ಧೋನಿ ದಿನಕ್ಕೆ ಐದು ಲೀಟರ್ ಹಾಲು ಕುಡಿಯುತ್ತಾರೆಂಬ ವದಂತಿಯನ್ನು ಅವರೇ ತಳ್ಳಿಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಈ ಗಾಳಿಸುದ್ದಿಯನ್ನು "ಸುಳ್ಳು" ಎಂದಿದ್ದಾರೆ. ಲಸ್ಸಿ ಕುಡಿಯುವ ಆಸಕ್ತಿಯೂ ಇಲ್ಲ ಎಂದಿದ್ದಾರೆ. ಐಪಿಎಲ್‌ನಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಅರ್ಹತೆ ಕಷ್ಟಕರವಾಗಿದೆ.
ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ತಂಡಕ್ಕೆ ಸೇರಿಕೊಂಡಾಗ ಅವರ ದೇಹದ ಫಿಟ್ನೆಸ್ ನೋಡಿ ಅವರು ದಿನಕ್ಕೆ 5 ರಿಂದ 10 ಲೀಟರ್ ಹಾಲು ಕುಡಿಯುತ್ತಾರೆ. ಹಾಲುಅಷ್ಟೊಂದು ಹಾಲು ಕುಡಿಯಯುವುದರಿಂದಲೇ ಸ್ಟ್ಯಾಮಿನಾ ಇದ್ದಾರೆ ಎಂಬ ಮಾತು ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿತ್ತು. ಜಾರ್ಖಂಡ್ ಮೂಲದ ಧೋನಿ ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರೋವರೆಗೂ ಉತ್ತರ ನೀಡಿರಲಿಲ್ಲ. ಇದೀಗ ಐಪಿಎಲ್ 2025ರ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿರುವ ಕ್ಯಾಪ್ಟನ್ ಕೂಲ್ ಧೋನಿ ದಿನಕ್ಕೆ 5 ಲೀ. ಹಾಲು ಕುಡಿಯುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಐಪಿಎಲ್ 2025ರ ಸೀಸನ್ ಅಷ್ಟೇನೂ ಚೆನ್ನಾಗಿಲ್ಲ. ತಂಡ ಈವರೆಗೆ ಎಂಟು ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದೆ ಮತ್ತು 6ರಲ್ಲಿ ಸೋತಿದೆ. ಆರಂಭಿಕ 5 ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ ನಾಯಕರಾಗಿದ್ದರು, ಆದರೆ ಅವರ ಗಾಯದ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ನಾಯಕರಾದರು. ನಾಯಕ ಬದಲಾದರೂ ತಂಡದ ಭವಿಷ್ಯ ಬದಲಾಗಲಿಲ್ಲ. ಧೋನಿ ನಾಯಕತ್ವದಲ್ಲಿ 3 ಪಂದ್ಯಗಳನ್ನಾಡಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ನಡುವೆ ಧೋನಿ ಅವರ ವಿಡಿಯೋ ವೈರಲ್ ಆಗಿದೆ. ತಮ್ಮ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಯ ಬಗ್ಗೆ ಕ್ಯಾಪ್ಟನ್ ಕೂಲ್ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅವರು ತಮ್ಮ ಬಗ್ಗೆ ಹಬ್ಬಿದ್ದ ದೊಡ್ಡ ಗಾಳಿಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಂದರ್ಶನದಲ್ಲಿ ಧೋನಿ ಅವರನ್ನು, 'ನಿಮ್ಮ ಬಗ್ಗೆ ಹೇಳಲಾದ ದೊಡ್ಡ ಸುಳ್ಳು ಯಾವುದು?' ಎಂದು ಕೇಳಲಾಗುತ್ತದೆ. ಇದಕ್ಕೆ ಧೋನಿ, 'ನಾನು ದಿನಕ್ಕೆ 5 ಲೀಟರ್ ಹಾಲು ಕುಡಿಯುತ್ತೇನೆ ಎಂಬುದು ನನ್ನ ಬಗ್ಗೆ ಹೇಳಲಾದ ದೊಡ್ಡ ಮತ್ತು ಆಶ್ಚರ್ಯಕರ ಸುಳ್ಳು. ಇದರಲ್ಲಿ ಯಾವುದೇ ಸತ್ಯವಿಲ್ಲ' ಎಂದು ಉತ್ತರಿಸಿದ್ದಾರೆ. 'ನೀವು ವಾಷಿಂಗ್ ಮಷಿನ್‌ನಲ್ಲಿ ಲಸ್ಸಿ ಮಾಡ್ತೀರಾ?' ಎಂಬ ಇನ್ನೊಂದು ಪ್ರಶ್ನೆಗೆ, "ನನಗೆ ಲಸ್ಸಿ ಕುಡಿಯುವ ಆಸಕ್ತಿ ಇಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈ ಎದುರು ಸೋತ ಸಿಎಸ್‌ಕೆ; ಧೋನಿ ಪಡೆ ಬಗ್ಗೆ ರಾಯುಡು ಅಚ್ಚರಿ ಹೇಳಿಕೆ!
