ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಅಂದಾನಗೌಡ ಪಾಟೀಲರಿಗೆ ಧಾರವಾಡ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ.
- Home
- News
- State
- Karnataka News Live: ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Karnataka News Live: ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!

ಬೆಂಗಳೂರು: ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಬಿಎಂಟಿಸಿ ಜಾರಿ ಮಾಡಿರುವ ಯುಪಿಐ ಆಧಾರಿತ ವ್ಯವಸ್ಥೆ ಬಳಸಿ ನಿಗಮಕ್ಕೆ ಸೇರಬೇಕಾದ ಹಣ ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದ ಮೂವರು ನಿರ್ವಾಹಕರನ್ನು ನಿಗಮ ಅಮಾನತು ಮಾಡಿದೆ.
ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಬಿಎಂಟಿಸಿ ಹಲವು ತಿಂಗಳಿನಿಂದ ಯುಪಿಐ ಆಧಾರಿತ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ಈ ಯುಪಿಐ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ನಿರ್ವಾಹಕರಾದ ಸುರೇಶ್, ಅಶ್ಫಕ್ ಖಾನ್ ಮತ್ತು ಚಾಲಕ ಕಂ ನಿರ್ವಾಹಕ ಮಂಚೇಗೌಡ ಅವರು ಪ್ರಯಾಣಿಕರಿಗೆ ತಮ್ಮ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅನ್ನು ನೀಡಿ ಪ್ರಯಾಣಿಕರು ಪಾವತಿಸುತ್ತಿದ್ದ ಪ್ರಯಾಣ ಶುಲ್ಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಮೂಲಕ ಬಿಎಂಟಿಸಿ ಬ್ಯಾಂಕ್ ಖಾತೆಗೆ ಹೋಗಬೇಕಿದ್ದ 1.04 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನೂ ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಜತೆಗೆ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.
Karnataka News Live 21 January 2026ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Karnataka News Live 21 January 2026Discover Koppal - ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್ - ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸಹಯೋಗದಲ್ಲಿ 'ಡಿಸ್ಕವರಿ ಕೊಪ್ಪಳ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು, ಪೌರಾಣಿಕ ಹಾಗೂ ಪ್ರಾಗೈತಿಹಾಸಿಕ ಸ್ಥಳಗಳನ್ನು ನಾಡಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Karnataka News Live 21 January 2026ಉತ್ತರಕನ್ನಡ - ಒಂದು ಎಕರೆ ಜಮೀನಿಗೆ ಹರಿದ ನೆತ್ತರು; ಕೋರ್ಟ್ ಮೆಟ್ಟಿಲೇರಿದ್ದಕ್ಕೇ ಪ್ರಾಣ ತೆಗೆದ ಪಾಪಿ!
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಜಮೀನು ವಿವಾದವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ದ್ವೇಷಕ್ಕೆ ನಾಗಪ್ಪ ಗೌಡ ಎಂಬಾತ, ಮಾರುತಿ ಹೆಗಡೆ ಎಂಬುವವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮೃತರ ಪುತ್ರಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Karnataka News Live 21 January 2026Breaking News - ಕೋಮುದ್ವೇಷ ಭಾಷಣ ಆರೋಪ - ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎಫ್‌ಐಆರ್!
ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಮುದ್ವೇಷ ಪ್ರಚೋದಿಸುವ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಾನವ ಬಂಧುತ್ವ ವೇದಿಕೆಯಿಂದ ದೂರು. ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Karnataka News Live 21 January 2026ಬೆಂಗಳೂರು - ಮಗಳು ಮನೆ ಬಿಟ್ಟಿದ್ದಕ್ಕೆ ಪತ್ನಿಗೆ ಕಿರುಕುಳ; ಬೇಸತ್ತ ಹೆಂಡತಿಯಿಂದ ಪತಿಯೇ ಹತ್ಯೆ!
Karnataka News Live 21 January 2026ಮದುವೆಗೆ ರೆಡಿಯಾದ ಉಗಂ ಮಂಜು, ಅರಿಶಿನ ಶಾಸ್ತ್ರದ ಫೋಟೋ ರಿಲೀಸ್; ಹಾರೈಸಲು ಬರ್ತಾನಾ ಪಳಾರ್ ಗಿಲ್ಲಿ?
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು, ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜನವರಿ 23 ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ವಿವಾಹಕ್ಕೂ ಮುನ್ನ, ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ.
Karnataka News Live 21 January 2026ಚಾಮರಾಜನಗರ - ಪಾದಯಾತ್ರೆಗೆ ಹೋರಟಿದ್ದವರ ಮೇಲೆ ಚಿರತೆ ಅಟ್ಯಾಕ್, ಮಾದಪ್ಪ ಭಕ್ತ ಸಾವು!
