ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ, ಜಂಟಿಗಳು ನಿಯಮ ಮುರಿದಿದ್ದಕ್ಕೆ ಮೇಲ್ವಿಚಾರಕರಾದ ಒಂಟಿಗಳಿಗೆ ಶಿಕ್ಷೆ ನೀಡಲಾಗಿದೆ. ಒಂಟಿಗಳು ಗೆದ್ದಿದ್ದ ದಿನಸಿ ಸಾಮಾಗ್ರಿ ವಾಪಸ್ ಪಡೆದಿದ್ದು, ಇದು ಅವರನ್ನು ಉಪವಾಸಕ್ಕೆ ತಳ್ಳಿದೆ. ಈ ಶಿಕ್ಷೆಗೆ ಜಂಟಿ ಸದಸ್ಯ ಗಿಲ್ಲಿನಟ ಸಂಭ್ರಮಿಸಿದ್ದು ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ, ಜಂಟಿಗಳು ನಿಯಮ ಮುರಿದಿದ್ದಕ್ಕೆ ಮೇಲ್ವಿಚಾರಕರಾದ ಒಂಟಿಗಳಿಗೆ ಶಿಕ್ಷೆ ನೀಡಲಾಗಿದೆ. ಒಂಟಿಗಳು ಗೆದ್ದಿದ್ದ ದಿನಸಿ ಸಾಮಾಗ್ರಿ ವಾಪಸ್ ಪಡೆದಿದ್ದು, ಇದು ಅವರನ್ನು ಉಪವಾಸಕ್ಕೆ ತಳ್ಳಿದೆ. ಈ ಶಿಕ್ಷೆಗೆ ಜಂಟಿ ಸದಸ್ಯ ಗಿಲ್ಲಿನಟ ಸಂಭ್ರಮಿಸಿದ್ದು ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ದಿನವೇ ಎಲ್ಲ ಕಂಟೆಸ್ಟೆಂಟ್‌ಗಳನ್ನು ರುಬ್ಬುತ್ತಿರುವ ಬಿಗ್ ಬಾಸ್ ಮನೆಯಲ್ಲಿ 6 ಜನ ಒಂಟಿಗಳು ಹಾಗೂ 12 ಜನ ಜಂಟಿಗಳನ್ನು ಮಾಡಲಾಗಿದೆ. ಈ ಪೈಕಿ ಜಂಟಿಗಳು ಅಡಿಯಾಳಿನಂತೆ ಹಾಗೂ ಒಂಟಿಗಳು ಅರಸರಂತೆ ಇಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇದೀಗ ಎಲ್ಲ ಜಂಟಿಗಳನ್ನ ನಿಯಂತ್ರಣ ಮಾಡಬೇಕಿರುವ ಒಂಟಿಗಳು ಕೆಲವೊಂದು ನಿಯಮಗಳನ್ನು ಪಾಲಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ನಿಯಮಗಳು ಉಲ್ಲಂಘನೆಯಾದಲ್ಲಿ ಅವುಗಳಿಗೆ ಬಿಗ್ ಬಾಸ್ ಶಿಕ್ಷೆಯನ್ನೂ ನೀಡಲಾಗುತ್ತದೆ. ಇದೀಗ ಜಂಟಿಗಳು ಮಾಡಿದ ತಪ್ಪಿಗೆ ಬಿಗ್ ಬಾಸ್ ಒಂಟಿಗಳಿಗೆ ಉಪವಾಸದ ಶಿಕ್ಷೆ ಕೊಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲ ಜಂಟಿಗಳು ತಾವು ಮಲಗುವ ಹಾಗೂ ಶೌಚಾಲಯ (ಸ್ನಾನ ಮತ್ತು ಟಾಯ್ಲೆಟ್) ಬಳಸುವ ಸಮಯವನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿಯೂ ಜಂಟಿಯಾಗಿಯೇ ಇರಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಆದರೆ, ಈ ನಿಯಮವನ್ನು ಜಂಟಿಗಳು ಮರೆತಂತಿದೆ. ಜೊತೆಗೆ, ಜಂಟಿಗಳನ್ನು ಮೇಲ್ವಿಚಾರಣೆ ಮಾಡಲು ಒಂಟಿಗಳಿಗೆ ತಿಳಿಸಲಾಗಿದೆ. ಆದರೆ, ಇದೀಗ ಜಂಟಿಗಳು ಹಗ್ಗವನ್ನು ಕಟ್ಟಿಕೊಳ್ಳದೇ ಒಬ್ಬಂಟಿಯಾಗಿ ಸುತ್ತಾಡುತ್ತಿದ್ದಾರೆ. ಇದು ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುವ ಒಂಟಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ.

