ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ. ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಪೋಷಕರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.
ಗದಗ (ಜು.24): ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆಯಾದ ಆಘಾತಕಾರಿ ಘಟನೆ ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನ ಡಾ ವೀಣಾ ಹಾನಾಪುರ(25) ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದವರಾದ ವಿದ್ಯಾರ್ಥಿನಿ ವೀಣಾ ಹಾಸ್ಟೆಲ್‌ನಲ್ಲಿದ್ದುಕೊಂಡು ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್(MPH) ಕೋರ್ಸ್ ಓದುತ್ತಿದ್ದರು. ಆದರೆ ಅನುಮಾನಸ್ಪದ ರೀತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ಕೊಲೆಯೋ ಆತ್ಮ*ಹತ್ಯೆಯೋ?
ನಿನ್ನೆ ರಾತ್ರಿ ಹಾಸ್ಟೆಲ್ ರೂಮ್‌ಗೆ ಹೋಗಿದ್ದ ವೀಣಾ. ರಾತ್ರಿ 11 ಗಂಟೆಯಾದರೂ ಆಚೆ ಬಾರದ ಹಿನ್ನೆಲೆ ಅನುಮಾನಗೊಂಡು ವಾರ್ಡ್ ರೂಂ ಬಾಗಿಲು ಬಡಿದ್ದಾರೆ. ಬಾಗಿಲು ತೆರೆಯದ ಹಿನ್ನೆಲೆ ಬಾಗಿಲು ಮುರಿದು ಕೋಣೆಯೊಳಗೆ ಹೋದಾಗ ಮಂಚದ ಕಂಬಿಗೆ ನೇಣುಬಿಗಿದ ಸ್ಥಿತಿ ಶವ ಪತ್ತೆಯಾಗಿದೆ.
ಸಾವಿನ ಬಗ್ಗೆ ತನಿಖೆ ನಡೆಸಲು ಪೋಷಕರು ಆಗ್ರಹ
ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ವೈದ್ಯಳಾಬೇಕಿದ್ದು ಅವಳು ಸಾಯುವವಳಲ್ಲ. ಯಾವುದೆ ಸಮಸ್ಯೆ ಇರಲಿಲ್ಲ. ಕಾಲು ನೆಲಕ್ಕೆ ತಾಗುವಂತೆ ನೇಣುಬಿಗಿಯಲಿದೆ. ಮಗಳ ಮುಖದ ಮೇಲೆ ಗಾಯಗಳಾಗಿವೆ. ಅಲ್ಲದೆ ನೇಣುಬಿಗಿದ ಬಟ್ಟೆಯೂ ಮಗಳಿಗೆ ಸರಿದ್ದಲ್ಲ. ಮಗಳ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು ಅದು ಮಗಳ ಹಸ್ತಾಕ್ಷರವಲ್ಲ ಎಂದು ಪೋಷಕರು ಸ್ಪಷ್ಟಪಡಿಸಿದ್ದು ಮಗಳು ಆತ್ಮ*ಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ. ಮಗಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿದ್ಯಾರ್ಥಿನಿಯ ತಂದೆ ರಾಮಪ್ಪ ಹಾನಾಪೂರ್ ಆಗ್ರಹಿಸಿದರು.
ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ಜಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು ಪೊಲೀಸರು ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.


