11:27 PM (IST) Jul 24

Karnataka News Live:IND vs ZIM - ಎರಡನೇ ಟಿ20ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಔಟ್! ತಾರಾ ಓಪನರ್‌ಗೆ ಶಾಕ್! ಯುವ ಬಿರುಗಾಳಿಗೆ ಒಲಿದ ಚಾನ್ಸ್!

ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ಸಾಧ್ಯತೆಯಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆ ಪ್ಲೇಯರ್‌ಗೆ ವಿಶ್ರಾಂತಿ ನೀಡಿ, ಅವರ ಸ್ಥಾನಕ್ಕೆ ಯುವ ಆಟಗಾರನಿಗೆ ಅವಕಾಶ ನೀಡುವ ನಿರೀಕ್ಷೆಯಿದೆ ಎಂದು ಮ್ಯಾನೇಜ್‌ಮೆಂಟ್‌ ತಿಳಿಸಿದೆ.

Read Full Story
10:00 PM (IST) Jul 24

Karnataka News Live:ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ಕೆಲ ದಿನಗಳಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತಿದೆ. ಇದೀಗ ನಾಳೆಯೂ ಭಾರಿ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.

Read Full Story
09:11 PM (IST) Jul 24

Karnataka News Live:ಕರ್ನಾಟಕದ ಕೆಲವೆಡೆ ಭಾರಿ ಮಳೆ, ರಾಜ್ಯ ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ಕರ್ನಾಟಕ ಹಲವು ಜಿಲ್ಲೆಗಳು ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದರೆ, ಕೆಲವೇ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಬಳಿಕ ಉಡುಪಿಯಲ್ಲಿ ಮಳೆಯಾಗುತ್ತಿದೆ. ಪರಿಣಾಮ ನಾಳೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Read Full Story
06:55 PM (IST) Jul 24

Karnataka News Live:ಜಿಂಬಾಬ್ವೆ ಎದುರಿನ ಗೆಲುವಿನ ಹೊರತಾಗಿಯೂ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್! ಸ್ಟಾರ್ ಕ್ರಿಕೆಟಿಗನಿಗೆ ಗೇಟ್‌ಪಾಸ್

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದಿರುವ ಭಾರತ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದರೂ, ಎರಡನೇ ಪಂದ್ಯದಲ್ಲಿ ತಂಡದಲ್ಲಿ ಎರಡು ಬದಲಾವಣೆಗಳಾಗುವ ಸಾಧ್ಯತೆಯಿದ್ದು, ಸೂರ್ಯಾನ್ಶ್‌ ಶೆಡ್ಗೆ ಮತ್ತು ಹರ್ಷ್ ದುಬೆಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
Read Full Story
06:20 PM (IST) Jul 24

Karnataka News Live:ಗದಗ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶವ ಪತ್ತೆ! ಸಾವಿನ ಸುತ್ತ ಹಬ್ಬಿದೆ ಹತ್ತಾರು ಅನುಮಾನ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
Read Full Story
06:06 PM (IST) Jul 24

Karnataka News Live:ಬೆಂಗಳೂರಿನ ಕಸ ನಮಗೆ ಬೇಡ - ಬೆಟ್ಟಹಲಸೂರಿನಲ್ಲಿ BSWML ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ಭಾರಿ ವಿರೋಧ!

ಮೂಲದಲ್ಲೇ ಕಸ ವಿಂಗಡಿಸಿ ಮಾದರಿಯಾಗಿರುವ ಬೆಟ್ಟಹಲಸೂರು ಗ್ರಾಮದಲ್ಲಿ, BSWML ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಒಣತ್ಯಾಜ್ಯ ಮರುಸಂಸ್ಕರಣಾ ಘಟಕಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story
05:26 PM (IST) Jul 24

Karnataka News Live:ಬಳ್ಳಾರಿ-ಗುಂತಕಲ್ ರೈಲ್ವೆ ಮಾರ್ಗ ವಿಸ್ತರಣೆಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ - ₹1,264 ಕೋಟಿ ವೆಚ್ಚದಲ್ಲಿ 3 ಮತ್ತು 4ನೇ ರೈಲು ಹಳಿ ನಿರ್ಮಾಣ!

ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಸಂಪರ್ಕವನ್ನು ವೃದ್ಧಿಸಲು ₹1,264 ಕೋಟಿ ವೆಚ್ಚದ 'ಬಳ್ಳಾರಿ-ಗುಂತಕಲ್' 3ನೇ ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ.

Read Full Story
04:33 PM (IST) Jul 24

Karnataka News Live:ಇನ್ಮುಂದೆ 'ಇಂಥ' ಪಾತ್ರ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾಗಿದೆ; ರಾಜ್ ಬಿ ಶೆಟ್ಟಿ ಸೆನ್ಸೇಷನಲ್ ಹೇಳಿಕೆ!

