ಕಲರ್ಸ್ ಕನ್ನಡ ವಾಹಿನಿಯು 'ನಂದ ಗೋಕುಲ' ಸೀರಿಯಲ್ ತಂಡದಿಂದ ನಿರ್ಮಾಣವಾಗುತ್ತಿರುವ ಹೊಸ ಧಾರಾವಾಹಿಗಾಗಿ ಹೊಸ ಮತ್ತು ಅನುಭವಿ ಪ್ರತಿಭೆಗಳನ್ನು ಆಹ್ವಾನಿಸಿದೆ. 18 ರಿಂದ 60 ವರ್ಷ ವಯಸ್ಸಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ ಆಸಕ್ತ ಕಲಾವಿದರು ತಮ್ಮ ವಿವರಗಳನ್ನು ನೀಡಿರುವ ವಾಟ್ಸ್​ಆ್ಯಪ್​ ಸಂಖ್ಯೆಗೆ ಕಳುಹಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸುವ ಆಸೆ ಹೊತ್ತವರು ಅದೆಷ್ಟೋ ಮಂದಿ. ಇದೇ ಕಾರಣಕ್ಕೆ ಎಲ್ಲೆಲ್ಲೋ, ಯಾರ್ಯಾರಿಗೋ ದುಡ್ಡು ಕೊಟ್ಟು ಹಳ್ಳಕ್ಕೆ ಬಿದ್ದವರೂ ಇದ್ದಾರೆ, ಅದರಲ್ಲಿಯೂ ಅದೆಷ್ಟೋ ಯುವತಿಯರು ಯಾರದ್ದೋ ಮಾತು ನಂಬಿ, ಬಣ್ಣದ ಲೋಕಕ್ಕೆ ಕಾಲಿಡುವ ಆಸೆಯಿಂದ ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದು ಇದೆ. ಇದರ ಹೊರತಾಗಿಯೂ ಅದೆಷ್ಟೋ ಮಂದಿಗೆ ಟ್ಯಾಲೆಂಟ್​ ಇದ್ದರೂ ಅವಕಾಶಗಳು ಸಿಗುವುದು ಕಡಿಮೆ. ಸಂಬಂಧಿಕರೋ, ಪರಿಚಯದವರೋ, ಅಪ್ಪ-ಅಮ್ಮನೋ ಹೀಗೆ ಯಾರೋ ಒಬ್ಬರು ಈ ಕ್ಷೇತ್ರದಲ್ಲಿ ಇದ್ದರೆ, ಅವರಿಗೆ ಅವಕಾಶಗಳು ಸಿಗುವುದು ಸುಲಭವಾಗಿರುತ್ತದೆ. ಆದರೆ ಸಾಮಾನ್ಯ ಜನರಿಗೆ, ಎಷ್ಟೇ ಪ್ರತಿಭೆ ಇದ್ದರೂ ಅವಕಾಶಗಳು ಅದೃಷ್ಟವಂತರಿಗೆ ಮಾತ್ರ ಸಿಗುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಥವರಿಗಾಗಿ ಈಗ ಅದೃಷ್ಟದ ಬಾಗಿಲು ತೆರೆದಿದೆ. ಸೀರಿಯಲ್​ಗಳಲ್ಲಿ ನಟಿಸುವ ಆಸೆ ಇದ್ದವರಿಗೆ ಅರ್ಜಿ ಕರೆಯಲಾಗಿದೆ. ಇದಾಗಲೇ ಎಷ್ಟೋ ಸೀರಿಯಲ್​ ಕಲಾವಿದರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಸಿನಿಮಾಕ್ಕೂ ಹಾರಿದವರಿದ್ದಾರೆ. ಇಲ್ಲವೇ ಸೀರಿಯಲ್​ನಲ್ಲಿಯೇ ಉಳಿದು ಬಹುದೊಡ್ಡ ಹೆಸರು ಮಾಡಿದವರೂ ಇದ್ದಾರೆ. ಇಂಥವರಲ್ಲಿ ನೀವೂ ಒಬ್ಬರಾಗುವ ಅವಕಾಶವನ್ನು ಕಲರ್ಸ್​ ಕನ್ನಡ ವಾಹಿನಿ ನಿಮಗಾಗಿ ಕೊಟ್ಟಿದೆ. ­ಈ ಕುರಿತು ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಶ್ರವಂತ್​ ಅವರು ಮಾಹಿತಿ ನೀಡಿದ್ದಾರೆ.

ಪ್ರತಿಭೆಗಳಿಗೆ ಆಹ್ವಾನ

ನಂದ ಗೋಕುಲ ಸೀರಿಯಲ್​ ತಂಡದಲ್ಲಿ ಶೀಘ್ರವೇ ಹೊಸದೊಂದು ಧಾರಾವಾಹಿ ಶುರುವಾಗಲಿದ್ದು ಅದಕ್ಕೆ ಹೊಸ ಮತ್ತು ಅನುಭವಿ ಪ್ರತಿಭೆಗಳಿಗೆ ಆಹ್ವಾನ ನೀಡಲಾಗಿದೆ. ಬಣ್ಣ ಟಾಕೀಸ್​​ ನಿರ್ಮಾಣದ ತಂಡ ಇದಾಗಿದ್ದು, ಆಸಕ್ತ ಕಲಾವಿದರಿಂದ ಅರ್ಜಿಗೆ ಆಹ್ವಾನಿಸಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ 18ರಿಂದ 60 ವಯಸ್ಸಿನ ಎಲ್ಲರಿಗೂ ಸ್ವಾಗತ. ಆಸಕ್ತಿ ಕಲಾವಿದರು ಫೋಟೋ ಮತ್ತು ವಿವರಗಳನ್ನು ಈ ನಂಬರ್​ಗೆ ಕಳುಹಿಸುವಂತೆ ವಾಹಿನಿ ಹೇಳಿದೆ.

ಎಲ್ಲಿ ಕಳುಹಿಸಬೇಕು?

ಮೊಬೈಲ್​ ಸಂಖ್ಯೆ: 9008473959, ಕೇವಲ ವಾಟ್ಸ್​ಆ್ಯಪ್​ ಮಾಡುವಂತೆ ಹಾಗೂ ಕರೆ ಮಾಡದಂತೆ ಸೂಚನೆಯನ್ನು ನೀಡಲಾಗಿದೆ. ಆಯ್ಕೆಯಾದವರಿಗೆ ತಾವೇ ಕರೆ ಮಾಡುವುದಾಗಿ ವಾಹಿನಿ ಹೇಳಿದೆ.