ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿದ್ದಾರೆ. ಕನ್ನಡಿಗರ ಸುರಕ್ಷತೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲು ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಪೂರ್ತಿ ಓದಿ- Home
- News
- State
- Karnataka News Live: ಪಹಲ್ಗಾಮ್ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r
Karnataka News Live: ಪಹಲ್ಗಾಮ್ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರದಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಆಗಲಿದೆ’ ಎಂದು ಭರವಸೆ ನೀಡಿದರು. ಕಳೆದ ವಾರ ರಾಜ್ಯದ ಹಲವು ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ, ತೆಗೆದು ಕತ್ತರಿಸಿದ ಘಟನೆ ನಡೆದಿತ್ತು. ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರು ಭಾನುವಾರ ಮಧ್ಯಾಹ್ನ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು
ಪಹಲ್ಗಾಮ್ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r
ಪಹಲ್ಗಾಮ್ ದಾಳಿ, ಸೌದಿ ಪ್ರವಾಸ ತೊರೆದು ಇಂದು ರಾತ್ರಿಯೇ ಪ್ರಧಾನಿ ಭಾರತಕ್ಕೆ ವಾಪಸ್!
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮರಳುತ್ತಿದ್ದಾರೆ. 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿರುವ ಈ ದಾಳಿಯನ್ನು ಖಂಡಿಸಿರುವ ಪ್ರಧಾನಿಗಳು, ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪೂರ್ತಿ ಓದಿ'ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಸದಾ ಬೆಂಬಲ..' ಪಹಲ್ಗಾಮ್ ದಾಳಿ ಖಂಡಿಸಿದ ಟ್ರಂಪ್, ಪುಟಿನ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 28 ಜನರು ಸಾವನ್ನಪ್ಪಿದ್ದಾರೆ. ಅಮೆರಿಕ, ರಷ್ಯಾ, ಇಸ್ರೇಲ್ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಈ ದಾಳಿಯನ್ನು ಖಂಡಿಸಿವೆ.
ಪೂರ್ತಿ ಓದಿ'ಭಾರತಕ್ಕೆ ಈಗ ಒಳ್ಳೇಯ ಟೈಮ್ ಬಂದಿದೆ..' ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯನ್ನು ಚಕ್ರವರ್ತಿ ಸೂಲಿಬೆಲೆ ಖಂಡಿಸಿದ್ದಾರೆ. ಸ್ಥಳೀಯರ ಕುಮ್ಮಕ್ಕು ಇದೆ ಎಂದು ಹೇಳಿ, ತಾತ್ಕಾಲಿಕವಾಗಿ ಜಮ್ಮು ಕಾಶ್ಮೀರಕ್ಕೆ ಪ್ರವಾಸ ನಿಷೇಧಿಸಬೇಕೆಂದು ಸಲಹೆ ನೀಡಿದ್ದಾರೆ.
ಪೂರ್ತಿ ಓದಿಸ್ಮಾರ್ಟ್ ಮೀಟರ್ ಲೂಟಿ ತಡೆಯಬೇಕಾ ಸೈನ್ ಮಾಡಿ!
ಕರ್ನಾಟಕ ಸರ್ಕಾರವು ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ. ಈ ಹಗರಣದ ವಿರುದ್ಧ ಹೋರಾಡಲು ಸಾರ್ವಜನಿಕರು change.org ನಲ್ಲಿ ಪಿಟಿಷನ್ ಗೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ.
ಪೂರ್ತಿ ಓದಿಎಂ.ಎಸ್.ಧೋನಿ ದಿನಕ್ಕೆ 5 ಲೀಟರ್ ಕುಡಿತಾರಾ? ಇಲ್ಲಿದೆ ಧೋನಿ ಸ್ಪಷ್ಟನೆ
ಮಹೇಂದ್ರ ಸಿಂಗ್ ಧೋನಿ ದಿನಕ್ಕೆ 5 ಲೀಟರ್ ಹಾಲು ಕುಡಿಯುತ್ತಾರೆ ಎಂಬ ವದಂತಿಯನ್ನು ತಳ್ಳಿಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್ 2025ರಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಕಷ್ಟಕರವಾಗಿದೆ.
ಪೂರ್ತಿ ಓದಿಮದುವೆಯಾದ ಆರೇ ದಿನಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಬಲಿಯಾಗಿದ್ದು, ಇಬ್ಬರು ಕರ್ನಾಟಕದವರು. ಭಾರತೀಯ ನೌಕಾಸೇನೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೂಡ ಸಾವಿಗೀಡಾಗಿದ್ದಾರೆ.
ಪೂರ್ತಿ ಓದಿVideo | ನಮ್ಮ ದುಡಿಮೆನೇ ಹಾಳಾಗೋಯ್ತು..' ಭಯೋತ್ಪಾದಕ ದಾಳಿ ಬಗ್ಗೆ ಸ್ಥಳೀಯರು ಆಕ್ರೋಶ
Pahalgam terror attack Live: 'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪೂರ್ತಿ ಓದಿಯುಪಿಎಸ್ಸಿ ಫಲಿತಾಂಶ: 12 ಅಂಕದಿಂದ ವಂಚಿತಳಾಗಿದ್ದ 'ಶಕ್ತಿ ದುಬೆ' ಈಗ ದೇಶಕ್ಕೆ ಟಾಪರ್!
ಕಳೆದ ಬಾರಿ 12 ಅಂಕಗಳಿಂದ ವಂಚಿತಳಾಗಿದ್ದ ಶಕ್ತಿ ದುಬೆ ಈ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾಳೆ. ಶಕ್ತಿ ದುಬೆ ಅವರ ಸಾಧನೆಯ ಹಿಂದಿನ ಹೋರಾಟ, ಛಲ ಬಿಡದೆ ಓದಿ ಯಶಸ್ಸಿನ ಕಥೆ ಇಲ್ಲಿದೆ ನೋಡಿ.
ಪೂರ್ತಿ ಓದಿRelationship Tips: ಹುಡುಗಿಯರು ಬ್ರೇಕ್ ಅಪ್ ಆದ ನಂತರ ಈ 5 ಕೆಲಸ ಮಾಡುತ್ತಾರೆ! ತಿಳಿದರೆ ಅಚ್ಚರಿಪಡ್ತೀರಿ!
ಹುಡುಗಿಯರು ಬ್ರೇಕಪ್ ನಂತರ ಸಾಮಾನ್ಯವಾಗಿ ವಿಭಿನ್ನವಾಗಿ ವರ್ತಿಸುತ್ತಾರೆ. ಅವರು ತಮ್ಮ ಮಾಜಿಗಳನ್ನು ನಿರ್ಬಂಧಿಸುತ್ತಾರೆ ಮತ್ತು ಅನಿರ್ಬಂಧಿಸುತ್ತಾರೆ, ಅವರೊಂದಿಗೆ ಮಾತನಾಡಲು ನೆಪಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ.
ಪೂರ್ತಿ ಓದಿ'ಸಾವು ಕೂಡ ಧರ್ಮವನ್ನೇ ನೋಡಿತು..' ಸೋಶಿಯಲ್ ಮೀಡಿಯಾದಲ್ಲಿ ಪಹಲ್ಗಾಮ್ ರಕ್ತದೋಕುಳಿಗೆ ಕಂಬನಿ!
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, ಪ್ರವಾಸಿಗರ ಧರ್ಮವನ್ನು ಕೇಳಿ ಗುಂಡು ಹಾರಿಸಿದ್ದಾರೆ. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೂರ್ತಿ ಓದಿಕುಶಾಲನಗರದಲ್ಲಿ ತೆರಿಗೆ ಏರಿಕೆ: ಪರಸಭೆ ವಿರುದ್ಧ ಚೇಂಬರ್ ಆಫ್ ಕಾಮರ್ಸ್, ಜನರ ಆಕ್ರೋಶ
ಕುಶಾಲನಗರ ಪುರಸಭೆಯು ಆಸ್ತಿ ಮತ್ತು ವ್ಯಾಪಾರ ಪರವಾನಗಿ ತೆರಿಗೆಯನ್ನು ದುಪ್ಪಟ್ಟು ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ನಿಯಮಗಳನ್ನು ಮೀರಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ಚೇಂಬರ್ ಆಫ್ ಕಾಮರ್ಸ್ ಅಸಮಾಧಾನ ವ್ಯಕ್ತಪಡಿಸಿದೆ.
ಪೂರ್ತಿ ಓದಿಮಸಾಲೆ ದೋಸೆಯಲ್ಲಿ ಅಡಗಿದ್ದ ಯಮರಾಯ! 3 ವರ್ಷದ ಬಾಲಕಿ ಸಾವು...
ವಿದೇಶದಿಂದ ಬಂದ ತಂದೆಯನ್ನು ಭೇಟಿಯಾಗಲು ಹೋಟೆಲ್‌ಗೆ ಹೋಗಿದ್ದ ಮೂರು ವರ್ಷದ ಬಾಲಕಿ ಮಸಾಲೆ ದೋಸೆ ತಿಂದು ಸಾವನ್ನಪ್ಪಿದ್ದಾಳೆ. ಫುಡ್ ಪಾಯ್ಸನ್ ನಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ.
ಪೂರ್ತಿ ಓದಿಪಹಲ್ಗಾಮ್ ಉಗ್ರರ ದಾಳಿ ಮತ್ತೊಬ್ಬ ಕನ್ನಡಿಗ ಹಾವೇರಿ ಭರತ್ ಭೂಷಣ್ ಬಲಿ!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 24 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿಯ ಭರತ್ ಭೂಷಣ್ ಸೇರಿದ್ದಾರೆ. ಭರತ್, ಮಾಜಿ ಸ್ಪೀಕರ್ ಕೆ.ಬಿ. ಕೋಳೀವಾಡ ಅವರ ಸಂಬಂಧಿ.
ಪೂರ್ತಿ ಓದಿದಾಲ್ ಲೇಕ್‌ನಲ್ಲಿ ಪತ್ನಿ ಪಲ್ಲವಿ ಜೊತೆ ದೋಣಿ ವಿಹಾರ ಮಾಡಿದ್ದ ಮಂಜುನಾಥ್ ಕೊನೇ ವಿಡಿಯೋ ವೈರಲ್!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಅವರ ಪತ್ನಿ ಪಲ್ಲವಿ ದಾಲ್ ಲೇಕ್‌ನಲ್ಲಿ ವಿಹರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿಯುಪಿಎಸ್ಸಿ ಪಾಸಾದ 20 ಕನ್ನಡಿಗರು! ಟಾಪರ್‌ಗಳ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ ನೋಡಿ!
2024ರ UPSC ಪರೀಕ್ಷೆಯಲ್ಲಿ 1009 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 20 ಕನ್ನಡಿಗರು ಸೇರಿದ್ದಾರೆ. ವೈದ್ಯರು, ಇಂಜಿನಿಯರ್‌ಗಳು ಮತ್ತು ಕೃಷಿಕರೂ ಸೇರಿದಂತೆ ವಿವಿಧ ಹಿನ್ನೆಲೆಯ ಈ ಅಭ್ಯರ್ಥಿಗಳ ಶ್ರೇಣಿ, ಹಿನ್ನೆಲೆ ಮತ್ತು ಸಾಧನೆಯ ಕುರಿತು ತಿಳಿಯಿರಿ.
ಪೂರ್ತಿ ಓದಿPahalgam terror attack: 'ಈಗ ಮಾತಾಡಿದ್ರೆ ರಾಜಕೀಯ ಆಗುತ್ತೆ..' ಉಗ್ರರ ದಾಳಿ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನ್ನಡಿಗ ಸೇರಿ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಒಡ್ಡುಗೈ ಎನಿಸಿಕೊಂಡಿರುವ ಟಿಆರ್‌ಎಫ್ ಹೊಣೆ ಹೊತ್ತಿದೆ.
ಪೂರ್ತಿ ಓದಿಪಹಲ್ಗಾಮ್ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಟಿಆರ್‌ಎಫ್ ಹೊತ್ತುಕೊಂಡಿದೆ.
ಪೂರ್ತಿ ಓದಿಆನೇಕಲ್ ಮಹದೇಶ್ವರಸ್ವಾಮಿ ಜಾತ್ರೆಯಲ್ಲಿ ಅಗ್ನಿಕೊಂಡದಲ್ಲಿ ಕಾಲು ಜಾರಿ ಬಿದ್ದ ಪೂಜಾರಿ!
ಆನೇಕಲ್ ತಾಲೂಕಿನ ಚಿಕ್ಕ ಹೊಸಹಳ್ಳಿಯ ಮಹದೇಶ್ವರ ಸ್ವಾಮಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಅರ್ಚಕರೊಬ್ಬರು ಬೆಂಕಿಗೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಹೊರತಾಗಿಯೂ ಜಾತ್ರೆ ಮುಂದುವರೆದಿದೆ.
ಪೂರ್ತಿ ಓದಿBreaking: ಪಹಲ್ಗಾಮ್ ಟರರಿಸ್ಟ್ ದಾಳಿಯಲ್ಲಿ 24ಕ್ಕೂ ಅಧಿಕ ಪ್ರವಾಸಿಗರು ಸಾವು!
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 24 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ.
ಪೂರ್ತಿ ಓದಿ