ಕರಾವಳಿ ಸಿನಿಮಾ ವಿವಾದದ ಕಹಿ ಘಟನೆಗಳಿಂದಾಗಿ ರಾಜ್ ಬಿ ಶೆಟ್ಟಿ ಅವರು ಒಂದು ಕಠಿಣ ನಿರ್ಧಾರದ ಬಗ್ಗೆ ಸುಳಿವು ನೀಡಿದ್ದಾರೆ. 'ಇನ್ಮುಂದೆ ಯಾವುದೇ ಸಿನಿಮಾದಲ್ಲಿ 'ಅಂತಹ ಪಾತ್ರ' ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ' ಎಂದಿದ್ದಾರೆ.

Read Full Story
04:10 PM (IST) Jul 24

Karnataka News Live:ದೇಶದಲ್ಲೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಮಾರ್ಗವಾಗಿ ಹೊರಹೊಮ್ಮಿದ ಬೆಂಗಳೂರು-ಮೈಸೂರು

ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ 'ಉಬರ್' ಬಿಡುಗಡೆ ಮಾಡಿರುವ 'ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್' ವರದಿಯ ಪ್ರಕಾರ, ಬೆಂಗಳೂರು-ಮೈಸೂರು ಮಾರ್ಗವು ದೇಶದ ಮೂರನೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಪ್ರಯಾಣ ಮಾರ್ಗವಾಗಿ ಹೊರಹೊಮ್ಮಿದೆ.

Read Full Story
03:05 PM (IST) Jul 24

Karnataka News Live:ಒಂದು ಹುಡುಗಿ ಕತೆ.. ಬೆಳಗಾವಿಯಲ್ಲಿ ಎರಡು ಗ್ರಾಮಗಳ ಯುವಕರಿಂದ ನಡು ರಸ್ತೆಯಲ್ಲಿ ಹೊಡೆದಾಟ..!

ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್‌ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?

Read Full Story
03:03 PM (IST) Jul 24

Karnataka News Live:ಗದಗ - ಹಾಸ್ಟೆಲ್‌ನಲ್ಲಿ ವೈದ್ಯೆ ವಿದ್ಯಾರ್ಥಿನಿ ಶವ ಪತ್ತೆ, ಅನುಮಾನ ಹುಟ್ಟಿಸಿದ ಡೆತ್ ನೋಟ್! ಕೊರಳಿಗೆ ಹಾಕಿದ ಬಟ್ಟೆ!

ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ. ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಪೋಷಕರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.

Read Full Story
02:28 PM (IST) Jul 24

Karnataka News Live:ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ; 21 ವರ್ಷಕ್ಕೆ ಬದುಕು ಮುಗಿಸಿದ ಪ್ರೇರಣಾ

ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್‌.ಸಿ (B.Sc) ಮುಗಿಸಿ ಬದುಕಿನ ದೊಡ್ಡ ಕನಸು ಕಾಣುತ್ತಿದ್ದ 21 ವರ್ಷದ ಪ್ರೇರಣಾ ಎಂಬ ಯುವತಿ ಬದುಕನ್ನು ಅರ್ಧಕ್ಕೇ ಅಂತ್ಯಗೊಳಿಸಿದ ದುರ್ದೈವಿ.

Read Full Story
02:22 PM (IST) Jul 24

Karnataka News Live:ಪಾರಿವಾಳ ಪ್ರಿಯರೇ ಎಚ್ಚರ - ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಕಾಳು ಹಾಕಿದ್ರೆ ಹುಷಾರ್, ಸರ್ಕಾರದ ಹೊಸ ನಿಯಮ ಜಾರಿ!

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಆರೋಗ್ಯ ಇಲಾಖೆಯು ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದೆ. ಇನ್ನು ಮುಂದೆ, ನಿಗದಿತ ಸ್ಥಳಗಳಲ್ಲಿ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಲು ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ.

Read Full Story
01:06 PM (IST) Jul 24

Karnataka News Live:ಭಾರತದ ಬಾಸುಮತಿ ಅಕ್ಕಿಗೆ ಸಂಕಷ್ಟ ತಂದಿಟ್ಟ ಕೊಲ್ಲಿ ದೇಶಗಳ ಯುದ್ಧ, ಟನ್‌ ಗಟ್ಟಲೆ ಸರಕು ಬಂದರುಗಳಲ್ಲೇ ಬಾಕಿ!

ಪಶ್ಚಿಮ ಏಷ್ಯಾದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ, ವಿಶೇಷವಾಗಿ ಕೆಂಪು ಸಮುದ್ರ ಮಾರ್ಗದಲ್ಲಿನ ಅಡಚಣೆಗಳಿಂದ ಭಾರತದ ಬಾಸುಮತಿ ಅಕ್ಕಿ ರಫ್ತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಂದರುಗಳಲ್ಲಿ ಬಾಕಿ ಉಳಿದಿದ್ದು, ಸಾಗಣೆ ವೆಚ್ಚ ಗಗನಕ್ಕೇರಿದೆ. ಇದರಿಂದಾಗಿ ರಫ್ತುದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
Read Full Story
01:05 PM (IST) Jul 24

Karnataka News Live:Crigler-Najjar Syndrome - 9 ವರ್ಷದ ಬಾಲಕನ ಅನುವಂಶಿಕ ಕಾಯಿಲೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಶಸ್ತ್ರಚಿಕಿತ್ಸೆ!

