- Home
- Entertainment
- Sandalwood
- ಡ್ಯಾನ್ಸ್ ಹಿನ್ನೆಲೆಯ 'ಜನರಿಂದ ನಾನು ಮೇಲೆ ಬಂದೆ': ಆ ಕನಸಿಗೆ ವಿನೋದ್ ರಾಜ್, ಅಭಿಜಿತ್ ಸಾಥ್
ಡ್ಯಾನ್ಸ್ ಹಿನ್ನೆಲೆಯ 'ಜನರಿಂದ ನಾನು ಮೇಲೆ ಬಂದೆ': ಆ ಕನಸಿಗೆ ವಿನೋದ್ ರಾಜ್, ಅಭಿಜಿತ್ ಸಾಥ್
ನೈಜ ಘಟನೆಗಳಿಂದ ಪ್ರೇರಿತವಾದ ‘ಜನರಿಂದ ನಾನು ಮೇಲೆ ಬಂದೆ’ ಚಿತ್ರದ ಟ್ರೇಲರ್ ಬಿಡುಗಡೆ. ಗಂಧರ್ವರಾಜ್ ಶಂಕರ್, ಅಪ್ತಿ ಪಟವರ್ಧನ್ ಮತ್ತು ಕೃತಿಕಾ ದಿವಾಕರ್ ನಟನೆಯ ಈ ಚಿತ್ರ ಡ್ಯಾನ್ಸ್ ಕನಸು ಮತ್ತು ಹೋರಾಟದ ಕಥೆಯನ್ನು ತೆರೆದಿಡುತ್ತದೆ.

ಟ್ರೇಲರ್ ಬಿಡುಗಡೆ
ನೈಜ ಘಟನೆಗಳಿಂದ ಪ್ರೇರಿತವಾದ, ಡ್ಯಾನ್ಸ್ ಹಿನ್ನೆಲೆಯುಳ್ಳ ‘ಜನರಿಂದ ನಾನು ಮೇಲೆ ಬಂದೆ’ ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ.
ಚಿತ್ರಕ್ಕೆ ನವೀನ್ ನಿರ್ದೇಶನ
ನೆಟ್ಟಿಗೆರೆ ಬೋಳಾರ ಗ್ರಾಮದ ಬಿ. ಹೇಮಾವತಿ ನಿರ್ಮಾಣದ, ನವೀನ್ ನಿರ್ದೇಶನದ ಚಿತ್ರವಿದು. ಚಿತ್ರದಲ್ಲಿ ಗಂಧರ್ವರಾಜ್ ಶಂಕರ್ ನಾಯಕನಾಗಿ ನಟಿಸಿದ್ದು, ಅವರಿಗೆ ಮಂಗಳೂರು ಮೂಲದ ಅಪ್ತಿ ಪಟವರ್ಧನ್ ಹಾಗೂ ಮೈಸೂರಿನ ಕೃತಿಕಾ ದಿವಾಕರ್ ನಾಯಕಿಯರಾಗಿ ಸಾಥ್ ನೀಡಿದ್ದಾರೆ.
ವಿಶೇಷ ಪಾತ್ರಗಳಲ್ಲಿ ವಿನೋದ್ ರಾಜ್ ಹಾಗೂ ಅಭಿಜಿತ್
ಹಿರಿಯ ಕಲಾವಿದರಾದ ವಿನೋದ್ ರಾಜ್ ಹಾಗೂ ಅಭಿಜಿತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೈಲಜಾ ದ್ವಾರಕೀಶ್, ಶಿವಕುಮಾರ್ ಆರಾಧ್ಯ ತಾರಾಗಣದಲ್ಲಿದ್ದಾರೆ.
ಡ್ಯಾನ್ಸೇ ಸರ್ವಸ್ವ
ನಾಲ್ಕು ವರ್ಷಗಳ ಹಿಂದೆ ಚೆನ್ನೈ ಹಾಗೂ ಮಂಗಳೂರಿನಲ್ಲಿ ನಡೆದ ನೈಜ ಸಂಗತಿಗಳನ್ನು ಆಧರಿಸಿ ಈ ಕಥೆ ಹೆಣೆಯಲಾಗಿದೆ. ಕೊಳಗೇರಿಯಲ್ಲಿ ವಾಸಿಸುತ್ತಾ ಡ್ಯಾನ್ಸರ್ ಆಗಬೇಕೆಂದು ಕನಸು ಕಾಣುವ ಓರ್ವ ಬಡ ಪ್ರತಿಭೆ ಮತ್ತು ವಿದ್ಯಾಭ್ಯಾಸ ಬದಿಗಿಟ್ಟು ಡ್ಯಾನ್ಸೇ ಸರ್ವಸ್ವ ಎಂದುಕೊಂಡಿರುವ ಓರ್ವ ವಿದ್ಯಾವಂತ ಯುವಕ ಇವರಿಬ್ಬರ ಗುರಿ ಒಂದೇ ಆಗುವ ಕಥಾಹಂದರವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













