- Home
- Entertainment
- TV Talk
- ಗಿಲ್ಲಿಗೆ ಉಲ್ಟಾ ಹೊಡೀಲಿಲ್ಲಾ ಅಂದ್ರೆ ನನ್ ಹೆಸ್ರೇ ಚೇಂಜ್ ಮಾಡ್ಕೋತೀನಿ: ರಿಷಾ ಶಾಕಿಂಗ್ ಸ್ಟೇಟ್ಮೆಂಟ್!
ಗಿಲ್ಲಿಗೆ ಉಲ್ಟಾ ಹೊಡೀಲಿಲ್ಲಾ ಅಂದ್ರೆ ನನ್ ಹೆಸ್ರೇ ಚೇಂಜ್ ಮಾಡ್ಕೋತೀನಿ: ರಿಷಾ ಶಾಕಿಂಗ್ ಸ್ಟೇಟ್ಮೆಂಟ್!
ಬಿಗ್ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, 'ಗಿಲ್ಲಿ ನಟ' ವಿನ್ನರ್ ಆಗುವ ಮಾತುಗಳು ಬಲವಾಗಿವೆ. ಈ ನಡುವೆ, ಸಹ ಸ್ಪರ್ಧಿ ರಿಷಾ ಗೌಡ ಅವರು ಗಿಲ್ಲಿ ನಟನ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವನನ್ನು ಎಲ್ಲರೂ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತಾರೆ ಎಂದಿರೋ ರಿಷಾ ಹೇಳಿದ್ದೇನು?

ಫಿನಾಲೆಗೆ ದಿನಗಣನೆ
ಇನ್ನೇನು ಬಿಗ್ಬಾಸ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಎಲ್ಲರ ಕಣ್ಣೂ ಮನೆಯಲ್ಲಿ ಇರುವ ಸ್ಪರ್ಧಿಗಳತ್ತ ನೆಟ್ಟಿದೆ. ಇದಾಗಲೇ ಗಿಲ್ಲಿ ನಟನೇ ಬಿಗ್ಬಾಸ್ ವಿನ್ನರ್ ಎನ್ನುವಷ್ಟರ ಮಟ್ಟಿಗೆ ಮಾತುಕತೆ ನಡೆಯುತ್ತಿದೆ.
ದೊಡ್ಡ ಅಭಿಮಾನಿ ಬಳಗ
ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವವರು ಸೇರಿದಂತೆ ಗಿಲ್ಲಿ ನಟನಿಗೆ (Bigg Boss Gilli Nata) ದೊಡ್ಡ ಅಭಿಮಾನಿ ಬಳಗವೇ ಇರುವ ಕಾರಣ, ಅವರೇ ವಿನ್ ಆಗುವುದು ಖಚಿತ ಎಂದು ಹೇಳಲಾಗುತ್ತಿದ್ದರೂ, ಕೊನೆಯ ಕ್ಷಣದವರೆಗೂ ಏನೂ ಹೇಳಲು ಆಗುತ್ತಿಲ್ಲ.
ಅವನ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೆ
ಅದರ ನಡುವೆಯೇ ಇದೀಗ ಬಿಗ್ಬಾಸ್ 12ರ ಸ್ಪರ್ಧಿಯಾಗಿದ್ದ ರಿಷಾ ಗೌಡ (Bigg Boss Risha Gowda) ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಇದಾಗಲೇ ರಿಷಾ ಅವರು, ತಾವು ಗಿಲ್ಲಿ ನಟನನ್ನು ತುಂಬಾ ತಪ್ಪಾಗಿ ತಿಳಿದುಕೊಂಡು ಬಿಟ್ಟಿದ್ದೆ. ಈಗ ನೋಡಿದ್ರೆ ಅವನೇ ನನ್ನ ಬೆಸ್ಟ್ ಫ್ರೆಂಡ್ ಅನ್ನಿಸತ್ತೆ ಎಂದಿದ್ದರು.
ಮುಖದ ಮುಂದೆ
ಅವನು ಏನೇ ಹೇಳೋದಿದ್ರೂ ಮುಖದ ಮುಂದೆನೇ ಹೇಳ್ತಾ ಇದ್ದ. ಹಿಂದೆ ಏನೂ ಕೆಟ್ಟದ್ದು ಮಾತನಾಡುವುದಿಲ್ಲ. ಆದರೆ ಅವನನ್ನು ಬಿಟ್ಟು ಎಲ್ಲರೂ, ಹಿಂದೆ ಮಾತನಾಡುವವರೇ. ಆದ್ದರಿಂದ ಅವನೇ ತುಂಬಾ ಒಳ್ಳೆಯವ ಅನ್ನಿಸ್ತಿದೆ ಎಂದಿದ್ದರು.
ಮೆಟ್ಟಿಲ ಥರ ಯೂಸ್
ಇದೀಗ ರಿಷಾ ಗೌಡ. ಲಾಸ್ಟ್ವರೆಗೂ ನಾನು ಹೇಳೋದನ್ನೇ ಅವರು ಮಾಡೋದು ನೋಡ್ತಾ ಇರಿ. ಎಷ್ಟು ಬೇಕೋ ಅಷ್ಟು ಮೆಟ್ಟಿಲ ಥರ ಯೂಸ್ ಮಾಡಿಕೊಳ್ತಾರೆ. ಅವನೂ ಸಾಥ್ ಕೊಡ್ತಾನೆ. ನಾನು ಬೆಳಿತಾ ಇದ್ದೀನಾ, ನೀನೂ ಬಾ ಅಂತಾನೆ. ಅವನು ಕೈ ಬಿಟ್ಟುಬಿಟ್ಟರೆ ಯಾರೂ ಮೇಲೆ ಎದ್ದೋಳಕ್ಕೆ ಆಗಲ್ಲ ಎಂದು ಮೂವಿ ಮ್ಯಾಜಿಕ್ ನ್ಯೂಸ್ಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

