11:45 PM (IST) Sep 30

Karnataka News Live 30 September 2025BBK 12 - ಕಷ್ಟವೋ-ಸುಖವೋ ಗಂಡನ ಜೊತೆ ಬಾಳು ಎಂದ ಮಲ್ಲಮ್ಮ; ಡಿವೋರ್ಸ್‌ಗೆ ಅಸಲಿ ಕಾರಣ ಬಿಚ್ಚಿಟ್ಟ ಜಾಹ್ನವಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಿರೂಪಕಿ, ನಟಿ ಜಾಹ್ನವಿ ಅವರು 12 ವರ್ಷ ಸಂಸಾರ ಮಾಡಿ ಯಾಕೆ ಡಿವೋರ್ಸ್‌ ಕೊಟ್ಟರು ಎಂದು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ, ಹಾಗಾದರೆ ಅಸಲಿ ಕಾರಣ ಏನು? 

Read Full Story
11:23 PM (IST) Sep 30

Karnataka News Live 30 September 2025Amruthadhaare Serial - ಮತ್ತೆ ಮನೆ ಖಾಲಿ ಮಾಡಿದ ಭೂಮಿಕಾ; ಗೌತಮ್‌ಗೆ ಹುಡುಕೋಕೆ ಇನ್ನೂ 5 ವರ್ಷ ಬೇಕಾ?

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಕಾಲ ಹುಡುಕಾಟದಿಂದ ಕೊನೆಗೂ ಗೌತಮ್‌ಗೆ ಭೂಮಿ ಕಾಣಿಸಿದ್ದಳು. ಈಗ ಮತ್ತೆ ಭೂಮಿ, ಗೌತಮ್‌ನಿಂದ ದೂರ ಆಗಿದ್ದಾಳೆ. ಹೀಗಾದರೆ ಭೂಮಿ-ಗೌತಮ್‌ ಒಂದಾಗೋದು ಕನಸಾಗಿ ಉಳಿಯತ್ತಾ?

Read Full Story
11:01 PM (IST) Sep 30

Karnataka News Live 30 September 2025ಬಿಗ್ ಬಾಸ್ ನೋಡೋದ್ರಿಂದ ನಮ್ಗೇನು ಸಿಗ್ತದೆ ದೋಸ್ತಾ ಎಂದ ಧನರಾಜ್‌ಗೆ, ಮುಟ್ಟಿ ನೋಡ್ಕೋಳಂಗೆ ಉತ್ತರ ಕೊಟ್ಟ ಹನುಮಂತ!

ಬಿಗ್ ಬಾಸ್ ಸೀಸನ್ 12 ಆರಂಭವಾಗುತ್ತಿದ್ದಂತೆ, ಮಾಜಿ ಸ್ಪರ್ಧಿಗಳಾದ ಧನರಾಜ್ ಆಚಾರ್ ಮತ್ತು ಹನುಮಂತ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ಶೋ ನೋಡುವುದರಿಂದ ಏನು ಸಿಗುತ್ತದೆ ಎಂದು ಧನರಾಜ್ ಉಡಾಫೆಯಿಂದ ಕೇಳಿದ್ದಾನೆ. ಇದಕ್ಕೆ ದೋಸ್ತ ಹನುಮಂತ ಸರಿಯಾಗಿ ತಿರುಗೇಟು ಕೊಟ್ಟಿದ್ದಾನೆ.

Read Full Story
10:36 PM (IST) Sep 30

Karnataka News Live 30 September 2025BBK 12 - ಐದು ಸಾವಿರ ಸೀರೆ, ವಾಚ್‌, ದುಬಾರಿ ಕಾರ್‌ ಕಲೆಕ್ಷನ್‌; ಅಶ್ವಿನಿ ಗೌಡ ಹಿನ್ನಲೆ ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಭಾಗಿಯಾಗಿದ್ದಾರೆ. 25 ಧಾರಾವಾಹಿ, 100 ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ, ಕನ್ನಡಪರ ಹೋರಾಟಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಇವರ ಮನೆ, ಸೀರೆ ಕಲೆಕ್ಷನ್‌, ವಾಚ್‌ ಕಲೆಕ್ಷನ್‌ ಮುಂತಾದ ವಿಷಯಗಳ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ.

Read Full Story
10:32 PM (IST) Sep 30

Karnataka News Live 30 September 2025ಗಂಡನ ಜೊತೆ ಕರಾವಳಿಯ ದೇವಸ್ಥಾನಗಳಿಗೆ ವೈಷ್ಣವಿ ಗೌಡ ಭೇಟಿ, ವಿಶೇಷ ಏನಾದ್ರೂ ಉಂಟಾ?

Actress Vaishnavi Gowda Watches Huli Dance in Mangaluru ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್‌ ಮಿಶ್ರಾ ಅವರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read Full Story
10:25 PM (IST) Sep 30

Karnataka News Live 30 September 2025ವೇದಿಕೆಗಳ ಮೇಲೆ ಹುಡುಗಿಯರ ಗಾಳ ಹಾಕೋ ಗಿಲ್ಲಿ ನಟಂಗೆ ಮದ್ವೆ ಯಾವಾಗ? ಕೊನೆಗೂ ಬಾಯ್ಬಿಟ್ಟ ನಟ

ಕಾಮಿಡಿ ಗಿಲ್ಲಿಗಿಲ್ಲಿ ಖ್ಯಾತಿಯ ನಟರಾಜ್ ಅಲಿಯಾಸ್ ಗಿಲ್ಲಿ ನಟ, ತಮ್ಮ ಮದುವೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಸದ್ಯಕ್ಕೆ ಮದುವೆ ಯೋಚನೆ ಇಲ್ಲವೆಂದಿರುವ ಅವರು, ಸಾಕಷ್ಟು ಸಂಪಾದನೆ ಮಾಡಿದ ನಂತರವೇ ಸಂಸಾರದ ಬಗ್ಗೆ ಯೋಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story
09:57 PM (IST) Sep 30

Karnataka News Live 30 September 2025ಸುದೀಪ್​ ಸರ್​ನ ನೋಡಿ ತುಂಬಾ ಬೇಜಾರ್​ ಆಯ್ತು - ಸಿಕ್ಕಾಪಟ್ಟೆ ಫೀಲ್​ ಮಾಡಿಕೊಂಡಿದ್ಯಾಕೆ ಈ ಯುವತಿಯರು ಕೇಳಿ!

ಬಿಗ್​ಬಾಸ್​ 12ರಲ್ಲಿ ಕಿಚ್ಚ ಸುದೀಪ್​ ಅವರ ಹೊಸ ಕರ್ಲಿ ಹೇರ್​ಸ್ಟೈಲ್​ ಚರ್ಚೆಯಲ್ಲಿದೆ. ಇದು ಅವರ ಮುಂಬರುವ ಸಿನಿಮಾದ ಗೆಟಪ್ ಆಗಿದ್ದು, ಈ ಹೊಸ ಶೈಲಿಯು ಕೆಲವು ಯುವತಿಯರಿಗೆ ನಿರಾಸೆ ಮೂಡಿಸಿದೆ ಮತ್ತು ಅವರು ತಮ್ಮ ಹಿಂದಿನ ಕೇಶವಿನ್ಯಾಸವನ್ನೇ ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ.
Read Full Story
09:26 PM (IST) Sep 30

Karnataka News Live 30 September 2025ಬೆಂಗಳೂರು ನಿರ್ಮಾಣ ಹಂತದ ಕಟ್ಟಡದ ಬುನಾದಿ ಕುಸಿತ; ಮಣ್ಣಿನಡಿ ಸಿಲುಕಿದ ಕಾರ್ಮಿಕರು ಜೀವಂತ ಸಮಾಧಿ!

ಬೆಂಗಳೂರು ಮಡಿವಾಳದಲ್ಲಿ ಕಟ್ಟಡ ನಿರ್ಮಾಣದ ವೇಳೆ ಅಡಿಪಾಯಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಮಣ್ಣು ಕುಸಿದು ಭಾರಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಜಾರ್ಖಂಡ್ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read Full Story
09:09 PM (IST) Sep 30

Karnataka News Live 30 September 2025ಹುಬ್ಬಳ್ಳಿ ಯುವತಿಯರ ಒಳ ಉಡುಪು ಕದಿಯುತ್ತಿದ್ದ ಕಾರ್ತಿಕ್ ಬೇಜವಾಡಿ ಬಂಧನ; ಸೈಕೋ ಕಳ್ಳನ ವರ್ತನೆ ಇನ್ನೂ ವಿಚಿತ್ರ!

ಹುಬ್ಬಳ್ಳಿಯಲ್ಲಿ ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ಆತಂಕ ಸೃಷ್ಟಿಸಿದ್ದ ಕಾರ್ತಿಕ್ ಬೇಜವಾಡ ಎಂಬ ಸೈಕೋ ಕಳ್ಳನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಈತನ ವಿಲಕ್ಷಣ ವರ್ತನೆಯ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Read Full Story
09:05 PM (IST) Sep 30

Karnataka News Live 30 September 2025ಜಗತ್ತಿನ 8ನೇ ಅದ್ಭುತ ದಾಖಲೆ ಬರೆದ Brahmagantu Serial! ಮಹಿಳೆಯರಿಂದ ಭಾರಿ ಡಿಮಾಂಡ್‌

ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾ ಈಗ ದಿಶಾ ಆಗಿ ಸಂಪೂರ್ಣ ಬದಲಾಗಿದ್ದು, ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಆದರೆ, ಒಂದೇ ವಾರದಲ್ಲಿ ಇಂಗ್ಲಿಷ್ ಕಲಿತಿದ್ದು ಮತ್ತು ಗಂಡನಿಗೇ ಗುರುತು ಸಿಗದಿರುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿ, ಇದೊಂದು ಜಗತ್ತಿನ 8ನೇ ಅದ್ಭುತ ಎಂದು ಟ್ರೋಲ್ ಮಾಡುತ್ತಿದ್ದಾರೆ.

Read Full Story
08:53 PM (IST) Sep 30

Karnataka News Live 30 September 2025ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ ಅಮೆರಿಕದ ಚಿನ್ನ, ಭಾರತದಲ್ಲಿನ್ನು ಚಿನ್ನ ಖರೀದಿ ಕನಸಷ್ಟೇ!

ಅಮೆರಿಕದ ಚಿನ್ನದ ಮೀಸಲು ನಿಧಿಯ ಮೌಲ್ಯವು ಇತಿಹಾಸದಲ್ಲೇ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ್ದು, ಜಾಗತಿಕ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬೆಳವಣಿಗೆಯು ಚಿನ್ನದ ಪ್ರಮುಖ ಆಮದುದಾರ ದೇಶವಾದ ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ.

Read Full Story
08:30 PM (IST) Sep 30

Karnataka News Live 30 September 2025ಬೆಂಗಳೂರು ಮದರಸಾಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ; ಅ.4ರೊಳಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯವು 2025-26ನೇ ಶೈಕ್ಷಣಿಕ ಸಾಲಿಗೆ ಬೆಂಗಳೂರು ನಗರ ಜಿಲ್ಲೆಯ ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅ.04, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Read Full Story
07:54 PM (IST) Sep 30

Karnataka News Live 30 September 2025ಕೋಮು ಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ಪರಿಹಾರ

KMDC Santhwana Scheme ಈ ಯೋಜನೆಯಡಿ, ಕಾನೂನುಬಾಹಿರ ಘಟನೆಗಳು ಅಥವಾ ನೈಸರ್ಗಿಕ ವಿಕೋಪಗಳಿಂದ ಆಸ್ತಿಪಾಸ್ತಿ ಕಳೆದುಕೊಂಡ ಅಲ್ಪಸಂಖ್ಯಾತ ಸಮುದಾಯದವರಿಗೆ ಮನೆ ಅಥವಾ ಅಂಗಡಿ ಪುನರ್ನಿರ್ಮಾಣಕ್ಕಾಗಿ ₹5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. 

Read Full Story
07:42 PM (IST) Sep 30

Karnataka News Live 30 September 2025ಋತುಮತಿಯೊಂದಿಗೆ ಫಸ್ಟ್ ಟೈಂ ಸೆಕ್ಸ್‌ಗೆ ₹20 ಲಕ್ಷ ಡಿಮ್ಯಾಂಡ್ ಕೇಸ್; ಪೋಷಕರ ಹುಡುಕಾಟದ್ದೇ ದೊಡ್ಡ ಸವಾಲು!

ಬೆಂಗಳೂರಿನಲ್ಲಿ 6ನೇ ತರಗತಿ ವಿದ್ಯಾರ್ಥಿನಿಯನ್ನು ವಾಟ್ಸಾಪ್ ಗ್ರೂಪ್ ಮೂಲಕ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಮೂಢನಂಬಿಕೆಯ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಈ ಜಾಲದ ಹಿಂದಿನ ದೊಡ್ಡ ಮಾಫಿಯಾದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story
07:33 PM (IST) Sep 30

Karnataka News Live 30 September 2025ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ ಜೈಲಲ್ಲಿ ಏನೆಲ್ಲಾ ಸೌಲಭ್ಯ ನೀಡ್ತಿದ್ದೀರಿ ಅಂತಾ ಗೊತ್ತಿದೆ - ಕೋರ್ಟ್‌ನಲ್ಲಿ ಹೇಳಿದ ದರ್ಶನ್‌ ಪರ ವಕೀಲ

Darshan Lawyer Cites Rapist Umesh Reddy Privileges ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಅವರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

Read Full Story
05:43 PM (IST) Sep 30

Karnataka News Live 30 September 2025ಬಿಗ್ ಬಾಸ್ ಜಂಟಿಗಳು ಮಾಡಿದ ತಪ್ಪಿಗೆ ಒಬ್ಬಂಟಿಗಳಿಗೆ ಶಿಕ್ಷೆ; ಕಾವ್ಯಾ ಮಾತು ಕೇಳದೇ ಕುಣಿದಾಡಿದ ಗಿಲ್ಲಿನಟ!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ, ಜಂಟಿಗಳು ನಿಯಮ ಮುರಿದಿದ್ದಕ್ಕೆ ಮೇಲ್ವಿಚಾರಕರಾದ ಒಂಟಿಗಳಿಗೆ ಶಿಕ್ಷೆ ನೀಡಲಾಗಿದೆ. ಒಂಟಿಗಳು ಗೆದ್ದಿದ್ದ ದಿನಸಿ ಸಾಮಾಗ್ರಿ ವಾಪಸ್ ಪಡೆದಿದ್ದು, ಇದು ಅವರನ್ನು ಉಪವಾಸಕ್ಕೆ ತಳ್ಳಿದೆ. ಈ ಶಿಕ್ಷೆಗೆ ಜಂಟಿ ಸದಸ್ಯ ಗಿಲ್ಲಿನಟ ಸಂಭ್ರಮಿಸಿದ್ದು ಚರ್ಚೆಗೆ ಕಾರಣವಾಗಿದೆ.

Read Full Story
05:35 PM (IST) Sep 30

Karnataka News Live 30 September 2025ಜೈಲಿನಲ್ಲಿ ದರ್ಶನ್‌ ಪಲ್ಲಂಗ ಕೇಳಿದ್ರೆ ಅದನ್ನ ಕೊಡೋಕಾಗಲ್ಲ - ಕೋರ್ಟ್‌ನಲ್ಲಿ ಎಸ್‌ಎಸ್‌ಪಿ ಭರ್ಜರಿ ವಾದ

Darshan Thoogudeepa jail facilities ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ತಮಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ. ಈ ಸಂಬಂಧ ನಡೆದ ಕೋರ್ಟ್ ವಿಚಾರಣೆಯಲ್ಲಿ, ಜೈಲು ಅಧಿಕಾರಿಗಳು ನಿಯಮ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.

Read Full Story
05:06 PM (IST) Sep 30

Karnataka News Live 30 September 2025ಕರ್ನಾಟಕ ಹವಾಮಾನ ವರದಿ - ದಸರಾ ಹಬ್ಬದಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ ಎಚ್ಚರಿಕೆ ಕೊಟ್ಟ ಇಲಾಖೆ!

ನೈಋತ್ಯ ಮಾನ್ಸೂನ್ ವಾಪಸ್ಸಾಗುತ್ತಿದ್ದರೂ, ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತದ ಸಾಧ್ಯತೆಯಿದ್ದು, ಅಕ್ಟೋಬರ್ 2ರಂದು ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದೆ.

Read Full Story
04:45 PM (IST) Sep 30

Karnataka News Live 30 September 2025ತೇಜಸ್ವಿ ಸೂರ್ಯ ಹೇಳಿಕೆ ಸಂಪೂರ್ಣವಾಗಿ ವೈಯಕ್ತಿಕ, ಪಕ್ಷದ ಪಾತ್ರವಿಲ್ಲ - ಸುನೀಲ್ ಕುಮಾರ್

ಬಿಜೆಪಿ ನಾಯಕ ಸುನೀಲ್ ಕುಮಾರ್, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯ ಪೂರ್ವ ಸಿದ್ಧತೆ ಇಲ್ಲದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯು ಸಿದ್ದರಾಮಯ್ಯನವರ ರಾಜಕೀಯ ಲಾಭಕ್ಕಾಗಿ ಆಗಿದ್ದು, ಸಮಾಜವನ್ನು ವಿಭಜಿಸುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story
03:55 PM (IST) Sep 30

Karnataka News Live 30 September 2025ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆಗೆ ಎರಡು ಪ್ರಶ್ನೆ ಕೇಳಿ ಚಾಟಿ ಬೀಸಿದ ಆರ್ ಅಶೋಕ

ಮಾಜಿ ಡಿಸಿಎಂ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ಪ್ರವಾಹ ನಿರ್ವಹಣಾ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಯನ್ನು ವ್ಯಂಗ್ಯವಾಡಿದ ಅವರು, ಅಕ್ಟೋಬರ್‌ನಲ್ಲೇ ಸರ್ಕಾರದಲ್ಲಿ ಕ್ರಾಂತಿಯಾಗುವ ಮುನ್ಸೂಚನೆ ನೀಡಿದ್ದಾರೆ. 

Read Full Story