ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಿರೂಪಕಿ, ನಟಿ ಜಾಹ್ನವಿ ಅವರು 12 ವರ್ಷ ಸಂಸಾರ ಮಾಡಿ ಯಾಕೆ ಡಿವೋರ್ಸ್‌ ಕೊಟ್ಟರು ಎಂದು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ, ಹಾಗಾದರೆ ಅಸಲಿ ಕಾರಣ ಏನು? 

ಸುದ್ದಿ ಮಾಧ್ಯಮಗಳಲ್ಲಿ ನಿರೂಪಕಿಯಾಗಿ, ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗಿಯಾಗಿರುವ, ‘ಅಧಿಪತ್ರ’ ಸಿನಿಮಾದಲ್ಲಿ ನಟಿಸಿರುವ ಜಾಹ್ನವಿ ಈಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸ್ಪರ್ಧಿ. ಡಿವೋರ್ಸ್‌ ಆಗಿರುವ ಜಾಹ್ನವಿ ಅವರು ಇದಕ್ಕೆ ಕಾರಣ ಏನು ಎಂದು ಇಲ್ಲಿಯವರೆಗೆ ನಿಖರವಾದ ಕಾರಣ ಏನು ಎಂದು ಹೇಳಿರಲೇ ಇಲ್ಲ. ಆದರೆ ದೊಡ್ಮನೆಯಲ್ಲಿ ಅವರು ಅಸಲಿ ಕಾರಣ ಏನು ಎಂದು ಮಲ್ಲಮ್ಮ ಜೊತೆ ಹಂಚಿಕೊಂಡಿದ್ದಾರೆ.

ಜಿಮ್‌ ಏರಿಯಾ ಬಳಿ ಜಾಹ್ನವಿ ಹಾಗೂ ಕಾಕ್ರೋಚ್‌ ಸುಧಿ, ಮಲ್ಲಮ್ಮ ಕೂತು ಮಾತನಾಡಿಕೊಂಡಿದ್ದಾರೆ. ಮಲ್ಲಮ್ಮ ಅವರು 58ನೇ ವಯಸ್ಸಿಗೆ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಅವರು ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿರೋದರ ಬಗ್ಗೆ ಜಾಹ್ನವಿ ಹಾಗೂ ಸುಧಿ ಮಾತನಾಡಿದ್ದಾರೆ. ಆ ವೇಳೆ ಜಾಹ್ನವಿಗೆ ಡಿವೋರ್ಸ್‌ ತಗೋಬಾರದಿತ್ತು ಎಂದು ಮಲ್ಲಮ್ಮ ಬುದ್ಧಿ ಹೇಳಿದ್ದರು.

ಸಂಭಾಷಣೆ ಹೀಗಿದೆ..

ಜಾಹ್ನವಿ: ನೋಡಿ, ನಿಮ್ಮಿಂದ ನಿಮ್ಮ ಕುಟುಂಬಕ್ಕೆ ಹೆಸರು ತರುತ್ತೀರಾ. ಯಾವುದೇ ವಯಸ್ಸಿನಲ್ಲಿ ಏನು ಸಾಧನೆ ಬೇಕಿದ್ರೂ ಮಾಡಬಹುದು ಅಂತ ತೋರಿಸಿಕೊಟ್ಟಿರಿ. ನೀವು ಬೇರೆಯವರಿಗೆ ಸ್ಫೂರ್ತಿ

ಮಲ್ಲಮ್ಮ: ನಾನು ಎಲ್ಲ ಕೆಲಸ ಮಾಡಿದ್ದೇನೆ

ಜಾಹ್ನವಿ: ನೀವು 15 ವರ್ಷಕ್ಕೆ ಮದುವೆ ಆದ್ರಿ, ಮಕ್ಕಳ ಆದ್ರು, ಗಂಡ ಕುಡಿಯುತ್ತಾನೆ. ಗಂಡ ಹೋದಮೇಲೆ ಮಕ್ಕಳಿಗೋಸ್ಕರ ಬದುಕ್ತೀರಿ..

ಮಲ್ಲಮ್ಮ ಅವರು ಅಳಲು ಆರಂಭಿಸಿದಾಗ, ಸುಧಿ, ಜಾಹ್ನವಿ ಅವರು ಸಮಾಧಾನ ಮಾಡಿದ್ದಾರೆ. “ನಿಮ್ಮ ಮಕ್ಕಳು, ಮೊಮ್ಮಕ್ಕಳು ಸ್ಟಾರ್‌ ಆಗ್ತಾರೆ, ನಿಮ್ಮಿಂದ ಅವರಿಗೆಲ್ಲ ಹೆಸರು. ಗಟ್ಟಿ ಜೀವಕ್ಕೆ ಕಣ್ಣೀರು ಹಾಕಿಸಿಬಿಟ್ಟೆವು, ಅನುಭವಿಸಿದವರಿಗೆ ಕಷ್ಟ ಗೊತ್ತು” ಎಂದು ಜಾಹ್ನವಿ ಅವರು ಹೇಳಿದ್ದಾರೆ.

ಜಾಹ್ನವಿ: ನಾನು ಕೂಡ ಬೆಂಗಳೂರಿಗೆ ಬಂದೆ

ಸುಧಿ: ನಿಮ್ಮದು ಅರೇಂಜ್‌ ಮ್ಯಾರೇಜ್‌

ಜಾಹ್ನವಿ: ಅರೇಂಜ್‌ ಮ್ಯಾರೇಜ್‌, ಡಿವೋರ್ಸ್‌ ಆಗಿದೆ

ಮಲ್ಲಮ್ಮ: ಹಾಗೆಲ್ಲ ಮಾಡಬಾರದು, ಕಷ್ಟವೋ ನಷ್ಟವೋ ಅವರ ಜೊತೆ ಬಾಳಬೇಕು

ಜಾಹ್ನವಿ: ನಾನು ಮದುವೆ ಆಗಬೇಕಿದ್ರೆ ಅವರಿಗೆ ಮದುವೆಯಾಗಿ ಮಗು ಇತ್ತು. ಎಲ್ಲರೂ ತಪ್ಪು ಮಾಡಿರುತ್ತಾರೆ, ಆದರೆ ಮದುವೆಯಾದ್ಮೇಲೆ ಬೇರೆಯವರಿಗೆ ಗಂಡ, ಹೆಂಡ್ತಿ ಸ್ಥಾನ ಕೊಡಬಾರದು. ಗಂಡನ ಸ್ಥಾನ ಗಂಡನಿಗೆ ಕೊಡಬೇಕು, ಹೆಂಡ್ತಿ ಸ್ಥಾನ ಬೇರೆ ಯಾರಿಗೂ ಕೊಡಬಾರದು, ಆ ಸ್ಥಾನ ಬೇರೆಯವರಿಗೆ ಹೋದಾಗ ಅದು ಅರ್ಥ ಕಳೆದುಕೊಳ್ಳುತ್ತದೆ, ಜೊತೆಗಿರಲು ಬೆಲೆ ಇರೋದಿಲ್ಲ. ನಾನು ಸುಮ್ಮನೆ ಬಿಟ್ಟಿಲ್ಲ. ಲಿಕ್ಕರ್‌ ಸಮಸ್ಯೆಯೂ ಇದೆ.

ಬಿಗ್‌ ಬಾಸ್‌ ಕನ್ನಡ 12 ಸ್ಪರ್ಧಿಗಳು ಯಾರು? 

ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗಿದೆ. ಕಾಕ್ರೋಚ್‌ ಸುಧಿ, ಗಿಲ್ಲಿ ನಟ, ಚಂದ್ರಪ್ರಭ, ಧನುಷ್‌ ಗೌಡ, ಡಾಗ್‌ ಸತೀಶ್‌, ಮಂಜುಭಾಷಿಣಿ, ರಾಶಿಕಾ ಶೆಟ್ಟಿ, ಕಾವ್ಯ ಶೈವ, ಧ್ರುವಂತ್‌, ಅಶ್ವಿನಿ ಗೌಡ, ಅಶ್ವಿನಿ, ಅಭಿಷೇಕ್‌ ಶ್ರೀಕಾಂತ್‌, ಕರಿಬಸಪ್ಪ, ಸ್ಪಂದನಾ ಸೋಮಣ್ಣ, ಮಾಳು ನಿಪನಾಳ, ಆರ್‌ಕೆ ಅಮಿತ್‌ ಮುಂತಾದವರು ಭಾಗಿಯಾಗಿದ್ದಾರೆ. ಅಂದಹಾಗೆ ಕನ್ನಡಕ್ಕೆ ಆದ್ಯತೆ ಕೊಟ್ಟರೆ ಈ ಸೀಸನ್‌ ನಿರೂಪಣೆ ಮಾಡ್ತೀನಿ ಎಂದು ಷರತ್ತು ಹಾಕಿ, ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಇನ್ನೋರ್ವ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಮೊದಲ ದಿನವೇ ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗಿದೆ, ಹೀಗಿದ್ದರೂ ಸೀಕ್ರೇಟ್‌ ರೂಮ್‌ಗೆ ಹೋಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? 

YouTube video player