ಧೋನಿ ಹಾಲು ಕುಡಿಯುವ ಬಗ್ಗೆ ದೊಡ್ಡ ಗಾಳಿಸುದ್ದಿ ಹಬ್ಬಿತ್ತು:
ಭಾರತದ ಮಾಜಿ ನಾಯಕ ಧೋನಿ ದಿನಕ್ಕೆ 5 ಲೀಟರ್ ಹಾಲು ಕುಡಿಯುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಅವರ ಆರೋಗ್ಯದ ಗುಟ್ಟು ಇದೇ ಎಂದೂ ಹೇಳಲಾಗಿತ್ತು. ಈ ಬಗ್ಗೆ ಧೋನಿ ಅವರನ್ನು ಕೇಳಿದಾಗ, 'ಇದೆಲ್ಲಾ ಸುಳ್ಳು, ನಾನು ಹಾಗೆ ಮಾಡುವುದಿಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 'ದಿನಕ್ಕೆ ಯಾರಾದರೂ ಇಷ್ಟು ಹಾಲು ಕುಡಿಯಲು ಹೇಗೆ ಸಾಧ್ಯ?' ಎಂದು ನಗುತ್ತಾ ಅವರೇ ವಾಪಸ್ ಪ್ರಶ್ನಿಸಿದ್ದಾರೆ.
ಐಪಿಎಲ್ 2025ರ ಪ್ಲೇಆಫ್‌ಗೆ ಸಿಎಸ್‌ಕೆ ಇನ್ನೂ ಅರ್ಹತೆ ಪಡೆಯುವ ಸಾಧ್ಯತೆಯಿದೆಯೇ?
ಎಂಎಸ್ ಧೋನಿ ಈಗ ಐಪಿಎಲ್ 2025ರಲ್ಲಿ ಬ್ಯುಸಿಯಾಗಿದ್ದಾರೆ. ಅವರ ತಂಡ ಸತತವಾಗಿ ಸೋಲುತ್ತಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಕಷ್ಟ ಎಂಬಂತೆ ಕಾಣುತ್ತಿದೆ. 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದು, 6ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಸಿಎಸ್‌ಕೆ 10ನೇ ಸ್ಥಾನದಲ್ಲಿದೆ. ಚೆನ್ನೈ ಈವರೆಗೆ 4 ಅಂಕಗಳನ್ನು ಗಳಿಸಿದ್ದು, ಉಳಿದ 6 ಪಂದ್ಯಗಳಲ್ಲಿ ಗೆಲ್ಲಬೇಕು. ಆಗ ತಂಡ 16 ಅಂಕಗಳನ್ನು ಗಳಿಸಿ, ಟಾಪ್ 4ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುತ್ತದೆ. ಆದರೆ ಇದು ಒಂದು ರೀತಿಯ ಪವಾಡವೇ ಸರಿ. ಆದರೂ, ಧೋನಿ ನಾಯಕತ್ವದಲ್ಲಿ ಏನೂ ಆಗಬಹುದು.
ಇದನ್ನೂ ಓದಿ: Shubman Gill's Record: ಶುಭ್‌ಮನ್ ಗಿಲ್‌ನಿಂದ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಧೂಳಿಪಟ!
