- Home
- News
- State
- Karnataka News Live: Bengaluru - PVR ಮಾಲ್ನಲ್ಲಿ ಬಳಸಿದ ಕಪ್ನಲ್ಲೇ ಪೆಪ್ಸಿ ಸರ್ವ್ ಮಾಡಿದ್ದ ಅಂಗಡಿಗೆ ಬೀಗ
LIVE NOW
Karnataka News Live: Bengaluru - PVR ಮಾಲ್ನಲ್ಲಿ ಬಳಸಿದ ಕಪ್ನಲ್ಲೇ ಪೆಪ್ಸಿ ಸರ್ವ್ ಮಾಡಿದ್ದ ಅಂಗಡಿಗೆ ಬೀಗ

ಸಾರಾಂಶ
ಶಿರಸಿ: ಕಳೆದ ವಾರದಿಂದ ತೀವ್ರ ಕುಡಿಯುವ ನೀರಿನ ಅಭಾವ ಹಾಗೂ ಆತಂಕವನ್ನು ಎದುರಿಸುತ್ತಿರುವ ಶಿರಸಿ ತಾಲೂಕಿನ ಲಂಡಕ್ನಳ್ಳಿ ಗ್ರಾಮದಲ್ಲಿ 6ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ಕೊಳವೆ ಬಾವಿಗಳಲ್ಲಿ ಎಣ್ಣೆ (ಆಯಿಲ್) ಮಿಶ್ರಿತ ನೀರು ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರಲ್ಲಿ ಸಾರ್ವಜನಿಕರ ದಿನನಿತ್ಯದ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಾವಿ ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ದಪ್ಪ ಪದರ ತೇಲುತ್ತಿರುವುದರಿಂದ ನೀರು ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಹಾಗೂ ಗೃಹ ಬಳಕೆಗೂ ಸಂಪೂರ್ಣ ಅಯೋಗ್ಯವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ಒಂದು ವಾರದಿಂದ ಬಾವಿಯಲ್ಲಿ ಎಣ್ಣೆ ಅಂಶ ಕಾಣಿಸಿಕೊಳ್ಳುತ್ತಿದ್ದು, ಕುಡಿಯಲು ಹನಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬಾವಿ ನೀರು ಕಲುಷಿತಗೊಳ್ಳಲು ಹತ್ತಿರದ ಎಸಳೆ ಗ್ರಿಡ್ನಲ್ಲಿರುವ ಟ್ರಾನ್ಸ್ಫಾರ್ಮರ್ಗಳಿಗೆ ಬಳಸುವ ಆಯಿಲ್ ಸೋರಿಕೆ ಆಗಿ ಬಾವಿಗಳಿಗೆ ಸೇರ್ಪಡೆಯಾಗಿರಬಹುದು ಎಂಬ ಶಂಕೆ ಮೂಡಿದೆ.
07:37 AM (IST) Nov 07
Karnataka News Live 7 November 2026 Bengaluru - PVR ಮಾಲ್ನಲ್ಲಿ ಬಳಸಿದ ಕಪ್ನಲ್ಲೇ ಪೆಪ್ಸಿ ಸರ್ವ್ ಮಾಡಿದ್ದ ಅಂಗಡಿಗೆ ಬೀಗ
ಬೆಂಗಳೂರಿನ ಫೋರಂ ಮಾಲ್ನ ಪಿವಿಆರ್ ಸಿನಿಮಾಸ್ನಲ್ಲಿ ಬಳಸಿದ ಕಪ್ನಲ್ಲಿ ಪೆಪ್ಸಿ ಮಾರಾಟ ಮಾಡಿದ್ದಕ್ಕಾಗಿ ಜ್ಯೂಸ್ ಕೌಂಟರ್ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಗ್ರಾಹಕರ ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.
Read Full Story