ಬಲಗೈನಲ್ಲಿ ಕೊಟ್ಟ ದಿನಸಿಯನ್ನು ಎಡಗೈಲಿ ಕಿತ್ತುಕೊಂಡ ಬಿಗ್ ಬಾಸ್:

ಇಲ್ಲಿ ಹಗ್ಗವನ್ನು ಕಟ್ಟಿಕೊಳ್ಳದೇ ತಪ್ಪು ಮಾಡಿರುವುದು ಜಂಟಿಗಳೇ ಆದರೆ, ಒಂಟಿಗಳು ಇದಕ್ಕೆ ಬೆಲೆ ತೆರಬೇಕಿದೆ. ಒಂಟಿಗಳೇ ನಿನ್ನೆ ರಾತ್ರಿ ನೀವು ಕಳಿಸಿದ 14 ದಿನಸಿ ಸಾಮಾಗ್ರಿಗಳ ಪೈಕಿ, 11 ದಿನಸಿ ಸಾಮಾಗ್ರಿಗಳನ್ನು ಈ ಕೂಡಲೇ ಸ್ಟೋರ್ ರೂಮಿಗೆ ತಂದಿರಿಸಿ ಎಂದು ಬಿಗ್ ಬಾಸ್ ಆದೇಶ ಕೊಟ್ಟಿದ್ದಾರೆ. ಇದರಿಂದ ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್‌ನಲ್ಲಿ ಒಂಟಿಗಳು ಗಳಿಸಿದ್ದ ದಿನಸಿ ಸಾಮಗ್ರಿಗಳು ವಾಪಸ್ ಹೋಗುತ್ತಿದ್ದು, ಅವರು ಬಹುತೇಕ ಉಪವಾಸ ಇರುವ ಸಾಧ್ಯತೆ ಹೆಚ್ಚಾಗಿದೆ.

ವಿಕೃತವಾಗಿ ಸಂಭ್ರಮಿಸಿದ ಗಿಲ್ಲಿ ನಟ:

ಬಿಗ್ ಬಾಸ್ ಒಂಟಿಗಳ ಎಲ್ಲ ದಿನಸಿ ಸಾಮಗ್ರಿಗಳನ್ನು ಕಿತ್ತುಕೊಂಡ ತಕ್ಷಣವೇ, ಜಂಟಿಗಳ ಗುಂಪಿನಲ್ಲಿರುವ ಧಾರಾವಾಹಿ ನಟಿ ಕಾವ್ಯಾ ಜೊತೆಗಿರುವ ಹಾಸ್ಯ ಕಲಾವಿದ ಗಿಲ್ಲಿನಟ ವಿಕೃತವಾಗಿ ಖುಷಿ ಅನುಭವಿಸಿದ್ದಾರೆ. ಒಂಟಿ ಅರಸರುಗಳಿಗೆ ಶಿಕ್ಷೆ ಪ್ರಕಟವಾದ ಕೂಡಲೇ ಯೆಸ್, ಯೆಸ್... ಎಂದು ಕೈ ಎತ್ತಿ ಸಂಭ್ರಮಿಸಿದ್ದಾನೆ. ಇದಕ್ಕೆ ಕಾವ್ಯಾ ಸೇರಿದಂತೆ ಹಲವು ಜಂಟಿ ಸದಸ್ಯರು ಗಿಲ್ಲಿ ನಟನಿಗೆ ಇದು ಖುಷಿಪಡುವ ಸಂದರ್ಭವಲ್ಲ ಎಂದು ತಿಳಿ ಹೇಳಿದರೂ ಅದನ್ನು ಕೇಳುವ ಮನಸ್ಥಿತಿ ಗಿಲ್ಲಿಗೆ ಇರಲಿಲ್ಲ ಎಂಬುದು ಕಾಣುತ್ತದೆ.