- Home
- Entertainment
- Sandalwood
- ಟಗರು ಚಿತ್ರದ ಡಾಲಿ ಪಾತ್ರದಂಥ ಪಾತ್ರ ಸಿಕ್ಕಿದೆ: ಗುರುರಾಜ್ ಜಗ್ಗೇಶ್ ಬಿಚ್ಚಿಟ್ರು ಅಮರಾವತಿ ರಹಸ್ಯ
ಟಗರು ಚಿತ್ರದ ಡಾಲಿ ಪಾತ್ರದಂಥ ಪಾತ್ರ ಸಿಕ್ಕಿದೆ: ಗುರುರಾಜ್ ಜಗ್ಗೇಶ್ ಬಿಚ್ಚಿಟ್ರು ಅಮರಾವತಿ ರಹಸ್ಯ
ಧರ್ಮ ಕೀರ್ತಿರಾಜ್ ಅಭಿನಯದ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಟ್ರೇಲರ್ ಬಿಡುಗಡೆ. ಗುರುರಾಜ್ ಜಗ್ಗೇಶ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಕ ಆಹಾರ, ಮಿಸ್ಸಿಂಗ್ ಮತ್ತು ಮರ್ಡರ್ ಮಿಸ್ಟರಿ ಚಿತ್ರದ ವಿಶೇಷ ಆಕರ್ಷಣೆಗಳಾಗಿವೆ.

ಟ್ರೇಲರ್ ಬಿಡುಗಡೆ
ಧರ್ಮ ಕೀರ್ತಿರಾಜ್ ನಾಯಕನಾಗಿ, ಗುರುರಾಜ್ ಜಗ್ಗೇಶ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಅಮರಾವತಿ ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಮಾಸ್, ಆಕ್ಷನ್, ಮಿಸ್ಸಿಂಗ್ ಹಾಗೂ ಮರ್ಡರ್ ಮಿಸ್ಟ್ರಿ ಕತೆಯನ್ನು ಈ ಚಿತ್ರದಲ್ಲಿ ನೋಡಬಹುದು.
ತೆಲುಗಿನ ವೇದ್ವಿಕ ನಾಯಕಿ
ಪುನೀತ್ ಅರಸೀಕೆರೆ ಚಿತ್ರವನ್ನು ನಿರ್ದೇಶಿಸಿದ್ದು, ಎನ್.ಅನಿತಾ ಸುಕೇಂದ್ರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕೆ.ಆರ್.ಪ್ರದೀಪ್ ಕಮಲಾಪುರ, ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕರು. ತೆಲುಗಿನ ವೇದ್ವಿಕ ಚಿತ್ರದ ನಾಯಕಿ. ಧರ್ಮ, ಸಾಧು ಕೋಕಿಲ, ಮಾಳವಿಕ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು, ಡ್ರ್ಯಾಗನ್ ಮಂಜು, ಕಾಕ್ರೋಚ್ ಸುಧೀ ತಾರಾಗಣದಲ್ಲಿದ್ದಾರೆ.
ಡಾಲಿ ಪಾತ್ರದಂತೆ ನನ್ನ ಪಾತ್ರ
ಗುರುರಾಜ್ ಜಗ್ಗೇಶ್, ‘ನಾನು ಇಲ್ಲಿ ನೆಗೆಟಿವ್ ಪಾತ್ರ ಮಾಡಿದ್ದೇನೆ. ಟಗರು ಚಿತ್ರದಲ್ಲಿ ಧನಂಜಯ ಅವರ ಡಾಲಿ ಪಾತ್ರದಂತೆ ನನ್ನ ಪಾತ್ರವಿದೆ’ ಎಂದರು. ಕೃತಕ ಆಹಾರದಿಂದ ಜನರಿಗೆ ಏನೆಲ್ಲ ತೊಂದರೆಗಳಾಗುತ್ತಿವೆ ಎಂಬುದು ಚಿತ್ರದ ಕತೆ.
ಚಿತ್ರದಲ್ಲಿ 4 ಹಾಡುಗಳು
ಪುನೀತ್ ಅರಸೀಕೆರೆ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಪಿ. ಪಿ. ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಆರ್.ಪ್ರದೀಪ್ ಕಮಲಪುರ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ಸಹ ನಿರ್ಮಾಪಕಿಯಾಗಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆಯಿದೆ.
ತಾರಾಗಣದಲ್ಲಿ ಯಾರಿದ್ದಾರೆ?
ಇನ್ನು ಗೌತಮ್ ಮಟ್ಟಿ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಶಿವು ಕರಗುಂದ ಅವರ ಸಂಭಾಷಣೆ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರಕ್ಕಿದೆ. ಇನ್ನು ಹಿರಿಯ ನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













