ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯನ್ನು ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಹಲವು ಪ್ರವಾಸಿಗರು ಮೃತಪಟ್ಟಿದ್ದಾರೆ, ಶಿವಮೊಗ್ಗ, ಹಾವೇರಿ ಮೂಲದ ಇಬ್ಬರು ಕನ್ನಡಿಗರ ಸಹ ಮೃತಪಟ್ಟಿದ್ದಾರೆ. ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆ ಈ ದಾಳಿಯ ಜವಾಬ್ದಾರಿಯನ್ನು ಒಪ್ಪಿಕೊಂಡಿದೆ.
Pahalgam terror attack: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯನ್ನು ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಹಲವು ಪ್ರವಾಸಿಗರು ಮೃತಪಟ್ಟಿದ್ದಾರೆ, ಶಿವಮೊಗ್ಗ, ಹಾವೇರಿ ಮೂಲದ ಇಬ್ಬರು ಕನ್ನಡಿಗರ ಸಹ ಮೃತಪಟ್ಟಿದ್ದಾರೆ. ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆ ಈ ದಾಳಿಯ ಜವಾಬ್ದಾರಿಯನ್ನು ಒಪ್ಪಿಕೊಂಡಿದೆ.
ಭಯೋತ್ಪಾದನೆಗೆ ಸ್ಥಳೀಯರ ಕುಮ್ಮಕ್ಕು: ಸೂಲಿಬೆಲೆ
ಈ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಉಗ್ರರು ಬಸ್‌ನ್ನು ಕಣಿವೆಗೆ ತಳ್ಳಿದ್ದರು. ಆ ನಂತರ ಇದು ಜಮ್ಮು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ. ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು, ಗುರುತು ಪರಿಶೀಲಿಸಿ ಕೊಲೆ ಮಾಡಲಾಗಿದೆ. ಇದು ಜಮ್ಮು ಕಾಶ್ಮೀರದ ಪ್ರವಾಸೋದ್ಯಮಕ್ಕೆ ದೊಡ್ಡ ಆಘಾತವಾಗಿದೆ. 370ನೇ ವಿಧಿಯ ರದ್ದತಿಯ ನಂತರ ಕೆಲವೇ ದಾಳಿಗಳು ನಡೆದಿದ್ದವು, ಆದರೆ ಇದು ದೊಡ್ಡಮಟ್ಟದ ದಾಳಿಯಾಗಿದೆ. ಈ ಭಯೋತ್ಪಾದನೆಗೆ ಸ್ಥಳೀಯರ ಕುಮ್ಮಕ್ಕು ಇದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದರು.
ಇದನ್ನ್ಊ ಓದಿ:Video | ನಮ್ಮ ದುಡಿಮೆನೇ ಹಾಳಾಗೋಯ್ತು..' ಭಯೋತ್ಪಾದಕ ದಾಳಿ ಬಗ್ಗೆ ಸ್ಥಳೀಯರು ಆಕ್ರೋಶ
ತಾತ್ಕಾಲಿಕವಾಗಿ ಪ್ರವಾಸ ನಿಷೇಧಕ್ಕೆ ಸಲಹೆ:
ಜಮ್ಮು ಕಾಶ್ಮೀರದಲ್ಲಿ ಇನ್ನೂ ಭಯದ ವಾತಾವರಣವಿದೆ. ಪ್ರವಾಸೋದ್ಯಮವನ್ನು ಬೆಳೆಸುವುದು ಕೆಲವರಿಗೆ 'ಸಾಂಸ್ಕೃತಿಕ ದಾಳಿ'ಯಂತೆ ಕಾಣುತ್ತದೆ. ತಾತ್ಕಾಲಿಕವಾಗಿ ಜಮ್ಮು ಕಾಶ್ಮೀರಕ್ಕೆ ಪ್ರವಾಸವನ್ನು ನಿಷೇಧಿಸಬೇಕು. ಇಲ್ಲವಾದರೆ, ಪ್ರವಾಸಿಗರು ನೇರವಾಗಿ ಅಮರನಾಥ ಯಾತ್ರೆಗೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.
ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ
ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ಗೊತ್ತಾಗಿದೆ. ಭಾರತಕ್ಕೆ ಈಗ ಸೂಕ್ತ ಸಮಯ ಬಂದಿದೆ. ಭಾರತ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂಬ ಭಾವನೆ ನನಗಿದೆ ಎಂದು ಸೂಲಿಬೆಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವರ ಕ್ರಮ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ. ಭದ್ರತಾ ಪಡೆಗಳು ತನಿಖೆಯನ್ನು ಚುರುಕುಗೊಳಿಸಿವೆ, ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣವನ್ನು ವಹಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇಇದನ್ನೂ ಓದಿ: Pahalgam terror attack: : ಹಿಂದೂಗಳ ಗುರಿಯಾಗಿಸಿ ದಾಳಿ, ಪಾಕಿಸ್ತಾನದ ಕೈವಾಡ, ಪೊಲೀಸ್ ಸಮವಸ್ತ್ರದಲ್ಲಿದ್ದ ಟೆರರಿಸ್ಟ್!
ಪ್ರವಾಸೋದ್ಯಮಕ್ಕೆ ಆಘಾತ:
ಈ ದಾಳಿಯಿಂದ ಪಹಲ್ಗಾಮ್‌ನ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದ್ದು, ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಭಯದ ವಾತಾವರಣದಲ್ಲಿ ಇದ್ದಾರೆ ಎಂದು ವರದಿಗಳು ತಿಳಿಸಿವೆ.
