ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು ೨೪ ಪ್ರವಾಸಿಗರು ಮೃತಪಟ್ಟಿದ್ದಾರೆ, ೧೨ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯ ತೀವ್ರತೆ ಗಮನಿಸಿ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಪರಿಸ್ಥಿತಿ ನಿಭಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ದಾಳಿ ಎಂದಿದ್ದಾರೆ.

ಶ್ರೀನಗರ(ಏ.22): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅತ್ಯಂತ ಪೈಶಾಚಿಕ ಎನಿಸುವಂಥ ಘಟನೆ ನಡೆದಿದ್ದು, 24 ಮಂದಿ ಪ್ರವಾಸಿಗರು ಸಾವು ಕಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಕರ್ನಾಟಕದ ಶಿವಮೊಗ್ಗದ ಮಂಜುನಾಥ್‌ ರಾವ್‌ ಎನ್ನುವ ಪ್ರವಾಸಿಗ ಮಾತ್ರವೇ ಸಾವು ಕಂಡಿದ್ದ ಎನ್ನಲಾಗಿತ್ತು. ಮೂಲಗಳ ಪ್ರಕಾರ ಪ್ರವಾಸಿಗರ ಸುತ್ತ ಗುಂಡಿನ ದಾಳಿ ನಡೆದಿದ್ದು. ಒಂದಲ್ಲ, ಎರಡಲ್ಲ ಬರೋಬ್ಬರ 24 ಮಂದಿ ಪ್ರವಾಸಿಗರು ಸಾವು ಕಂಡಿದ್ದಾರೆ ಎನ್ನಲಾಗಿದೆ.

24 ಮಂದಿ ಟೂರಿಸ್ಟ್‌ಗಳು ಸಾವು ಕಂಡಿದ್ದರೆ, 12 ಮಂದಿ ಗಾಯಾಳುವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕಾಗಿ ಗೃಹ ಸಚಿವ ಅಮಿತ್‌ ಶಾ ತಕ್ಷಣವೇ ಶ್ರೀನಗರಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಹಲವು ವರದಿಗಳಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ ದಾಳಿಯಲ್ಲಿ 2,5 ಮಂದಿ ಸಾವು ಕಂಡಿರುವುದಾಗಿ ವರದಿಗಳು ಬಂದಿವೆ. ಆದರೆ, ಮೂಲಗಳ ಪ್ರಕಾರ 24 ಮಂದಿ ಸಾವು ಕಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ತುರ್ತಾಗಿ ಗೃಹ ಸಚಿವ ಅಮಿತ್‌ ಶಾ ಅವರಿಗೆ ಶ್ರೀನಗರಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್ ಮೇಲೆ ಮಂಗಳವಾರ ಭಯೋತ್ಪಾದಕರು ದಾಳಿ ನಡೆಸಿ, ಹಲವಾರು ಜನರನ್ನು ಕೊಂದು, ಕನಿಷ್ಠ 20 ಜನರನ್ನು ಗಾಯಗೊಳಿಸಿದ್ದಾರೆ. ಕನಿಷ್ಢ 24 ಮಂದಿ ಸಾವು ಕಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಉಗ್ರರ ದಾಳಿಗೆ ಕನ್ನಡಿಗ ಬಲಿ, ಸಿಎಂ ತುರ್ತು ಸಭೆ, ಕಾಶ್ಮೀರಕ್ಕೆ ಹೊರಟ ಅಧಿಕಾರಿಗಳು

ಇನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಾವಿನ ಸಂಖ್ಯೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. "ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಾವು ನೋಡಿದ ಯಾವುದೇ ದಾಳಿಗಿಂತ ಈ ದಾಳಿ ತುಂಬಾ ದೊಡ್ಡದಾಗಿದೆ" ಎಂದು ಅವರು ಹೇಳಿರುವುದು ಪ್ರಕರಣ ಸಾಮಾನ್ಯ ಜನರಿಗೆ ತಿಳಿಯದಷ್ಟೂ ದೊಡ್ಡದಾಗಿದೆ ಅನ್ನೋದನ್ನ ಸೂಚಿಸಿದೆ.

'ಯಾರನ್ನೂ ಸುಮ್ಮನೆ ಬಿಡೋದಿಲ್ಲ..' ಪಹಲ್ಗಾಮ್‌ ಟೆರರಿಸ್ಟ್‌ಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ

Scroll to load tweet…