ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನು ಸಮಯಪ್ರಜ್ಞೆ ಮೆರೆದು, ಟ್ರ್ಯಾಕ್ಟರ್ ಅನ್ನು ದೂರ ಚಲಾಯಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.
- Home
- News
- State
- Karnataka News Live: ಬಾಗಲಕೋಟೆ - ಟ್ರ್ಯಾಕ್ಟರ್‌ನಲ್ಲಿ ತುಂಬಿ ಹೊತ್ತೊಯ್ಯುತ್ತಿದ್ದ ಕಬ್ಬಿಗೆ ಆಕಸ್ಮಿಕ ಬೆಂಕಿ; ಚಾಲಕನ ಸಾಹಸದಿಂದ ತಪ್ಪಿದ ದುರಂತ
Karnataka News Live: ಬಾಗಲಕೋಟೆ - ಟ್ರ್ಯಾಕ್ಟರ್‌ನಲ್ಲಿ ತುಂಬಿ ಹೊತ್ತೊಯ್ಯುತ್ತಿದ್ದ ಕಬ್ಬಿಗೆ ಆಕಸ್ಮಿಕ ಬೆಂಕಿ; ಚಾಲಕನ ಸಾಹಸದಿಂದ ತಪ್ಪಿದ ದುರಂತ

ಬೆಂಗಳೂರು: ‘ಎಚ್.ಡಿ.ಕುಮಾರಸ್ವಾಮಿ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ಆಗುವುದಾದರೆ ಬೇಗ ವಿಲೀನವಾಗಲಿ. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲವಿರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ, ಜೆಡಿಎಸ್ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲ ಇರುವುದಿಲ್ಲ. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
Karnataka News Live 9 January 2026ಬಾಗಲಕೋಟೆ - ಟ್ರ್ಯಾಕ್ಟರ್‌ನಲ್ಲಿ ತುಂಬಿ ಹೊತ್ತೊಯ್ಯುತ್ತಿದ್ದ ಕಬ್ಬಿಗೆ ಆಕಸ್ಮಿಕ ಬೆಂಕಿ; ಚಾಲಕನ ಸಾಹಸದಿಂದ ತಪ್ಪಿದ ದುರಂತ
Karnataka News Live 9 January 2026ಗಿಲ್ಲಿ ನಟನಿಗೆ ಪ್ಲೀಸ್ ಬಾಚಣಿಕೆ ಕೊಡಿ, ಟ್ಯಾಟೂ ಕಲಾವಿದನಿಂದ Bigg Bossಗೆ ಕುತೂಹಲದ ಮನವಿ ಸಲ್ಲಿಕೆ!
ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಯೊಬ್ಬರು ಅವರ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಾರೆ. ಆದರೆ, ಟ್ಯಾಟೂ ಹಾಕುವುದು ಕಷ್ಟವಾಗುತ್ತಿದೆ ಎಂದು ಕಲಾವಿದರೊಬ್ಬರು ತಮಾಷೆಯಾಗಿ, ಬಿಗ್‌ಬಾಸ್‌ಗೆ ಮತ್ತು ಕಲರ್ಸ್ ವಾಹಿನಿಗೆ ಗಿಲ್ಲಿಗೆ ಬಾಚಣಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
Karnataka News Live 9 January 2026ನಿಮ್ಮ ಮಗುವಿನ ಬ್ಯಾಗ್ ಒಮ್ಮೆ ತೂಕ ಮಾಡಿ ನೋಡಿ! ಕಾರವಾರದ ಸಮರ್ಥನಿಗೆ ಆದ ಸ್ಥಿತಿ ನಾಳೆ ನಿಮ್ಮ ಮಗುವಿಗೂ ಆಗಬಹುದು!
Karnataka News Live 9 January 2026ಸಿಐಡಿ ಎಂದರೆ ಕಾಂಗ್ರೆಸ್ ಪಾಲಿನ 'ವಾಷಿಂಗ್ ಮಷೀನ್' ಅಂದಿದ್ದ ಜೋಶಿ; ಈಗ ಬಳ್ಳಾರಿ ಕೇಸ್ ಕೂಡ ಸಿಐಡಿಗೆ!
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೆ ಹಸ್ತಾಂತರಿಸಿದೆ. ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಸೇರಿದಂತೆ ಹಲವು ನಾಯಕರ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಮುಖ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗಾಗಿ ಈ ನಿರ್ಧಾರ.
Karnataka News Live 9 January 2026ಗಿಲ್ಲಿಗೆ ಉಲ್ಟಾ ಹೊಡೀಲಿಲ್ಲಾ ಅಂದ್ರೆ ನನ್ ಹೆಸ್ರೇ ಚೇಂಜ್ ಮಾಡ್ಕೋತೀನಿ - ರಿಷಾ ಶಾಕಿಂಗ್ ಸ್ಟೇಟ್ಮೆಂಟ್!
ಬಿಗ್‌ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, 'ಗಿಲ್ಲಿ ನಟ' ವಿನ್ನರ್ ಆಗುವ ಮಾತುಗಳು ಬಲವಾಗಿವೆ. ಈ ನಡುವೆ, ಸಹ ಸ್ಪರ್ಧಿ ರಿಷಾ ಗೌಡ ಅವರು ಗಿಲ್ಲಿ ನಟನ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವನನ್ನು ಎಲ್ಲರೂ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತಾರೆ ಎಂದಿರೋ ರಿಷಾ ಹೇಳಿದ್ದೇನು?
Karnataka News Live 9 January 2026ಒಂದೇ ದಿನದಲ್ಲಿ ಜಿಗಿದ ಫಾಲೋವರ್ಸ್ ಕೌಂಟ್! 'ಟಾಕ್ಸಿಕ್' ಬೋಲ್ಡ್ ಬ್ಯೂಟಿ ನಟಾಲಿಗೆ ಫಿದಾ ಆದ ಫ್ಯಾನ್ಸ್!
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಕಾಣಿಸಿಕೊಂಡ ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್, ಬೋಲ್ಡ್ ದೃಶ್ಯಗಳಿಂದಾಗಿ ಭಾರೀ ಸದ್ದು ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಅವರ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
Karnataka News Live 9 January 2026ಪೊಲೀಸ್ ಇಲಾಖೆ ಕಾಂಗ್ರೆಸ್ ಪಾಲಿನ ವಾಷಿಂಗ್ ಮಷೀನ್ - ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ!
ಸುಜಾತಾ ಬಂಧನ ಪ್ರಕರಣಕ್ಕೆ ಸಂಬಂಧ ಕೇಂದ್ರ ಸಚಿವ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ. ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದು, ಹಳೆಯ ವಿಡಿಯೋ ಬಳಸಿ ರಾಜಕೀಯ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಸಿಐಡಿ ತನಿಖೆ ತಿರಸ್ಕರಿಸಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
Karnataka News Live 9 January 2026ನ್ಯಾಯಾಲಯದಲ್ಲಿ ಸೋಲೋದು ಖಚಿತವೆಂದು ದಾಂಡೇಲಿ ಹೋರಾಟಗಾರ ಹಿರಿಯ ವಕೀಲನ ಬರ್ಬರ ಹತ್ಯೆ, ಆರೋಪಿ ದೋಷಿಯೆಂದ ಕೋರ್ಟ್
ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಯಲ್ಲಾಪುರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಯನ್ನು ದೋಷಿ ಎಂದು ಘೋಷಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ದೋಷಿಗೆ ಶಿಕ್ಷೆಯ ಪ್ರಮಾಣ ಜ.13ರಂದು ಪ್ರಕಟವಾಗಲಿದೆ.
Karnataka News Live 9 January 2026'ಕಣ್ಣುಗಳೇ ಹೇಳುತ್ತಿವೆ' - ಕೊಹ್ಲಿ ಟೆಸ್ಟ್ ಕಮ್‌ಬ್ಯಾಕ್ ಇದು ಸರಿಯಾದ ಸಮಯವೆಂದ ರಾಬಿನ್ ಉತ್ತಪ್ಪ
ಮಾಜಿ ಆಟಗಾರ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹಿಂಪಡೆದು ಮರಳಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಅನಿರೀಕ್ಷಿತವಾಗಿ ನಿವೃತ್ತಿ ಘೋಷಿಸಿದ್ದ ಕೊಹ್ಲಿಯ ನಿರ್ಧಾರವನ್ನು ಸಂಜಯ್ ಮಂಜ್ರೇಕರ್ ಟೀಕಿಸಿದ್ದರು.
