ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.

ಗಂಗಾವತಿ (ಜು.05): ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ತಿಂಗಳು ಕನಕಗಿರಿಯಲ್ಲಿ ಮಹಿಳೆಯ ಮೇಲೆ ಅತ್ಯಾ*ಚಾರ ನಡೆಸಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೆ ಮತ್ತೇ ಕನಕಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದರಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರ್ಚನ ಗುಡ್ಡದ ತಾಂಡಾದ ಹೊರವಲಯದಲ್ಲಿ 25 ರಿಂದ 30 ವರ್ಷದ ಯುವಕನನ್ನು ಕೊಲೆ ಮಾಡಿ ಬಿಸಾಡಿದ್ದು, ಬೆಂಕಿ ಹಚ್ಚಿದ್ದಾರೆ. ಈ ಕೃತ್ಯ 3 -4 ದಿನಗಳಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ದುರ್ವಾಸೆಯಿಂದ ಪತ್ತೆಯಾದ ಕರಕಲು ಶವ

ನಿರ್ಜನ ಪ್ರದೇಶದಲ್ಲಿ ಕರಕಲಾದ ಶವದ ದುರ್ವಾಸನೆಯಿಂದ ಶವ ಪತ್ತೆಯಾಗಿದೆ. ಮಹಿಳೆಯೊಬ್ಬರು ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ದುರ್ವಾಸನೆ ಬಂದಿದೆ, ಇದನ್ನು ಜಾಡು ಹಿಡಿದ ಮಹಿಳೆ ವೀಕ್ಷಿಸಿದಾಗ ಕರಕಲಾದ ಶವ ಕಾಣಿಸಿಕೊಂಡಿದೆ.

ನಂತರ ಗ್ರಾಮಸ್ಥರು ಕೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೊಲೆಯಾಗಿದೆ ಎಂದು ಶಂಕಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತಯೇ ಶನಿವಾರ ರಾತ್ರಿ ಎಸ್ ಪಿ ರಾಮ್ ಎಲ್ ಅರಸಿದ್ದಿ, ಗಂಗಾವತಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಕನಕಗಿರಿ ಪೊಲೀಸ್ ಠಾಣೆಯ ಸಿಪಿಐ ನಾರಾಯಣ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.