Gadag: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ. ಹೌದು! ಐದು ದಿನಗಳ ಕಾಲ ನಡೆಯುವ..
- Home
- News
- State
- Karnataka News Live: ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ - ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ
Karnataka News Live: ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ - ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಶನಿವಾರ ವಿವಿಧೆಡೆ ಉತ್ತಮ ಮಳೆಯಾಗಿದೆ. ಶೃಂಗೇರಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದ್ದೆ.
ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಬೃಹತ್ ಗಿಡಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿವೆ. ನಗರದ ರಾಣಿ ಚನ್ನಮ್ಮ ವೃತ್ತ ಸೇರಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನ್ಯಾಯಾಲಯದ ಆವರಣ ಸಂಪೂರ್ಣ ಕೆರೆಯಂತಾಗಿದೆ. ಜೋಡಕುರುಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ 7 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶೃಂಗೇರಿ ತಾಲೂಕಿನಾದ್ಯಂತ ಅಬ್ಬರದ ಮಳೆಯಾಗಿದೆ. ತುಂಗಾನದಿ ಉಗಮಸ್ಥಳ ಪಶ್ಚಿಮಘಟ್ಟಗಳ ತಪ್ಪಲು ಸುತ್ತಮುತ್ತಲ ಪ್ರದೇಶಗಳಲ್ಲಿ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇನ್ನು ಜು.5ರಂದು ಭಾನುವಾರ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜು.6ರ ನಂತರ 3 ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Karnataka News Live 5 July 2026 ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ - ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ
Karnataka News Live 5 July 2026 Laya - 20 ವರ್ಷದ ಬಳಿಕ ಕನ್ನಡಕ್ಕೆ ಮತ್ತೆ ಬಂದ 'ಗಂಡುಗಲಿ ಕುಮಾರರಾಮ' ನಟಿ ಲಯ..!
ಎರಡು ದಶಕಗಳ ಹಿಂದೆ ನಟ ಶಿವರಾಜ್‌ಕುಮಾರ್ ಅಭಿನಯದ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ಮಿಂಚಿದ್ದ ಈ ತೆಲುಗು ನಟಿ ಲಯ, ಈಗ ಮತ್ತೆ ಧ್ಯಾನ್ ಯೋಗೇಶ್ವರ್ ನಟನೆಯ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ.
Karnataka News Live 5 July 2026 SIR ನಡೆಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ - ಎಚ್‌ಡಿಕೆಗೆ ಸಚಿವ ಯು.ಟಿ. ಖಾದರ್ ತಿರುಗೇಟು
SIR ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಕ್ರಮ ನಡೆಯುತ್ತಿವೆ. ಹೀಗಾಗಿ ಈಗ ಆಗಿರುವ ಪ್ರಕ್ರಿಯೆಯನ್ನು ರದ್ದು ಮಾಡಿ, ಹೊರರಾಜ್ಯದ ದಕ್ಷ ಅಧಿಕಾರಿಗೆ ಉಸ್ತುವಾರಿ ನೀಡಲಿ ಎಂದು ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.
Karnataka News Live 5 July 2026 Central - ರೈತರಿಗೆ ಬಂಪರ್ ಜಾಕಪಾಟ್; ಕೇಂದ್ರದಿಂದ ಬಿಗ್ ಮೇಸೇಜ್, ಇನ್ಮುಂದೆ ಇಲ್ಲ ಅದರ ಕೊರತೆ!
Big message from the Centre: ಮಿಡಲ್ ಈಸ್ಟ್‌ನನಲ್ಲಿ ಹೆಚ್ಚಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಅನಿಶ್ಚಿತತೆಯು ವಿಶ್ವಾದ್ಯಂತ ವಿವಿಧ ವಸ್ತುಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ರೈತರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 5 July 2026 ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ - ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.
Karnataka News Live 5 July 2026 BBK13 - ಕನ್ನಡದ ಬಿಗ್ ಬಾಸ್ ಮನೆಗೆ ಹೋಗ್ತಾರಾ ಕರ್ನಾಟಕದ ಸ್ಟಾರ್ ಕ್ರಿಕೆಟರ್ ಪತ್ನಿ - ನಟಿ ಕೊಟ್ಟ ಸ್ಪಷ್ಟನೆ ವೈರಲ್
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿವೆ.
Karnataka News Live 5 July 2026 Entertainment - ಕೇವಲ 3 ದಿನದಲ್ಲಿ ಹೀರೋಯಿನ್ ಫಿಕ್ಸ್, ರಿಜೆಕ್ಟ್ ಆದ ಹಾಡುಗಳೇ ಸೂಪರ್ ಹಿಟ್; ಮುಡಿಗೇರಿಸಿಕೊಂಡಿದ್ದು 92 ಅವಾರ್ಡ್ಸ್!
movie with 92 awards: 2000ರಲ್ಲಿ ಬಿಡುಗಡೆಯಾದ ಈ ಚಿತ್ರ ಒಬ್ಬ ಹೀರೋವನ್ನು ರಾತ್ರೋರಾತ್ರಿ ಸೂಪರ್‌ಸ್ಟಾರ್ ಮಾಡಿತು. ತಿರಸ್ಕೃತ ರಾಗಗಳಿಂದ ಹಿಟ್ ಹಾಡುಗಳು ಸೃಷ್ಟಿಯಾಗಿದ್ದು ಮತ್ತು 92 ಪ್ರಶಸ್ತಿಗಳನ್ನು ಗೆದ್ದು ಗಿನ್ನೆಸ್ ದಾಖಲೆ ಬರೆದಿದ್ದು ಈ ಚಿತ್ರದ ವಿಶೇಷತೆ.
Karnataka News Live 5 July 2026 ಕೋಮಲ್ 53ನೇ ಹುಟ್ಟುಹಬ್ಬಕ್ಕೆ ಜಗ್ಗೇಶ್ ಮನಮುಟ್ಟುವ ಶುಭಾಶಯ - ಅಣ್ಣ-ತಮ್ಮನ ಬಾಂಧವ್ಯಕ್ಕೆ ಉದಾಹರಣೆ
Jaggesh Wishes Komal Kumar: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಹಾಗೂ ನಾಯಕ ನಟ ಕೋಮಲ್ ಕುಮಾರ್ ಅವರು ಜುಲೈ 4ರಂದು ತಮ್ಮ 53ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
Karnataka News Live 5 July 2026 Dhyan Yogeshwar - ಶಾಸಕ ಸಿ ಪಿ ಯೋಗೇಶ್ವರ್ ಪುತ್ರ ಧ್ಯಾನ್ ಸಿನಿಮಾಗೆ ಎಂಟ್ರಿ; ಸಿಎಂ ಡಿಕೆ ಶಿವಕುಮಾರ್ ಆಶೀರ್ವಾದ
ಈ ಎರಡೂ ಬಹುನಿರೀಕ್ಷಿತ ಚಿತ್ರಗಳ ಜಂಟಿ ಮುಹೂರ್ತ ಸಮಾರಂಭವು ಇಂದು ಭಾನುವಾರ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿ ಚಿತ್ರದ ಮುುಹೂರ್ತಕ್ಕೆ ಚಾಲನೆ ನೀಡಿ ಹೀರೋ ಧ್ಯಾನ್ ಅವರಿಗೆ ಶುಭ ಹಾರೈಸಿದರು.
Karnataka News Live 5 July 2026 ಬೆಂಗಳೂರಲ್ಲಿ 31 ಕಿ.ಮೀ ಪ್ರಯಾಣಿಸಿದ ಬಳಿಕ ಇನ್ಫೋಸಿಸ್ ಸಹ ಸಂಸ್ಥಾಪಕನ ಪೋಸ್ಟ್, ಎಲ್ಲವೂ ಟ್ರಾಫಿಕ್ ಮಹಿಮೆ
ಬೆಂಗಳೂರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ 31 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಪ್ರಯಾಣದ ಬಳಿಕ 3 ಪ್ರಮುಖ ವಿಚಾರಗಳನ್ನಿಟ್ಟುಕೊಂಡು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಗೋಪಾಲಕೃಷ್ಣನ್ ಹೇಳಿದ್ದೇನು?
Karnataka News Live 5 July 2026 ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರವೇಶ ಪರೀಕ್ಷೆ ಯಶಸ್ವಿ - 870 ಅಭ್ಯರ್ಥಿಗಳ ಹಾಜರಾತಿ
ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 1,299 ಅರ್ಜಿಗಳು ಅನುಮೋದನೆಗೊಂಡಿದ್ದು, 870 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.
Karnataka News Live 5 July 2026 ತಪ್ಪು ವಿಳಾಸಕ್ಕೆ ಆರ್ಡರ್, ನಕಲಿ ರಿಟರ್ನ್; ಲಕ್ಷಾಂತರ ರೂ. ದೋಚುತ್ತಿದ್ದ ಖದೀಮರು ಸಿಕ್ಕಿ ಬಿದ್ದದ್ದು ಅದೊಂದು ತಪ್ಪಿನಿಂದ!
ರಾಜಸ್ಥಾನದಲ್ಲಿ ಆನ್‌ಲೈನ್ ಆರ್ಡರ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದುಬಾರಿ ವಸ್ತುಗಳನ್ನು ತಪ್ಪು ವಿಳಾಸಕ್ಕೆ ಆರ್ಡರ್ ಮಾಡಿ, ರಿಟರ್ನ್ ಪ್ರಕ್ರಿಯೆಯಲ್ಲಿ ಅಸಲಿ ವಸ್ತುಗಳನ್ನು ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
Karnataka News Live 5 July 2026 41ರಲ್ಲೂ ಅದೇ ಗ್ಲಾಮರ್ - ಜ್ಯೋತಿ ರೈ ಹುಟ್ಟುಹಬ್ಬಕ್ಕೆ ಪತಿ ಸುಕು ಪೂರ್ವಜ್ ಸ್ಪೆಷಲ್ ವಿಶ್ ವೈರಲ್
Jyothi Rai 41st Birthday: ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಕನ್ನಡಿಗರ ಮನ ಗೆದ್ದಿದ್ದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.
Karnataka News Live 5 July 2026 India Vs Eng - ನಿನ್ನೆಯ ಸೋಲಿಗೆ ಬಿಷ್ಣೋಯಿ ಅಲ್ಲ, ಶ್ರೇಯಸ್ ಕಾರಣ ಎಂದ ಫ್ಯಾನ್ಸ್; ಆ ಹುಡಗನನ್ನ ಬಳಿಕೊಳ್ಳಲಿಲ್ವಾ ಅಯ್ಯರ್!
Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಅಯ್ಯರ್ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.
Karnataka News Live 5 July 2026 ಸೀರಿಯಲ್ಗಳಲ್ಲಿ ನಟಿಸುವ ಆಸೆಯೆ? ನಿಮಗಾಗಿ ಬಂದಿದೆ ಬಿಗ್ ಆಫರ್ - ಡಿಟೇಲ್ಸ್ ಇಲ್ಲಿದೆ
Karnataka News Live 5 July 2026 Postal Scheme - 1 ರೂ, ಕಳೆದುಕೊಳ್ಳದೆ, ಬಡ್ಡಿ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟಲ್ ನ್ಯೂವ್ ಸ್ಕೀಮ್! ಮಧ್ಯಮ ವರ್ಗದವರಿಗೆ ಜಾಕಪಾಟ್!
New Postal Scheme 2026 ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
Karnataka News Live 5 July 2026 DK Shivakumar Rishab Shetty Meet - ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ; ಸಿಎಂ ಜೊತೆ ಮಹತ್ವದ ಚರ್ಚೆ ನಡೆಸಿದ ನಟ
ಇತ್ತಿಚಿಗಷ್ಟೇ ಕರಾವಳಿ, ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿರುವ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿಯವರು ಸಿಎಂ ಡಿಕೆ ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.
Karnataka News Live 5 July 2026 33 ದಿನಗಳ ಬಳಿಕ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ; 775 ಗಂಟೆಯ ಯೋಗಸಮಾಧಿ
Karnataka News Live 5 July 2026 ಶ್ರೇಯಸ್ ಅಯ್ಯರ್‍ಗೆ ದೊಡ್ಡ ಅವಮಾನ.. ಸೋಲಿಗೆ ಹೊಣೆ ಮಾಡಿದ್ದು ಯಾರನ್ನ?
Karnataka News Live 5 July 2026 ಕೃಷ್ಣಾ ನದಿಗೆ ಹರಿದು ಬರುತ್ತಿದೆ 60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿನ ಭಾರಿ ಮಳೆಯಿಂದಾಗಿ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.