Karnataka News Live 9 January 2026ಫಾರ್ಮ್ ಹೌಸ್ ಹೆಸರಲ್ಲಿ ರೆಸಾರ್ಟ್ ನಿರ್ಮಾಣ; ಸಚಿವ ಜಮೀರ್ ಆಪ್ತ ಸರ್ಫರಾಜ್ ಖಾನ್‌ಗೆ ತಹಶೀಲ್ದಾರ್ ಶಾಕ್!
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು ಕೊಡಗಿನಲ್ಲಿ ಫಾರ್ಮ್ ಹೌಸ್ ನಿರ್ಮಾಣದ ನೆಪದಲ್ಲಿ ಅಕ್ರಮವಾಗಿ ಬೃಹತ್ ರೆಸಾರ್ಟ್.. ಭೂ ಪರಿವರ್ತನೆ ಮಾಡದೆ, ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿರುವ ಈ ಕಟ್ಟಡಕ್ಕೆ ತಹಶೀಲ್ದಾರರಿಂದ ನೋಟಿಸ್ ಜಾರಿ
Karnataka News Live 9 January 2026ಇಸ್ಲಾಂ ಧರ್ಮ ಎಂದಿಗೂ ಜಾತಿ ಭೇದ ಮಾಡಿಲ್ಲ 'ಸಾರೆ ಜಹಾನ್ ಸೆ ಅಚ್ಚಾ' ಹಾಡೋದು ಕಲಿಸಿದೆ - ಬಿಜೆಪಿ ವಿರುದ್ಧ ಸಚಿವ ಜಮೀರ್ ಕಿಡಿ
ಸಚಿವ ಜಮೀರ್ ಅಹ್ಮದ್ ಖಾನ್, 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ನಂತರ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದು, ಪಂಚ ಗ್ಯಾರಂಟಿಗಳ ಆಧಾರದ ಮೇಲೆ ಮುಂಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದರು.
Karnataka News Live 9 January 2026ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿಯಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ, ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಸರ್ಕಾರಿ ಭೂಮಿ ಒತ್ತುವರಿ ಆರೋಪದ ಮೇಲೆ ಶ್ರೀ ಶ್ರೀ ರವಿಶಂಕರ್ ವಿರುದ್ಧ ದಾಖಲಾದ ಎಫ್‌ಐಆರ್ ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಕಗ್ಗಲೀಪುರ ಗ್ರಾಮದಲ್ಲಿನ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ದಾಖಲೆಗಳನ್ನು ಪರಿಶೀಲಿಸದೆ ತಡೆ ನೀಡುವುದು ಸೂಕ್ತವಲ್ಲ ಎಂದಿದೆ.
Karnataka News Live 9 January 2026575 ಮೆಟ್ಟಿಲೇರಿ ಅಂಜನಾದ್ರಿ ಹನುಮನ ದರ್ಶನ ಪಡೆದ ಕ್ರಿಕೆಟಿಗ ಇಶಾಂತ್ ಶರ್ಮಾ!
ಟೀಂ ಇಂಡಿಯಾ ಕ್ರಿಕೆಟಿಗ ಇಶಾಂತ್ ಶರ್ಮಾ ಅವರು ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಕೊಪ್ಪಳದ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ.
Karnataka News Live 9 January 2026ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ 2025 ಪ್ರಕಟ - ಸುವರ್ಣ ನ್ಯೂಸ್ ಮಂಜುನಾಥ್, ಕನ್ನಡಪ್ರಭ ಅನಂತ್ ನಾಡಿಗ್ ಆಯ್ಕೆ!
ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್‌ನ ಮಂಜುನಾಥ್ ಟಿ. ಕನ್ನಡ ಪ್ರಭ ಅನಂತ ನಾಡಿಗ್ ಸೇರಿ 30 ಪತ್ರಕರ್ತರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ.
