮುದಾಯದ ಇತಿಹಾಸ - ಬಯಲಾಟದ ಮೂಲಕ ಸಂಶೋಧನೆಗೆ ಹಂಪಿ ವಿವಿಗೆ ಮನವಿ
ಲಾಳಗೊಂಡ ಸಮುದಾಯದ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಯಲಾಟಗಳ ಮೂಲಕ ಸಂರಕ್ಷಿಸಬೇಕು ಎಂದು ಡಾ.ಕೆ.ಎಂ.ಮೇತ್ರಿ ಕಂಪ್ಲಿಯಲ್ಲಿ ತಿಳಿಸಿದರು. ಕುರುಗೋಡು ನೀಲಮ್ಮನ ಹೆಸರಿನಲ್ಲಿರುವ 800 ಮಠಗಳು ಹಾಗೂ ಲಾಳಗೊಂಡೇಶ್ವರರ ಚರಿತ್ರೆಯನ್ನು ಸಂಶೋಧಿಸಿ ಪುಸ್ತಕ ರೂಪದಲ್ಲಿ ಹೊರತರಲು ಶ್ರೀ ನಿಜಾನಂದ ಮಹಾಸ್ವಾಮೀಜಿ ಭರವಸೆ ನೀಡಿದರು.
Karnataka News Live ಜಿಕೆವಿಕೆ ಕೃಷಿ ಮೇಳದಲ್ಲಿ 3 ಹೊಸ ತಳಿಗಳು ಲೋಕಾರ್ಪಣೆ; ಬರಗಾಲದಲ್ಲೂ ಬಂಪರ್ ಇಳುವರಿ ಖಚಿತ
ಬೆಂಗಳೂರಿನ ಜಿಕೆವಿಕೆಯಲ್ಲಿ ನವೆಂಬರ್ 13ರಂದು ನಡೆಯಲಿರುವ ಕೃಷಿ ಮೇಳದಲ್ಲಿ ಮೂರು ಹೊಸ ಬೆಳೆ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಬರ ಸಹಿಷ್ಣು ಜಿಪಿಯು 101 ರಾಗಿ, ಹೆಚ್ಚು ಪ್ರೋಟೀನ್ ಇರುವ ಕೆಬಿಜೆಎ 18 ಬೀಜದ ದಂಟು ಮತ್ತು ಬಹುಪಯೋಗಿ ಎಂಎಎಚ್ 20-45 ಮುಸುಕಿನ ಜೋಳವನ್ನು ರೈತರಿಗಾಗಿ ಪರಿಚಯಿಸಲಾಗುತ್ತಿದೆ.
Karnataka News Live ಹಮಾರೇ ಪಾಸ್ ಪೂರಾ ಪಿಚ್ಚರ್ ಹೈ - ತಾರಕಕ್ಕೇರಿದ ಪ್ರಿಯಾಂಕ್-ಹೆಚ್‌ಡಿಕೆ ವಾರ್, ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಕೆಂಡ!
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದ್ದು, ಇನ್ನೆರಡು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಲ್ಲದೆ, ಕೆಪಿಎಸ್‌ಸಿ ಪ್ರಕರಣದಲ್ಲಿ ಇ.ಡಿ ಬಳಸಿ ತಮ್ಮನ್ನು ಸಿಲುಕಿಸಲುಯತ್ನ ಖರ್ಗೆ ಆರೋಪ.
Karnataka News Live ಪ್ರಜ್ವಲ್ ರೇವಣ್ಣ ಕೇಸಿನ ವಿಡಿಯೋ ಬಿಡುಗಡೆ ಆರೋಪಿ, ಡಿಕೆಶಿ ಮನೆಗೆ ಭೇಟಿ; ಕುಮಾರಸ್ವಾಮಿ ಸಿಡಿಆರ್ ರಿಲೀಸ್
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿದ ಆರೋಪಿ ಕಾರ್ತಿಕ್ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ನಡುವೆ ನೇರ ಸಂಪರ್ಕವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಬಳಿ ಸಿಡಿಆರ್ ದಾಖಲೆಗಳಿದ್ದು, ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ನಾಯಕರು ಈ ಷಡ್ಯಂತ್ರ ನಡೆಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.