ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಸುವರ್ಣ ನ್ಯೂಸ್‌ನ ಮಂಜುನಾಥ್ ಟಿ. ಕನ್ನಡ ಪ್ರಭ ಅನಂತ ನಾಡಿಗ್ ಸೇರಿ 30 ಪತ್ರಕರ್ತರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ.

ಬೆಂಗಳೂರು (ಜ.09): ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಸುವರ್ಣ ನ್ಯೂಸ್ ಆನೇಕಲ್ ವರದಿಗಾರರಾದ ಮಂಜುನಾಥ್ ಟಿ. ಹಾಗೂ ಕನ್ನಡ ಪ್ರಭ ಪತ್ರಿಕೆ ತರೀಕೆರೆ ವರದಿಗಾರ ಅನಂತ ನಾಡಿಗ್ ಸೇರಿದಂತೆ 30 ಜನರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜನವರಿ 8, 2026 ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಪ್ರಶಸ್ತಿ:

ಪತ್ರಿಕೋದ್ಯಮದಲ್ಲಿನ ಸುದೀರ್ಘ ಸೇವೆಯನ್ನು ಪರಿಗಣಿಸಿ ಹಿರಿಯ ಪತ್ರಕರ್ತೆ ಶ್ರೀಮತಿ ಸರಿತಾ ರೈ ಅವರಿಗೆ 2025ನೇ ಸಾಲಿನ 'ವಿಶೇಷ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ವಾರ್ಷಿಕ ಪ್ರಶಸ್ತಿಗಳು:

ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 30 ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಗೌರವವು ತಲಾ 50,000 ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿಜೇತರ ಪಟ್ಟಿ:

  1. ಡಿ. ಕುಮಾರಸ್ವಾಮಿ
  2. ಬನಶಂಕರ ಆರಾಧ್ಯ
  3. ಹೇಮಾ ವೆಂಕಟ್
  4. ಮಂಜುನಾಥ್ ವೈ.ಎಲ್.
  5. ಅನಂತ ನಾಡಿಗ್
  6. ಗುರುರಾಜ್ ವಾಮನರಾವ್ ಜಮಖಂಡಿ
  7. ಎಂ.ಎಂ. ಪಾಟೀಲ್
  8. ಎಲ್. ವಿವೇಕಾನಂದ
  9. ಕೆ. ಭರತ್‌ರಾಜ್ ಸಿಂಗ್
  10. ಪ್ರೊ. ಪೂರ್ಣಾನಂದ
  11. ಮೊಹಮ್ಮದ್ ಅಸದ್
  12. ತುಂಗರೇಣುಕಾ
  13. ಮೊಹಿಯುದ್ದೀನ್ ಪಾಷಾ
  14. ರುದ್ರಪ್ಪ ಅಸಂಗಿ
  15. ಸತೀಶ್ ಆಚಾರ್ಯ
  16. ಸೋಮಶೇಖರ್ ಪಡುಕೆರೆ
  17. ಗುಲ್ನಾರ್ ಮಿರ್ಝಾ
  18. ಗಣೇಶ ಹೆಗಡೆ ಇಟಗಿ
  19. ಆರತಿ ಹೆಚ್‌.ಎನ್‌.
  20. ಕೆ. ಲಕ್ಷ್ಮಣ
  21. ಉಮಾ ಅನಂತ್
  22. ಮಂಜುನಾಥ ಮಹಾಲಿಂಗಪೂರ
  23. ಮಂಜುನಾಥ ಟಿ.
  24. ಮಲ್ಲಿಕಾಚರಣ ವಾಡಿ
  25. ಪ್ರತಿಮಾ ನಂದಕುಮಾರ್
  26. ಅಮಿತ್ ಉಪಾಧ್ಯೆ
  27. ಪ್ರಭುಸ್ವಾಮಿ ನಾಟೇಕರ್
  28. ಸಿದ್ದೇಗೌಡ ಎನ್.
  29. ಸಂಜೀವ ಕಾಂಬ್ಳೆ
  30. ನೀಲಕಂಠ ಕೆ.ಆರ್.

ದತ್ತಿ ಪ್ರಶಸ್ತಿಗಳ ವಿವರ:

ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅದರ ವಿವರ ಇಂತಿದೆ:

ಆಂದೋಲನ ದತ್ತಿ ಪ್ರಶಸ್ತಿ: ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ.

ಅಭಿಮಾನಿ ದತ್ತಿ ಪ್ರಶಸ್ತಿ: ಶಿವು ಹುಣಸೂರು (ವಿಜಯವಾಣಿ).

ಮೈಸೂರು ದಿಗಂತ ದತ್ತಿ ಪ್ರಶಸ್ತಿ: ಸಂತೋಷ ಈ. ಚಿನಗುಡಿ (ಪ್ರಜಾವಾಣಿ).

ಅಭಿಮನ್ಯ ದತ್ತಿ ಪ್ರಶಸ್ತಿ: ಚಂದ್ರಶೇಖರ ಬೆನ್ನೂರು (ವಿಜಯ ಕರ್ನಾಟಕ).

ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ನಾಗರಾಜು ವೈ. ಕೊಪ್ಪಳ (ಟಿವಿ-5 ವರದಿಗಾರ)

ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ: ಡಾ. ಎ. ನಾರಾಯಣ.

ಅರಗಿಣಿ ದತ್ತಿ ಪ್ರಶಸ್ತಿ: ಚೇತನ್ ನಾಡಿಗೇರ.

ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ: ಪ್ರಹ್ಲಾದ್ ಕುಳಲಿ.

ಕೆ.ಯು.ಡಬ್ಲ್ಯು.ಜೆ. ದತ್ತಿ ಪ್ರಶಸ್ತಿ: ಕೆ.ಆನಂದ ಶೆಟ್ಟಿ.