Karnataka News Live 9 January 2026ಸ್ಯಾನಿಟರಿ ಪ್ಯಾಡ್ ಜೊತೆಗೆ ಉಚಿತ ಕಪ್ ನೀಡುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಕರ್ನಾಟಕ ಸರ್ಕಾರವು 'ಶುಚಿ' ಯೋಜನೆಯಡಿ, ಮುಂದಿನ ಶೈಕ್ಷಣಿಕ ವರ್ಷದಿಂದ 9 ರಿಂದ 12ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಈ ಕ್ರಮವು, ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ ಜಾರಿಯಾಗುತ್ತಿದೆ.
Karnataka News Live 9 January 2026'ಪೊಲೀಸರೇ ದುಶ್ಯಾಸನ ರೀತಿ ವರ್ತಿಸಿದ್ದಾರೆ..' ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ, ಆರ್ ಅಶೋಕ್ ಕಿಡಿ!
ಹುಬ್ಬಳ್ಳಿಯ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿ, ಪ್ರಕರಣದ ವಿಡಿಯೋ ವೈರಲ್ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು. ಈ ಘಟನೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿದರು..
Karnataka News Live 9 January 2026ಮೈಸೂರು ಜಂಬೂಸವಾರಿಗೆ ಇರೋ ಮನ್ನಣೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಯಾಕಿಲ್ಲ? ಹಿರಿಯ ನಟ ದತ್ತಣ್ಣ ಪ್ರಶ್ನೆ
Karnataka News Live 9 January 2026ಮೊಸಳೆಗೆ ಊಟ ಹಾಕಬೇಡಿ ಎಂದಿದ್ದ ಎಸಿಎಫ್ ಮದನ್ ನಾಯ್ಕ ಕೊಂದ ಪ್ರವಾಸಿಗರು, 14 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆ ಪ್ರಕಟ
ದಾಂಡೇಲಿ ಎಸಿಎಫ್ ಮದನ್ ನಾಯ್ಕ ಅವರ ಸಾವಿಗೆ ಸಂಬಂಧಿಸಿದ 14 ವರ್ಷಗಳ ಹಳೆಯ ಪ್ರಕರಣದಲ್ಲಿ ಯಲ್ಲಾಪುರ ಸಂಚಾರಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. 12 ಆರೋಪಿಗಳ ಪೈಕಿ 8 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದು, ಮುಖ್ಯ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Karnataka News Live 9 January 2026ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿಶಿರ್ ಶಾಸ್ತ್ರಿಯೊಂದಿನ ಒಡನಾಟ ಬಿಚ್ಚಿಟ್ಟ ಕಾವ್ಯಾ ಶೈವ! ಗಿಲ್ಲಿ ನಟ ಫುಲ್ ಸೈಲೆಂಟ್!
ಬಿಗ್ ಬಾಸ್ ಸೀಸನ್ 12ರ ಅಂತಿಮ ಹಂತದಲ್ಲಿ, ಸ್ಪರ್ಧಿ ಕಾವ್ಯಾ ಮಾಜಿ ಸ್ಪರ್ಧಿ ಶಿಶಿರ್ ಶಾಸ್ತ್ರಿಯೊಂದಿನ ಒಡನಾಟ ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್ ಮನೆ ಜೀವನದ ಸಮಸ್ಯೆಗಳನ್ನು ಎದುರಿಸಲು ಧೈರ್ಯ ನೀಡುತ್ತದೆ ಎಂಬ ಶಿಶಿರ್ ಮಾತನ್ನು ಕಾವ್ಯಾ ನೆನಪಿಸಿಕೊಂಡಾಗ ಗಿಲ್ಲಿ ನಟ ಕೂಡ ಅಲ್ಲಿಯೇ ಇದ್ದರು.
Karnataka News Live 9 January 2026ಬೆಂಗಳೂರು ಶಾಕಿಂಗ್ - ಯುವತಿಗೆ ಲೈಂಗಿಕ ಕಿರುಕುಳ ನೀಡಿ ಮಾನಹಾನಿಗೆ ಯತ್ನಿಸಿದ ಡೆಲಿವರಿ ಬಾಯ್!
ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್ ಓರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿಯ ಕಿರುಚಾಟದಿಂದ ಹೆದರಿ ಪರಾರಿಯಾದ ಆರೋಪಿ, ಮತ್ತೆ ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.