ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿ ಸಭೆ ನಡೆಸದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಶ್ಯಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸದೆ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಅವರು ಅಫಜಲಪುರ ಪ್ರತಿಭಟನೆಯಲ್ಲಿ ತರಾಟೆ.
ಕಲಬುರಗಿ (ನ.7): ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯಾದ್ಯಂತ ರೈತರು ಪ್ರತಿಭಟನೆ ಮಾಡ್ತಿದ್ದಾರೆ, ಬೆಳಗಾವೀಲಿ ಕಳೆದ ಹತ್ತು ದಿನಗಳಿಂದ ಊಟ ನಿದ್ದೆ ಬಿಟ್ಟು ರೈತರು ಪ್ರತಿಭಟನೆ ಮಾಡಿದ್ರು. ಇಷ್ಟಾದ್ರೂ ಕಲಬುರಗೀಲಿ ಕಬ್ಬಿನ ಬೆಲೆ ನಿಗದಿ ಮಾಡುವ ವಿಚಾರಕ್ಕೆ ಇಲ್ಲಿವರೆಗೆ ಒಂದೇ ಒಂದು ಸಭೆ ಮಾಡಿಲ್ಲಂದ್ರ ಏನರ್ಥ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಶ್ಯಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಭೆ ಮಾಡೋಕ ಕು.. ಡ್ಯಾಗ್ ಧಮ್ ಇಲ್ಲೇನು?
ಅಫಜಲಪೂರ ತಾಲೂಕಿನ ಚೌಡಾಪುರದಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮಿಜಿ ಸ್ವಾಮೀಜಿ ಈ ವೇಳೆ ಪ್ರಿಯಾಂಕ್ ಖರ್ಗೆ ಈವರೆಗೆ ಒಂದೇ ಒಂದು ಸಭೆ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಲ್ಲರೂ ಡಿಸಿ, ಶಾಸಕರ ಹೆಸರು ಹೇಳ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇನು ಉಂಡು ಮಲಗೋಕೆ ಇದ್ದಾರಾ? ಕಲಬುರಗಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೀವಾ ಅದೀರಿ.. ಅದರಲ್ಲೂ ರಾಜ್ಯದ ಹೋಂ ಮಿನಿಸ್ಟರ್ ಬೇರೆ ಅದೀರಿ. ಆದರೆ ಕಬ್ಬು ಬೆಲೆ ನಿಗದಿ ಸಂಬಂಧ ಇಲ್ಲಿವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಮೀಟಿಂಗ್ ನಡೆಸಿಲ್ಲ ನಿಮ್ಮ ಕು.. ಡ್ಯಾಗ ಧಮ್ ಇಲ್ಲೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರಿವರಿಗೆ ಬೈಕೋಂತ ಕುಡೋದು ಬಿಟ್ಟು ರೈತರಿಗೆ ಒಳ್ಳೆ ಕೆಲಸ ಮಾಡಿ
ದೊಡ್ಡ ಸ್ಥಾನದಲ್ಲಿ ರೈತರಿಗೆ ಜನಕ ಉಪಯೋಗ ಆಗುವಂತಹ ಕೆಲಸ ಮಾಡೋದುಬಿಟ್ಟು ದಿನ ಬೆಳಗಾದರೆ ಅವರಿಗೆ ಬೈಯೋದು, ಇವರಿಗೆ ಬೈಯೋದು ಮಾಡ್ಕೊಂತ ಕುಂತೀರಿ. ಆದ್ರೆ ರೈತರ ವಿಚಾರಕ್ಕೆ ಬಂದಾಗ ಧಮ್ ತೋರಿಸಬೇಕು, ಬೆಲೆ ನಿಗದಿಗೆ ಮೀಟಿಂಗ್ ಮಾಡಬೇಕು ಅದುಬಿಟ್ಟು ಕೆಲಸಕ್ಕೆ ಬಾರದ ಮಾತುಗಳು ಆಡ್ಕೋಂತ ಕುಂತೀರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರು.














