ತ್ರಿಶೂರಿನಲ್ಲಿ ಮಸಾಲೆ ದೋಸೆ ಸೇವಿಸಿದ ಮೂರು ವರ್ಷದ ಬಾಲಕಿ ಒಲಿವಿಯಾ ಮೃತಪಟ್ಟಿದ್ದಾಳೆ. ವಿದೇಶದಿಂದ ಬಂದ ತಂದೆಯನ್ನು ಕರೆತರಲು ಹೋಟೆಲ್‌ನಲ್ಲಿ ಊಟ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಕುಟುಂಬದ ಇತರ ಸದಸ್ಯರಿಗೂ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಷಪೂರಿತ ಆಹಾರ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಚಿಕಿತ್ಸೆಯಲ್ಲಿನ ಲೋಪದೋಷದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಕೊಚ್ಚಿ (ಕೇರಳ): ಸಾವು ಹೇಗೆ, ಯಾವಾಗ, ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳುವುದು ಅಸಾಧ್ಯವೇ ಸರಿ. ಇದೀಗ ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಮೂರು ವರ್ಷದ ಕಂದನಿಗೆ ಮಸಾಲೆ ದೋಸೆಯೇ ಸಾವಿನ ರೂಪದಲ್ಲಿ ಬಂದಿದೆ! ವಿದೇಶದಿಂದ ಬಂದ ತಂದೆಯನ್ನು ಅಪ್ಪಿಕೊಳ್ಳುವ ಖುಷಿಯಲ್ಲಿದ್ದ ಮಗು ಈಗ ಇಹಲೋಕ ತ್ಯಜಿಸಿದೆ. ಇಂಥದ್ದೊಂದು ನೋವಿನ ಘಟನೆ ನಡೆದಿರುವುದು ಕೇರಳದ ತ್ರಿಶೂರ್‌ನ ವೆಂಡೂರಿನಲ್ಲಿ. ಮೂರು ವರ್ಷದ ಬಾಲಕಿ ಮಸಾಲೆ ದೋಸೆ ತಿನ್ನುತ್ತಿದ್ದಂತೆಯೇ ಸಾವಿಗೀಡಾಗಿದ್ದಾಳೆ. ಈಕೆಯ ಹೆಸರು ಒಲಿವಿಯಾ


 ಕಲ್ಲೂಕರನ್ ಹೆನ್ರಿ ಅವರ ಪುತ್ರಿಯಾಗಿರುವ ಒಲಿವಿಯಾ ಸಾವಿನ ಹಾದಿ ತುಳಿದಿದ್ದಾಳೆ. ಬಾಲಕಿಯ ತಂದೆ ಹೆನ್ರಿ ವಿದೇಶದಲ್ಲಿದ್ದರು. ಕಳೆದ ಶನಿವಾರ ವಿದೇಶದಿಂದ ನೆಡುಂಬಸ್ಸೇರಿಗೆ ಆಗಮಿಸಿದ್ದ ಹೆನ್ರಿಯನ್ನು ಕರೆದುಕೊಂಡು ಬರಲು ಒಲಿವಿಯಾ ಕುಟುಂಬ ಸದಸ್ಯರೊಂದಿಗೆ ಹೋಗಿದ್ದಳು. ಮನೆಗೆ ಹೋಗುವಾಗ, ಹೆನ್ರಿ, ಅವರ ಪತ್ನಿ, ತಾಯಿ ಮತ್ತು ಒಲಿವಿಯಾ ಅಂಗಮಾಲಿಯ ಹೋಟೆಲ್‌ನಲ್ಲಿ ಊಟ ಮಾಡಿದರು. ಬಾಲಕಿ ಮಸಾಲೆದೋಸೆ ತಿಂದಿದ್ದಳು. ಇದಾದ ಬಳಿಕ ಖುಷಿಯಿಂದ ಎಲ್ಲರೂ ಮನೆಗೆ ಬರುತ್ತಿದ್ದಂತೆಯೇ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆಕೆಯನ್ನು ಒಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಒಲಿವಿಯಾಗೆ ಇಂಜೆಕ್ಷನ್ ನೀಡಿದರು. ವೈದ್ಯರು ಕೂಡ ಇದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸದೇ ಮನೆಗೆ ಕಳುಹಿಸಿದರು.

ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..

 ಆಸ್ಪತ್ರೆಯಿಂದ ವಾಪಸಾದ ಬಳಿಕ ಬಾಲಕಿಗೆ ಮತ್ತಷ್ಟು ಸಮಸ್ಯೆ ಉಂಟಾಯಿತು. ಮರುದಿನ ಮಗುವಿನ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತು. ಮಗುವನ್ನು ಪುತ್ತುಕ್ಕಾಡ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿಯೇ ಬಾಲಕಿ ಸಾವನ್ನಪ್ಪಿದಳು. ಮಗುವಿನ ಜೊತೆಗೆ, ಪೋಷಕರು ಮತ್ತು ಹೆನ್ರಿಯ ತಾಯಿ ಮಸಾಲೆ ದೋಸೆ ತಿಂದಿದ್ದರು. ಅವರು ಕೂಡ ದೈಹಿಕವಾಗಿ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ, ಸಾವಿಗೆ ಮಸಾಲೆ ದೋಸೆ ಕಾರಣ ಎಂದು ತಿಳಿದು ಬಂದಿದೆ. ಮಸಾಲೆ ದೋಸೆ ಮಾಡುವ ಸಮಯದಲ್ಲಿ ಹೋಟೆಲ್​ನಲ್ಲಿ ಏನೋ ಎಡವಟ್ಟಾಗಿದ್ದು, ಎಲ್ಲರಿಗೂ ಫುಡ್​ ಪಾಯಿಸನ್​ ಆಗಿದೆ. ಅದನ್ನು ತಿನ್ನುವಾಗ ಯಾರಿಗೂ ತಿಳಿಯಲಿಲ್ಲ. ಆದರೆ ಮನೆಗೆ ಮರಳಿದಾಗ ಎಲ್ಲರೂ ಅನಾರೋಗ್ಯ ಹೊಂದಿದ್ದಾರೆ. ಆದರೆ ಪುಟ್ಟ ಬಾಲೆಗೆ ವಿಷ ಬೇಗನೇ ದೇಹ ತುಂಬಿಕೊಂಡಿರುವ ಕಾರಣ, ಆಕೆ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪುದುಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತುಕ್ಕಾಡ್ ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸರು ಮತ್ತು ಆರೋಗ್ಯ ಇಲಾಖೆ ತನಿಖೆ ಆರಂಭಿಸಿವೆ. ವಿಷ ಆಹಾರ ಎಂದು ವೈದ್ಯರು ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಬಾಲಕಿ ಬದುಕಿ ಉಳಿಯುತ್ತಿದ್ದಳು ಎನ್ನಲಾಗುತ್ತಿದೆ. ಆದರೆ ಅವರು ಕೂಡ ಅದನ್ನು ಸರಿಯಾಗಿ ಪರಿಶೀಲಸದೇ ಇಂಜೆಕ್ಷನ್​ ಕೊಟ್ಟು ಕಳುಹಿಸಿರುವುದು ಕೂಡ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಪುಟ್ಟ ಬಾಲೆಯನ್ನು ಕಳೆದುಕೊಂಡ ಮನೆಯವರ ನೋವು ಮಾತ್ರ ಆ ದೇವರಿಗೇ ಪ್ರೀತಿ!

ಇನ್ಸುಲಿನ್​, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದ ಸಚಿವ ಅಮಿತ್​ ಶಾ ಮಾತು ಕೇಳಿ