- Home
- Entertainment
- TV Talk
- ಗಿಲ್ಲಿ ನಟನಿಗೆ ಪ್ಲೀಸ್ ಬಾಚಣಿಕೆ ಕೊಡಿ, ಟ್ಯಾಟೂ ಕಲಾವಿದನಿಂದ Bigg Bossಗೆ ಕುತೂಹಲದ ಮನವಿ ಸಲ್ಲಿಕೆ!
ಗಿಲ್ಲಿ ನಟನಿಗೆ ಪ್ಲೀಸ್ ಬಾಚಣಿಕೆ ಕೊಡಿ, ಟ್ಯಾಟೂ ಕಲಾವಿದನಿಂದ Bigg Bossಗೆ ಕುತೂಹಲದ ಮನವಿ ಸಲ್ಲಿಕೆ!
ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಯೊಬ್ಬರು ಅವರ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದಾರೆ. ಆದರೆ, ಟ್ಯಾಟೂ ಹಾಕುವುದು ಕಷ್ಟವಾಗುತ್ತಿದೆ ಎಂದು ಕಲಾವಿದರೊಬ್ಬರು ತಮಾಷೆಯಾಗಿ, ಬಿಗ್‌ಬಾಸ್‌ಗೆ ಮತ್ತು ಕಲರ್ಸ್ ವಾಹಿನಿಗೆ ಗಿಲ್ಲಿಗೆ ಬಾಚಣಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ.

ಗಿಲ್ಲಿಗೆ ಬಾಚಣಿಗೆ ಕೊಡಿ ಪ್ಲೀಸ್
ಬಿಗ್‌ಬಾಸ್‌ಗೂ ಮತ್ತು ಕಲರ್ಸ್ ವಾಹಿನಿಗೂ ಬಹುದೊಡ್ಡ ರಿಕ್ವೆಸ್ಟ್ ಮಾಡಿಕೊಳ್ತಿದ್ದೇನೆ. ದಯವಿಟ್ಟು ಗಿಲ್ಲಿ ನಟ (Bigg Boss Gilli Nata) ಬಾಚಣಿಗೆ ಕೊಡಿ. ಇಲ್ಲದೇ ಹೋದರೆ ನನಗೆ ತುಂಬಾ ತೊಂದರೆಯಾಗುತ್ತದೆ ಎಂದು ಫೇಮಸ್ ಟ್ಯಾಟೂ ಆರ್ಟಿಸ್ಟ್ ಒಬ್ಬರು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ!
ಏನಪ್ಪಾ ಸಂಬಂಧ?
ಟ್ಯಾಟೂ ಆರ್ಟಿಸ್ಟ್‌ಗೂ, ಗಿಲ್ಲಿ ನಟನಿಗೂ, ಬಾಚಣಿಕೆಗೂ ಏನಪ್ಪಾ ಸಂಬಂಧ ಎಂದುಕೊಳ್ಳಬಹುದು. ಅಲ್ಲೇ ಇರೋದು ಕುತೂಹಲ. ಇಂಥದ್ದೊಂದು ವಿಡಿಯೋ ಅನ್ನು ದಿ ಟ್ಯಾಟೂ ಘೋಸ್ಟ್ ಎನ್ನುವ ಇನ್‌ಸ್ಟಾಗ್ರಾಮ್‌ನಲ್ಲಿ ಕಲಾವಿದ ಶೇರ್ ಮಾಡಿಕೊಂಡಿದ್ದಾರೆ.
ಟ್ಯೂಟೂ ಹಾಕಿಸಿಕೊಂಡ ಅಭಿಮಾನಿ
ಅಷ್ಟಕ್ಕೂ ಆಗಿದ್ದೇನೆಂದರೆ, ಗಿಲ್ಲಿ ಅಭಿಮಾನಿಯೊಬ್ಬರು ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಳ್ಳಲು ಇವರ ಬಳಿ ಬಂದಿದ್ದಾರೆ. ಆದರೆ ಗಿಲ್ಲಿ ನಟನ ಕೂದಲು ಕೆದರಿ ಇರುವ ಕಾರಣ, ಅದರ ಟ್ಯಾಟೂ ಮಾಡುವುದು ಕಷ್ಟವಾಗ್ತಿದೆಯಂತೆ!ಆದ್ದರಿಂದ ತಮಾಷೆಯಾಗಿ ಈ ಒಂದು ರಿಕ್ವೆಸ್ಟ್ ಅನ್ನು ಅವರು ವಾಹಿನಿ ಮತ್ತು ಬಿಗ್‌ಬಾಸ್‌ಗೆ ಮಾಡಿಕೊಂಡಿದ್ದಾರೆ.
ಗಿಲ್ಲಿ ಕ್ರೇಜ್
ಅಂದಹಾಗೆ ಬಿಗ್‌ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಗಿಲ್ಲಿ ನಟನ ಮೇಲಿನ ಕ್ರೇಜ್ ಅಭಿಮಾನಿಗಳಿಗೆ ಹೆಚ್ಚಾಗುತ್ತಿದೆ. ಇದೀಗ ಇದು ಒಂದು ಲೆವೆಲ್ ಮೇಲಕ್ಕೆ ಹೋಗಿದೆ.ಕುಮಾರ್ ಎನ್ನುವವರು ಮಂಡ್ಯದಿಂದ ಟ್ಯಾಟೂ ಹಾಕಿಸಿಕೊಳ್ಳಲು ಬಂದಿದ್ದು, ಅವರಿಗೆ ಟ್ಯಾಟೂ ಹಾಕುವಾಗ ಕಲಾವಿದ ಈ ಒಂದು ರಿಕ್ವೆಸ್ಟ್ ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಫಿನಾಲೆ
ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಇದಾಗಲೇ ಬಹುತೇಕ ಫ್ಯಾನ್ಸ್ ಬಾಯಲ್ಲಿ ಗಿಲ್ಲಿ ನಟನ ಹೆಸರೇ ಇದೆ. ಅದನ್ನು ಬಿಟ್ಟರೆ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಇವರಲ್ಲಿ ಯಾರು ವಿನ್ ಆಗುತ್ತಾರೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