ಕಲಬುರಗಿಯ 9 ವರ್ಷದ ಬಾಲಕನೊಬ್ಬ 'ಕ್ರಿಗ್ಲರ್ ನಜ್ಜರ್ ಸಿಂಡ್ರೋಮ್' ಎಂಬ ಅಪರೂಪದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾನೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಯಕೃತ್ತು ಕಸಿ ಸೌಲಭ್ಯವಿಲ್ಲದ ಕಾರಣ, ಬಡ ಕುಟುಂಬವು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದೆ.
Read Full Story
01:00 PM (IST) Jul 24

Karnataka News Live:ಟೆಕ್ ಮಹೀಂದ್ರಾ ವಿರುದ್ಧ ರೊಚ್ಚಿಗೆದ್ದ ಮಹಿಳೆ.. ಹೀಗೆ ಕೂರುವ ಹಿಂದಿದೆ ಒಂದು ಕರುಣಾಜನಕ ಕತೆ

ಹೈದರಾಬಾದ್‌ನ ಟೆಕ್ ಮಹೀಂದ್ರಾ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್, ಅನಾರೋಗ್ಯದ ರಜೆ ಪಡೆದಿದ್ದಕ್ಕೆ ಕಿರುಕುಳ ನೀಡಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಕಚೇರಿಯಲ್ಲಿ ವಾಶ್‌ರೂಮ್‌ಗೆ ಹೋಗಲು ಸಹ ಅನುಮತಿ ಪಡೆಯಬೇಕಾದ ಅಮಾನವೀಯ ನಿಯಮಗಳಿದ್ದವು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
Read Full Story
12:38 PM (IST) Jul 24

Karnataka News Live:RAMAYANA - ಅಮೆರಿಕಾದಲ್ಲಿ ಯಶ್, ಫೋಟೋಗಾಗಿ ಮುಗಿಬಿದ್ದ ಫ್ಯಾನ್ಸ್.. 'ರಾಮಾಯಣ' ಪ್ರಚಾರಕಾರ್ಯ ಇನ್ನೆಷ್ಟು ದಿನ?

ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ.

Read Full Story
11:08 AM (IST) Jul 24

Karnataka News Live:ಹಿಟ್ ಅಂಡ್ ರನ್‌ ಕೇಸ್‌ಗೆ ರೋಚಕ ಟ್ವಿಸ್ಟ್.. ಆಪ್ತಮಿತ್ರನ ಸದ್ದಿಲ್ಲದೇ ಮುಗಿಸಿಬಿಟ್ಟಿದ್ದ ಸ್ನೇಹಿತ..!

ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ.

Read Full Story
10:31 AM (IST) Jul 24

Karnataka News Live:ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ - ದೂಧಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟು?

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ದೂಧಗಂಗಾ ನದಿಯ ಹರಿವು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಬೆಳಗಾವಿ ಜಿಲ್ಲೆಯ ಐತಿಹಾಸಿಕ ದರ್ಗಾ ಜಲಾವೃತಗೊಂಡಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ ಮತ್ತು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ.
Read Full Story
09:47 AM (IST) Jul 24

Karnataka News Live:ಬೆಂಗಳೂರು - ಉದ್ಘಾಟನೆಗೂ ಮೊದಲೇ ವಾಲಿಕೊಂಡ ಕೂಡ್ಲುನಲ್ಲಿರುವ ವಸತಿ ಕಟ್ಟಡ, 18 ಮಹಡಿ ಅಪಾರ್ಟ್‌ಮೆಂಟ್ ಕೆಡವಲು ನಿರ್ಧಾರ

ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ಬಳಿ ನಿರ್ಮಿಸಲಾದ 18 ಮಹಡಿಗಳ 'ಎಸ್‌ಎನ್‌ಎನ್‌ ರಾಜ್ ಇಟರ್ನಿಯ' ಅಪಾರ್ಟ್‌ಮೆಂಟ್‌ನ ಒಂದು ವಿಂಗ್ ವಾಲಿಕೊಂಡಿದೆ. ಮಣ್ಣಿನ ಪರೀಕ್ಷೆಯ ವರದಿಯಲ್ಲಾದ ಲೋಪವೇ ಇದಕ್ಕೆ ಕಾರಣವೆಂದು ಹೇಳಿರುವ ಡೆವಲಪರ್‌ಗಳು, ಕಟ್ಟಡವನ್ನು ಕೆಡವಿ ತಮ್ಮ ಸ್ವಂತ ಖರ್ಚಿನಲ್ಲಿ ಮರುನಿರ್ಮಿಸಲು ನಿರ್ಧರಿಸಿದ್ದಾರೆ.
Read Full Story