Karnataka News Live 21 January 2026ಹಾಸನದಲ್ಲೇ ಹಾಡ ಹಗಲೇ ಬೆಚ್ಚಿ ಬೀಳಿಸುವ ಘಟನೆ - ಶಾಲಾ ಬಾಲಕಿಯ ಬೆನ್ನಟ್ಟಿಕೊಂಡು ಮನೆ ಬಾಗಿಲವರೆಗೂ ಬಂದ ಅಪರಿಚಿತ
ಹಾಸನದಲ್ಲಿ ಶಾಲಾ ಬಾಲಕಿಯೊಬ್ಬಳನ್ನು ಅಪರಿಚಿತನೋರ್ವ ಮನೆ ಬಾಗಿಲವರೆಗೂ ಹಿಂಬಾಲಿಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
Karnataka News Live 21 January 2026ಡ್ರಗ್ಸ್ ಹಾಗೂ ಅಕ್ಕಿ ದಂಧೆಯಲ್ಲಿ ಆಪ್ತರ ಹೆಸರು - ಅವರು ಮಾಡಿದ್ದನ್ನೆಲ್ಲಾ ನಮ್ಮ ತಲೆಗೆ ಕಟ್ಟಿದರೆ ಹೇಗೆ? - ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್
ದಾವಣಗೆರೆಯಲ್ಲಿನ ಡ್ರಗ್ಸ್ ಮತ್ತು ಪಡಿತರ ಅಕ್ಕಿ ಅಕ್ರಮ ಪ್ರಕರಣಗಳಲ್ಲಿ ತಮ್ಮ ಆಪ್ತರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೌನ ಮುರಿದಿದ್ದಾರೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
Karnataka News Live 21 January 2026'ಬಿಗ್ ಬಾಸ್ ವೋಟಿಂಗ್ ಲೆಕ್ಕ ಬಿಟ್ಟರೆ, ವಿನ್ನರ್ ನಾನೇ'-ಅಶ್ವಿನಿ ಗೌಡ; ಸುದೀಪಣ್ಣ ಕೈ ಬಿಡ್ತಾರೆ ಅನ್ಕೊಂಡಿರಲಿಲ್ಲ!
Karnataka News Live 21 January 2026Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!
ಬಿಗ್ಬಾಸ್ 12ರ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ. ಈ ಕಲ್ಪನೆಯ ಪ್ರಕಾರ, ಕಿಚ್ಚ ಸುದೀಪ್ ಸಿಂಹವಾದರೆ, ವಿನ್ನರ್ ಗಿಲ್ಲಿ ನಟ ಹುಲಿಯಾಗಿದ್ದಾರೆ. ಆದರೆ, ಅಶ್ವಿನಿ ಗೌಡ ಅವರ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತಿದೆ.
Karnataka News Live 21 January 2026ಜಂಟಿ ಅಧಿವೇಶನ ಬಿಕ್ಕಟ್ಟು, ಸರ್ಕಾರದ 'ನರೇಗಾ' ಭಾಷಣ ಓದಲ್ಲ ಎಂದ ರಾಜ್ಯಪಾಲ!
Karnataka News Live 21 January 2026ಬಿಎಂಟಿಸಿ ಬಸ್ QR Code ಹಣ ಜೇಬಿಗಿಳಿಸಿ ಸಸ್ಪೆಂಡ್ ಆದ 4 ಕಂಡಕ್ಟರ್‌ಗಳು; ಅವರ ಐಡಿಯಾ ಹೇಗಿದೆ ಒಮ್ಮೆ ನೋಡಿ!
ಬಿಎಂಟಿಸಿ 'ಶಕ್ತಿ' ಯೋಜನೆಯಲ್ಲಿ ಬೃಹತ್ ವಂಚನೆ! ಮಹಿಳೆಯರ ಉಚಿತ ಟಿಕೆಟ್ ಬಳಸಿ, ತಮ್ಮದೇ ಕ್ಯೂಆರ್ ಕೋಡ್ ಮೂಲಕ ಕಂಡಕ್ಟರ್‌ಗಳು ಲಕ್ಷಾಂತರ ಲೂಟಿ ಮಾಡಿದ್ದು ಹೇಗೆ? ಪೂರ್ತಿ ವಿವರ ತಿಳಿಯಿರಿ.
Karnataka News Live 21 January 2026ಸಚಿವ ತಂಗಡಗಿಗೆ ಈಡಿಗ ಸಮುದಾಯದ 'ವಾರ್ನಿಂಗ್'; ಶ್ರೀಗಳನ್ನು ನಿರ್ಲಕ್ಷಿಸಿದರೆ ಚುನಾವಣೆಲಿ ತಕ್ಕ ಪಾಠ!
ಸಚಿವ ಸ್ಥಾನ ಪಡೆದ ಬಳಿಕ ಈಡಿಗ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆಂದು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀ ಪ್ರಣವಾನಂದ ಸ್ವಾಮೀಜಿಗಳ ಪಾದಯಾತ್ರೆಗೆ ಬೆಂಬಲ ನೀಡಿ, ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ.
