ಗಂಡನ ಜೊತೆ ಕರಾವಳಿಯ ದೇವಸ್ಥಾನಗಳಿಗೆ ವೈಷ್ಣವಿ ಗೌಡ ಭೇಟಿ, ವಿಶೇಷ ಏನಾದ್ರೂ ಉಂಟಾ?
Actress Vaishnavi Gowda Watches Huli Dance in Mangaluru ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್ ಮಿಶ್ರಾ ಅವರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಟಿ ವೈಷ್ಣವಿ ಗೌಡ ಸಖತ್ ಖುಷಿಯ ಮೂಡ್‌ನಲ್ಲಿದ್ದಾರೆ. ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ವೈಷ್ಣವಿ ಗೌಡ, ಗಂಡ ಅನುಕೂಲ್ ಮಿಶ್ರಾ ಅವರೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಮಂಗಳವಾರ ಮಂಗಳೂರಿಗೆ ಗಂಡ ಅನುಕೂಲ್ ಮಿಶ್ರಾ ಜೊತೆ ಆಗಮಿಸಿ ಸಂಭ್ರಮದ ಕ್ಷಣಗಳನ್ನು ಕಳೆದಿದ್ದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ, ತುಳುನಾಡಿನ ಪ್ರಸಿದ್ಧ ಹುಲಿ ಡಾನ್ಸ್‌ಅನ್ನು ಕಣ್ಣಾರೆ ಕಂಡು ಸಂಭ್ರಮಿಸಿದ್ದಾರೆ.
ಆ ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹೊಸ ಜೋಡಿ, ಅಲ್ಲಿ ಪೂಜೆ, ಪುನಸ್ಕಾರ ಮುಗಿಸಿ ಅನ್ನಪ್ರಸಾದ ಸೇವಿಸಿದ್ದಾರೆ.
ಆ ಬಳಿಕ ಗಂಡ ಜೊತೆಗಿನ ಆತ್ಮೀಯ ಕ್ಷಣದ ಫೋಟೋಗಳನ್ನೂ ಕೂಡ ವೈಷ್ಣವಿ ಹಂಚಿಕೊಂಡಿದ್ದು, 'ನೀವು ಮಂಗಳೂರಿಗೆ ಬಂದಿದ್ದು ಬಹಳ ಖುಷಿ ಆಯ್ತು' ಎಂದು ಅಲ್ಲಿನ ಅಭಿಮಾನಿಗಳು ಕಾಮೆಂಟ್‌ಮಾಡಿದ್ದಾರೆ.
ಕಳೆದ ಜೂನ್ 4 ರಂದು ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಆವರ ವಿವಾಹವಾಗಿತ್ತು. ವಿವಾಹವಾದ ಬಳಿಕ ವೈಷ್ಣವಿ ಗೌಡ ಕಿರುತೆರೆಯಿಂದ ದೂರವಿದ್ದು, ವಿವಾಹ ಜೀವನದ ಸಂಭ್ರಮವನ್ನು ಸವಿಯುತ್ತಿದ್ದಾರೆ.