ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಚಾಲಕನು ಸಮಯಪ್ರಜ್ಞೆ ಮೆರೆದು, ಟ್ರ್ಯಾಕ್ಟರ್ ಅನ್ನು ದೂರ ಚಲಾಯಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.
ಬಾಗಲಕೋಟೆ (ಜ.9): ಮೂರು ಟ್ರ್ಯಾಲಿಗಳಲ್ಲಿ ತುಂಬಿ ಹೊತ್ತೊಯ್ಯುತ್ತಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿಉರಿದ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಗೆ ಕಂಡು ಸ್ಥಳೀಯ ರೈತರು ಬೆಚ್ಚಿಬಿದ್ದರು.
ಧಗಧಗಿಸುವ ಬೆಂಕಿಯ ನಡುವೆಯೇ ಚಾಲಕನ ಸಾಹಸ
ತುಂಗಳ ಗ್ರಾಮದಿಂದ ಸಾವಳಗಿ ಮಾರ್ಗವಾಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಮೂರು ಟ್ರ್ಯಾಲಿಗಳಿಗೂ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕಬ್ಬು ಒಣಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಎದೆಗುಂದದ ಚಾಲಕ, ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಾಹುತ ತಪ್ಪಿಸಲು ಬೆಂಕಿ ಹತ್ತಿದ ಟ್ರ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ವಾಟರ್ ಸರ್ವಿಸ್ ಸೆಂಟರ್ ಬಳಿ ನಿಲ್ಲಿಸಿ ಕಾರ್ಯಾಚರಣೆ
ಗ್ರಾಮದ ರಸ್ತೆಗಳಲ್ಲಿ ಬೆಂಕಿ ಉಂಡೆಯಂತೆ ಸಾಗುತ್ತಿದ್ದ ಟ್ರ್ಯಾಕ್ಟರ್ ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಚಾಲಕ ಸಮಯಪ್ರಜ್ಞೆ ಮೆರೆದು ನೇರವಾಗಿ ಸಮೀಪದ 'ವಾಟರ್ ಸರ್ವಿಸ್ ಸೆಂಟರ್'ಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಹೈ-ಪ್ರೆಶರ್ ಪಂಪ್‌ಗಳ ಮೂಲಕ ನೀರಿನ ಸಿಂಪಡಣೆ ಮಾಡಿ ಬೆಂಕಿ ನಂದಿಸುವ ಪ್ರಾಥಮಿಕ ಪ್ರಯತ್ನ ಮಾಡಲಾಯಿತು.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಕಾಲಿಕ ಸ್ಪಂದನೆಯಿಂದಾಗಿ ಕಬ್ಬು ಸುಟ್ಟು ಹೋಗಿದ್ದರೂ, ಟ್ರ್ಯಾಕ್ಟರ್ ಇಂಜಿನ್ ಹಾಗೂ ಹೆಚ್ಚಿನ ಆಸ್ತಿಪಾಸ್ತಿ ಹಾನಿಯಾಗುವುದು ತಪ್ಪಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿ


