ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಆರೋಪಿಸಿ, ಚೇಂಜ್.ಆರ್ಗ್ ನಲ್ಲಿ ಪ್ರತಿಭಟನಾ ಅರ್ಜಿಗೆ ಸಹಿ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಲೋಕಾಯುಕ್ತಕ್ಕೂ ಬಿಜೆಪಿ ದೂರು ನೀಡಿದ್ದು, ಸಚಿವ ಜಾರ್ಜ್ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಏ.22): ಕರ್ನಾಟಕ ಸರ್ಕಾರವು ವಿದ್ಯುತ್ ಸರಬರಾಜು ಅಳೆಯಲು ಸ್ಮಾರ್ಟ್‌ಮೀಟರ್ ಅಡವಳಿಕೆ ನೆಪದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ. ಈ ಲೂಟಿ ತಡೆಯಲು ಸಾರ್ವಜನಿಕರು ಕೈ ಜೋಡಿಸಬೇಕು. ಯಾವ ರೀತಿ ಸ್ಮಾರ್ಟ್ ಮೀಟರ್ ಹೆಸರಲ್ಲಿ ಲೂಟಿ ನಡೆಯುತ್ತಿದೆ ಎಂದು ತಿಳಿಯಲು ಹಾಗೂ ಇದನ್ನ ತಡೆಯಬೇಕು ಎಂದು ಒತ್ತಡ ಹೇರುವ ಸಲುವಾಗಿ ಚೇಂಜ್ ಆರ್ಗ್ ವೆಬ್ ಗೆ ಲಾಗಿನ್ ಆಗಿ ಪಿಟಿಷನ್ ಗೆ ಸಹಿ ಹಾಕಲು ಅವರು ಮನವಿ ಮಾಡಿದ್ದಾರೆ.
ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನೇರವಾಗಿ ಚೇಂಜ್ ಆರ್ಗ್ ಗೆ ಲಾಗಿನ್ ಆಗಬಹುದು. ಲಕ್ಷಾಂತರ ಸಂಖ್ಯೆಯಲ್ಲಿ ಜನ ಸಹಿ ಹಾಕಿದರೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಲಿದೆ. ಜನಾಭಿಪ್ರಾಯ ಎಷ್ಟಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲು ಸಹ ಅನುಕೂಲವಾಗಲಿದೆ. ಹೆಚ್ಚೆಚ್ಚು ಜನ ಸಹಿ ಹಾಕಿ ಎಂದು ಅಶ್ವತ್ಥನಾರಾಯಣ್ ಮನವಿ ಮಾಡಿದ್ದಾರೆ.
ಇನ್ನು ಈ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತಕ್ಕೆ ಬಿಜೆಪಿ ದೂರು ನೀಡಿದೆ. ಶಾಸಕರಾದ ಅಶ್ವತ್ಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ನೇತೃತ್ವದ ನಿಯೋಗದಿಂದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಕೆ ಮಾಡಿದೆ.
ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್ ದಂಧೆ, 'ಮೀಟರ್' ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?
ಈ ವೇಳೆ ಮಾತನಾಡಿದ್ದ ಅಶ್ವತ್ಥ್ ನಾರಾಯಣ್ ಅವರು, ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೂ ಸವಿಸ್ತಾರವಾಗಿ ತಿಳಿಸಿದ್ದೇವೆ. ನೇರವಾಗಿ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದೇವೆ. ಕ್ರಮ ವಹಿಸಿ ತಾರ್ಕಿಕ ಅಂತ್ಯ ಕೊಡಬೇಕೆಂದು ಮನವಿ ಮಾಡಲಾಗಿದೆ. ಈ ದೂರಿನೊಂದಿಗೆ ಯುದ್ಧ ಪ್ರಾರಂಭವಾಗಿದೆ ಎಂದು ಹೇಳಿದರು. ಸಚಿವ ಕೆ.ಜೆ.ಜಾರ್ಜ್ ಅವರು 9 ಸುಳ್ಳು ಹೇಳಿದ್ದಾರೆ. ಇದನ್ನು ಪತ್ರಿಕಾಗೋಷ್ಠಿಯಲ್ಲೂ ತಿಳಿಸಿದ್ದೇವೆ. ಬೇನಾಮಿ, ದುರ್ಬಳಕೆ ನಡೆದಿರುವುದು, ಗ್ರಾಹಕರಿಗೆ ಕಡ್ಡಾಯ ಮಾಡಲು ಅವಕಾಶ ಇಲ್ಲದಿದ್ದರೂ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರದ ಇಲಾಖೆಗಳಿಂದ ಎಸ್ಕಾಂಗೆ 8500 ಕೋಟಿ ಬಾಕಿ, ರಾಜ್ಯದ ಜನರಿಗೆ ಮಿಸ್ ಆಯ್ತು ಕೇಂದ್ರದ ಭಾರೀ ಸಬ್ಸಿಡಿ!
