ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾ ಈಗ ದಿಶಾ ಆಗಿ ಸಂಪೂರ್ಣ ಬದಲಾಗಿದ್ದು, ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಆದರೆ, ಒಂದೇ ವಾರದಲ್ಲಿ ಇಂಗ್ಲಿಷ್ ಕಲಿತಿದ್ದು ಮತ್ತು ಗಂಡನಿಗೇ ಗುರುತು ಸಿಗದಿರುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿ, ಇದೊಂದು ಜಗತ್ತಿನ 8ನೇ ಅದ್ಭುತ ಎಂದು ಟ್ರೋಲ್ ಮಾಡುತ್ತಿದ್ದಾರೆ.

Brahmagantu Serial ಪ್ರೇಮಿಗಳಂತೂ ಈಗ ಇನ್ನಿಲ್ಲದಂತೆ ಖುಷಿ ಪಡುತ್ತಿದ್ದಾರೆ. ಸೊಕ್ಕಿನಿಂದ ಮೆರವ ಸೌಂದರ್ಯಳಿಗೆ ಸೆಡ್ಡು ಹೊಡೆದು ದೀಪಾ ದಿಶಾ ಆಗಿ ಬದಲಾಗಿದ್ದಾಳೆ. ಸೋಡಾ ಗ್ಲಾಸ್‌, ಎಣ್ಣೆ ಬಳಿಕ ಮುಖ, ಎಣ್ಣೆ ಬಳಿಕ ಕೂದಲು, ಎರಡು ಜಡೆ, ಹಲ್ಲಿಗೆ ಕ್ಲಿಪ್‌, ಮುಖಕ್ಕೆ ಒಂದಿಷ್ಟು ಕಪ್ಪ ಮೇಕಪ್‌.. ಇವೆಲ್ಲವುಗಳಿಂದಲೂ ಸುಸ್ತಾಗಿದ್ದ ವೀಕ್ಷಕರು ದೀಪಾಳ ಹೊಸ ರೂಪ ನೋಡಿ ಸಕತ್‌ ಖುಷಿಪಟ್ಟುಕೊಂಡಿದ್ದಾರೆ. ಇಷ್ಟು ದಿನಗಳಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು ಎಂದು ದೀಪಾಳ ಹೊಸ ರೂಪವನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ.

ಸುಮ್ಮನಿರದ ನೆಟ್ಟಿಗರು

ಎಲ್ಲವೂ ಸರಿ. ಆದ್ರೆ? ವೀಕ್ಷಕರು ಹಾಗೂ ನೆಟ್ಟಿಗರು ಅಂದ್ರೆ ಸುಮ್ನೇನಾ? ದೀಪಾಳನ್ನು ನೋಡಿ ಖುಷಿಯೇನೋ ಆಗಿದೆ. ಆಕೆಯ ಓವರ್‌ ಮೇಕಪ್‌ ನೋಡಿ ಕೆಲವರು ಟ್ರೋಲ್‌ ಮಾಡಿದ್ದೂ ಆಯ್ತು. ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್‌ (Diya Palakkal) ನಿಜವಾಗಿಯೂ ಸುಂದರಿ. ಆದರೆ, ಆಕೆಯನ್ನು ಇನ್ನಷ್ಟು ಸುಂದರ ಮಾಡಲು ಹೋಗಿ ಸಿಕ್ಕಾಪಟ್ಟೆ ಮೇಕಪ್‌ ಮಾಡಿರುವುದಾಗಿ ಇದಾಗಲೇ ಹಲವರು ಕಮೆಂಟ್‌ನಲ್ಲಿ ಹೇಳುತ್ತಿದ್ದಾರೆ.

ಜನತ್ತಿನ 8ನೇ ಅದ್ಭುತ!

ಇದೂ ಹೋಗಲಿ ಎಂದರೆ, ಈಗ ಮತ್ತೆ ಟ್ರೋಲ್‌ ಶುರುವಿಟ್ಟುಕೊಂಡಿದ್ದಾರೆ ನೆಟ್ಟಿಗರು. ಅದೇನೆಂದರೆ, Brahmagantu Serial ಜಗತ್ತಿನ ಎಂಟನೆಯ ಅದ್ಭುತವಂತೆ! ಏಕೆಂದ್ರೆ ದೀಪಾ, ದಿಶಾ ಆಗಿದ್ದಾಳೆ ನಿಜ. ಆದರೆ ಎ,ಬಿ,ಸಿ,ಡಿ ಕೂಡ ಸರಿಯಾಗಿ ಹೇಳಲು ಬರದಾಕೆಯೊಬ್ಬಳು ಒಂದೇ ವಾರದಲ್ಲಿ ಮಾಡೆಲ್‌ ಲೆವೆಲ್‌ ಇಂಗ್ಲಿಷ್‌ನಲ್ಲಿ ಫ್ಲುಯೆನ್ಸಿ ಹೊಂದಲು ಸಾಧ್ಯನೆ ಎನ್ನುವುದು ಅವರ ಪ್ರಶ್ನೆ. ಮೊದಲೇ ಸ್ವಲ್ಪ ಇಂಗ್ಲಿಷ್‌ ಬರುತ್ತಿದ್ದರೂ, ಈಗ ದೀಪಾ ಮಾತನಾಡುವ ಪರಿಯಲ್ಲಿ ಮಾತನಾಡಲು ಸಾಧ್ಯವೇ ಇಲ್ಲ. ಹಾಗಿದ್ದ ಮೇಲೆ ಕೇಳಿದ ಪ್ರಶ್ನೆಗಳಿಗೆ, ಅದರಲ್ಲಿಯೂ ಫಾರಿನ್‌ ಅತಿಥಿಗಳಿಗೆ ಇಂಪ್ರೆಸ್‌ ಆಗುವ ಹಾಗೆ ಇಂಗ್ಲಿಷ್‌ ಕಲಿತಳು ಎಂದರೆ ಅದು ಜಗತ್ತಿನ 8ನೇ ಅದ್ಭುತಗಳಲ್ಲಿ ಒಂದು ಎನ್ನುತ್ತಿದ್ದಾರೆ.

ಸ್ವಂತ ಹೆಂಡ್ತಿನೂ ಗೊತ್ತಾಗಲ್ವಾ?

ಅದೂ ಹೋಗ್ಲಿ ಎಂದರೆ, ದೀಪಾಳ ಮುಖ ಚೇಂಜ್‌ ಆಗಿರ್‍ಬೋದು. ಆದರೆ ಸ್ವಂತ ಪತ್ನಿಯನ್ನೇ ಗಂಡ ಗುರುತಿಸಲು ಸಾಧ್ಯವಿಲ್ಲವಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಚಿರುಗೂ ತಿಳಿದಿಲ್ಲ, ಸೌಂದರ್ಯ ಸೇರಿದಂತೆ ಇನ್ನಾರಿಗೂ ಇವಳು ದೀಪಾ ಎನ್ನೋದು ಗೊತ್ತಾಗಲ್ವಾ ಎನ್ನೋದೇ ಎಲ್ಲರ ಯಕ್ಷ ಪ್ರಶ್ನೆಯಾಗಿದೆ. ದೀಪಾಳ ರೂಪ ಈ ಪರಿ ಚೇಂಜ್‌ ಆಗುತ್ತದೆ ಎಂದು ಆ ಕ್ಷಣದಲ್ಲಿ ನಂಬಲು ಸಾಧ್ಯವಿಲ್ಲ ಎಂದುಕೊಳ್ಳಿ. ಸೌಂದರ್ಯ ಫೋನ್‌ ಮಾಡಿದಾಗಲಾದರೂ ದೀಪಾ ತನ್ನ ದನಿಯಲ್ಲಿಯೇ ಮಾತನಾಡಿದ್ದಾಳೆ, ಮಾತ್ರವಲ್ಲದೇ ಭಾಷಣ ಮಾಡುವಾಗಲೂ, ಮಾತನಾಡುವಾಗಲೂ ಇದು ದೀಪಾಳ ಧ್ವನಿ ಅಲ್ವಾ ಎನ್ನೋದೇ ಗೊತ್ತಾಗಿಲ್ವಾ? ಗೊತ್ತಾಗದೇ ಹೋದರೂ ಸ್ವಲ್ಪವೂ ಸಂಶಯ ಬರಲಿಲ್ವಾ ಎಂದು ಪ್ರಶ್ನೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.

ಇನ್ನು ಮಹಿಳೆಯರು ಹೀಗೆ ಗಂಡನಿಗೆ ಗೊತ್ತಾಗದಂತೆ ಮೇಕಪ್‌ ಮಾಡಿಕೊಳ್ಳೋದು ಹೇಗೆ ಎಂದು ಪ್ರಶ್ನಿಸುತ್ತಿದ್ದರೆ, ಪುರುಷರು ತಮ್ಮ ಪತ್ನಿ ಹೀಗೆ ಮೇಕಪ್‌ ಮಾಡಿಕೊಂಡು ಬಿಟ್ಟರೆ ಗುರುತಿಸೋದು ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ! ಒಟ್ಟಿನಲ್ಲಿ ಇದೊಂದು ಸೀರಿಯಲ್‌, ಸೀರಿಯಲ್‌ನಲ್ಲಿ ಏನು ಬೇಕಾದ್ರೂ ಆಗಬಹುದು ಎನ್ನೋದನ್ನೂ ತಿಳಿದುಕೊಳ್ಳದೇ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

View post on Instagram