ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'. ಮನಿಷ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ಅವರು ನಿರ್ಮಾಣದ ಜೊತೆಗೆ 'ರಾವಣ'ನ ಪಾತ್ರವನ್ನೂ ಕೂಡ ಮಾಡಿದ್ದಾರೆ. ಈ ಸಿನಿಮಾ ದೀಪಾವಳಿಗೆ ಬಿಡುಗಡೆ ಆಗಲಿದ್ದು, ಸದ್ಯಕ್ಕೆ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಟ ಯಶ್ ಅವರು ಸದ್ಯಕ್ಕೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ರಾಮಾಯಣ ಸಿನಿಮಾದ ಪ್ರಮೋಶನ್‌ನಲ್ಲಿ ನಿರತರಾಗಿದ್ದಾರೆ.

ಅಮೇರಿಕಾದದಲ್ಲಿ ರಾಮಾಯಣ ಪ್ರಚಾರದಲ್ಲಿ ಬ್ಯುಸಿಯಾದ ರಾಕಿಂಗ್ ಸ್ಟಾರ್ ಯಶ್

ಹೌದು, ನಟ ಯಶ್ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಟ ರಣಬೀರ್ ಕಪೂರ್ ಅವರೊಂದಿಗೆ ತಮ್ಮ 'ರಾಮಾಯಣ' ಸಿನಿಮಾದ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದ 'ಕಾಮಿಕ್ ಕಾನ್' ಕಾರ್ಯಕ್ರಮದಲ್ಲಿನಟ ಯಶ್ ಹಾಗೂ ರಣಬೀರ್ ಕಪೂರ್ ಭಾಗಿಯಾಗಿ ಗಮನಸೆಳೆದರು.

ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ.

ಯೂಟ್ಯೂಬ್'ನಲ್ಲಿ ಮುಂದಿನವಾರ ರಾಮಾಯಣ ಟ್ರೇಲರ್ ಬಿಡುಗಡೆ

'ಯೂಟ್ಯೂಬ್'ನಲ್ಲಿ ಮುಂದಿನವಾರ ರಾಮಾಯಣ ಟ್ರೇಲರ್ ಬಿಡುಗಡೆ ಆಗಲಿದ್ದು, ಸದ್ಯಕ್ಕೆ ಈ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಆದ್ದರಿಂದ ಇನ್ನೂ ಒಂದುವಾರ ಅಮೇರಿಕಾದಲ್ಲೇ ಬೀಡು ಬಿಡಲಿರುವ ಯಶ್ ಹಾಗೂ ಚಿತ್ರತಂಡ, ಮುಂದೆ ಜಗತ್ತಿನ ಹಲವು ಕಡೆ ರಾಮಾಯಣ ಚಿತ್ರದ ಪ್ರಚಾರಕಾರ್ಯ ಕೈಗೊಳ್ಳಲಿದೆ. ಮುಂದಿನವಾರ ಅಮೇರಿಕಾದಿಂದ ಭಾರತಕ್ಕೆ ನಟ ಯಶ್ ಹಾಗೂ ಚಿತ್ರತಂಡ ವಾಪಸ್ ಆಗಲಿದೆ.

ಒಂದು ಮಾಹಿತಿ ಪ್ರಕಾರ, ನಟ ಯಶ್, ರಣಬೀರ್ ಕಪೂರ್ ಸೇರಿದಂತೆ ಇಡೀ ಚಿತ್ರತಂಡ ಇಂಡಿಯಾಗೆ ವಾಪಸ್ ಬರ್ತಿದಂತೆ, ಯಶ್ ನಟನೆಯ ಮತ್ತೊಂದು ಪ್ಯಾನ್‌ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಟ್ರೇಲರ್ ಲಾಂಚ್ ನಡೆಯಲಿದೆ. ಈ ಬಗ್ಗೆ ಯಶ್ ಆಗಲೀ ಅಥವಾ ಟಾಕ್ಸಿಕ್ ಚಿತ್ರತಂಡವಾಗಲೀ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಸದ್ಯಕ್ಕಂತೂ ಯಶ್ ನಟನೆಯ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಪ್ರಮೋಶನ್ ಅಬ್ಬರದಿಂದ ನಡೆಯುತ್ತಿದೆ.