ಹೊಸ ವರ್ಷಾಚರಣೆ ವೇಳೆಯಲ್ಲಿ (ಡಿ.31 ರ ರಾತ್ರಿ) ಮದ್ಯ ಸೇವಿಸುವವರನ್ನು ಪೊಲೀಸ್ ವಾಹನದಲ್ಲಿ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Karnataka News Live: ಬೆಂಗಳೂರು - ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ - ವ್ಯವಸ್ಥೆಗೆ ಆಕ್ಷೇಪ

ಕೊಪ್ಪಳ: ಡಿಸಿಎಂ ಡಿಕೆಶಿ ಅವರು ಸಿಎಂ ಆಗುವುದು ಖಚಿತ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂದು ಶಾಸಕ ಗಾಲಿ ಜನಾರ್ದನ ರಡ್ಡಿ ಹೇಳಿದ್ದಾರೆ. ತಾಲೂಕಿನ ಮುನಿರಾಬಾದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಂಡೂರ ಉಪಚುನಾವಣೆಯಿಂದ ಈವರೆಗೂ ಇದೇ ಮಾತನ್ನೇ ಹೇಳುತ್ತಿದ್ದೇನೆ. ಸಿದ್ದು-ಡಿಕೆ ನಡುವೆ 50:50 ಅಧಿಕಾರ ಹಂಚಿಕೆಯಾಗಿದೆ. ಸಂಕ್ರಮಣ ನಂತರ ಒಳ್ಳೆ ದಿನ, ಒಳ್ಳೆ ಮುಹೂರ್ತ ನೋಡಿಕೊಂಡು ತೀರ್ಮಾನ ಮಾಡಬಹುದು. ನಮಗೂ ಕೆಲವು ಅವರ ಆಂತರಿಕ ವಿಚಾರ ಗೊತ್ತಾಗುತ್ತವೆ ಎಂದರು.
Karnataka News Live 30 December 2025ಬೆಂಗಳೂರು - ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ - ವ್ಯವಸ್ಥೆಗೆ ಆಕ್ಷೇಪ
Karnataka News Live 30 December 2025Bigg Boss Kannada 12 - ಕಣ್ಣೀರಿಟ್ಟು ರಕ್ಷಿತಾ ಕೇಳಿದ ಪ್ರಶ್ನೆಗೆ ಬಿಗ್‌ಬಾಸ್/ ಸುದೀಪ್ ಉತ್ತರ ಕೊಡ್ತಾರಾ?
Rakshitha Shetty: ಬಿಗ್‌ಬಾಸ್ ಮನೆಯಿಂದ ಮಾಳು ನಿಪನಾಳ ಹೊರಬಂದಿದ್ದಕ್ಕೆ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮ ಎಲಿಮಿನೇಷನ್ ಬಗ್ಗೆ ಮಾಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnataka News Live 30 December 2025Karna Serial - ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ
Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಕೊಲ್ಲಲು ಸಂಜಯ್ ಪ್ಲ್ಯಾನ್ ಮಾಡಿದ್ದನು. ಕೊನೆಗೂ ಕರ್ಣ ಬಂದು, ಅವಳನ್ನು ಕಾಪಾಡಿದ್ದಾನೆ. ಹೀಗಿರುವಾಗ ಆ ಮಗು ಬದುಕಲಿದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನೊಂದು ಕಡೆ ಕರ್ಣ, ನಿತ್ಯಾಗೆ ಸತ್ಯದ ಅರಿವು ಆಗುವ ಸಮಯ ಬಂದಂತೆ ಕಾಣ್ತಿದೆ.
Karnataka News Live 30 December 2025BBK 12 - ರಕ್ಷಿತಾ ಶೆಟ್ಟಿ ದನಿ ಅಡಗಿಸುವಷ್ಟು, ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ ಸೋಮಣ್ಣ! ಎಲ್ಲಿಂದ ಈ ಎನರ್ಜಿ?
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಸ್ಪಂದನಾ ಸೋಮಣ್ಣ ಅವರು ರೊಚ್ಚಿಗೆದ್ದು, ಕಾವ್ಯ ಶೈವ ವಿರುದ್ಧ ಜಗಳ ಆಡಿದ್ದಾರೆ. ಹಾಗಾದರೆ ಏನಾಯ್ತು?
Karnataka News Live 30 December 2025ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್
ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಮತ್ತಿನಲ್ಲಿ ಮಹಿಳೆಯರ ಜತೆ ಅನುಚಿತ ವರ್ತನೆ ತೋರುವ ಪುಂಡರೇ ಎಚ್ಚರ. ನಿಮ್ಮ ಮೇಲೆ ಸಿಸಿಟಿವಿ ಬಿಗಿ ಕಣ್ಗಾವಲಿದ್ದು, ಸಂಭ್ರಮ ಮುಗಿದು ವಾರದ ಬಳಿಕವು ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ...!