Karnataka News Live 21 January 2026ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ? 'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್ ಸತೀಶ್!
ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಅನುಬಂಧ ವೇದಿಕೆಯಲ್ಲಿ ತಮ್ಮ ದುಬಾರಿ ಉಡುಪು ಮತ್ತು ವೈಯಕ್ತಿಕ ಜೀವನದ ಬಗ್ಗೆ ಎಂದಿನಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ವೇದಿಕೆಯಲ್ಲೇ ತಾನು ಹೇಳುವುದೆಲ್ಲಾ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.
Karnataka News Live 21 January 2026ಲಕ್ಕುಂಡಿ ಉತ್ಖನನದಲ್ಲಿ 'ಘಟಸರ್ಪ'ದ ಆತಂಕ - ನಿಧಿ ಕಾಯುವ ಹಾವುಗಳ ಬೆನ್ನತ್ತಿ ಬಂದ ಮೈಸೂರಿನ ಉರಗ ರಕ್ಷಕರು!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ಖನನವು ಹಾವುಗಳ ಪ್ರತ್ಯಕ್ಷದಿಂದ ನಿಗೂಢ ತಿರುವು ಪಡೆದಿದೆ. 'ನಿಧಿಯನ್ನು ಹಾವು ಕಾಯುತ್ತವೆ' ಎಂಬ ಸ್ಥಳೀಯರ ನಂಬಿಕೆ ಕುರಿತು ಪರಿಶೀಲನೆ ಮಾಡಿ, ಜಾಗೃತಿ ಮೂಡಿಸಲು ಮೈಸೂರಿನ ಶಿವರಾಜ್ ನೇತೃತ್ವದ ಉರಗ ರಕ್ಷಣಾ ತಂಡವು ಆಗಮಿಸಿದೆ.
Karnataka News Live 21 January 2026ವೈಭವದ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ, ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ
ರಾಜ್ಯಾದ್ಯಂತ ಪ್ರಸಿದ್ಧವಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ನಡೆಯಲಿದೆ. ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ ನಿರ್ಮಿಸಲಾಗುತ್ತಿದ್ದು, ಭಕ್ತರಿಗಾಗಿ ವಸತಿ, ಅನ್ನಸಂತರ್ಪಣೆ ಹಾಗೂ ಭದ್ರತೆ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.
Karnataka News Live 21 January 2026ಕನ್ನಡದ ಈ ಸ್ಟಾರ್ ನಟಿಯರು ಹುಟ್ಟಿದ್ದು ಯಾವ ಜಿಲ್ಲೆಯಲ್ಲಿ? ಯಾವ ಜಾತಿಯಲ್ಲಿ?
ಬೆಂಗಳೂರು: ತನ್ನ ಅದ್ಭುತ ನಟನೆಯ ಮೂಲಕವೇ ಕನ್ನಡ ನಾಡಿನಾದ್ಯಂತ ಅಭಿಮಾನಿಗಳ ಜನಮನ ಗೆದ್ದ ಹೊಸ ತಲೆಮಾರಿನ ಕನ್ನಡದ ಟಾಪ್-7 ನಟಿಯರು ಯಾವ ಜಿಲ್ಲೆಯವರು ಹಾಗೆ ಯಾವ ಜಾತಿಯವರು ಎನ್ನುವುದನ್ನು ನೋಡೋಣ ಬನ್ನಿ.
Karnataka News Live 21 January 2026ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಮತ್ತೆ ಮುಂದೂಡಿಕೆ!
Karnataka Maharashtra Border Row ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬೇಕಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಅರ್ಜಿ ವಿಚಾರಣೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ನ್ಯಾಯಮೂರ್ತಿಗಳು ಬೇರೆ ಪ್ರಕರಣಗಳಲ್ಲಿ ನಿರತರಾಗಿದ್ದೇ ಇದಕ್ಕೆ ಕಾರಣವಾಗಿದ್ದು, ಈ ಬೆಳವಣಿಗೆಯು ಗಡಿ ಹೋರಾಟಗಾರರ ಅಸಮಾಧಾನಕ್ಕೆ ಕಾರಣ.
Karnataka News Live 21 January 2026ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಾಗರ ಹಾವು ಆಯ್ತು, ಈಗ ದಿಢೀರ್ ಕೋತಿಗಳ ಸೈನ್ಯವೇ ಪ್ರತ್ಯಕ್ಷ!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಸ್ಥಳದಲ್ಲಿ ವಾನರ ಸೇನೆ ಕಾಣಿಸಿಕೊಂಡು ಕುತೂಹಲ ಮೂಡಿಸಿದೆ. ಈ ಉತ್ಖನನದಲ್ಲಿ ಚಾಲುಕ್ಯ ಶೈಲಿಯ ತಾಮ್ರದ ಶಿವಲಿಂಗ, ನಾಗನ ಕಲ್ಲುಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ.