ಹಾಸನದಲ್ಲಿ ಶಾಲಾ ಬಾಲಕಿಯೊಬ್ಬಳನ್ನು ಅಪರಿಚಿತನೋರ್ವ ಮನೆ ಬಾಗಿಲವರೆಗೂ ಹಿಂಬಾಲಿಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇತ್ತೀಚೆಗೆ ಹೆಣ್ಣು ಮಕ್ಕಳ ಸಂಖ್ಯೆಯೇ ಕಡಿಮೆ ಆಗುತ್ತಿದೆ. ಗಂಡು ಮಗು ಬೇಕು ಎಂದು ವ್ಯಾಮೋಹ ಪಡುತ್ತಿದವರೆಲ್ಲರೂ ಈಗ ಮಗನಿಗೊಂದು ಹೆಣ್ಣು ಸಿಗದೇ ಪೇಚಾಡುತ್ತಿದ್ದಾರೆ. ಆದರೆ ಈಗ ಇರುವ ಹೆಣ್ಣು ಮಕ್ಕಳ ರಕ್ಷಣೆಯೇ ದೊಡ್ಡ ಸವಾಲಾಗಿದೆ. ತಾಯಿಯ ಗರ್ಭದಲ್ಲೂ ಇಂದು ಹೆಣ್ಣು ಸುರಕ್ಷಿತವಲ್ಲ, ಹೀಗಿರುವಾಗ ಹೊರಗೆ ಬಂದ ನಂತರ ಆಕೆಯ ರಕ್ಷಣೆ ಹೇಗೆ? ಪುಟ್ಟ ಪುಟ್ಟ ಮಕ್ಕಳ ಮೇಲೆಯೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಹೆಣ್ಣು ತನ್ನ ಸ್ವಂತದವರನ್ನೇ ನಂಬದಂತಹ ಸ್ಥಿತಿ ಇದೆ. ಸ್ವಂತ ಮಕ್ಕಳ ಮೇಲೆಯೇ ತಂದೆ ಅತ್ಯಾ*ಚಾರವೆಸಗಿದಂತಹ ಪ್ರಕರಣಗಳು ನಡೆದಿರುವುದು ಇದಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕೆಲ ದಿನಗಳ ಹಿಂದೆ ಸ್ವಂತ ಸೋದರನಿಂದಲೇ ಹದಿಹರೆಯದ ಬಾಲಕಿಯೊಬ್ಬಳು ಗರ್ಭಿಣಿಯಾದಂತಹ ಘಟನೆ ನಡೆದಿತ್ತು. ಪರಿಸ್ಥಿತಿ ಹೀಗಿರುವಾಗ ಹೆಣ್ಣು ನಂಬುವುದಾದರು ಯಾರನ್ನು ಎಂಬ ಪ್ರಶ್ನೆ ಮೂಡುತ್ತಿದೆ. ಇದರಿಂದಾಗಿಯೇ ಹೆಣ್ಣು ಹೆತ್ತ ಪೋಷಕರು ತಮ್ಮ ಮಕ್ಕಳನ್ನು ಬಂಗಾರದಂತೆ ಕಾವಲು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಗಲಾರದು. ಹೀಗೆ ಹೇಳುವುದಕ್ಕೆ ಕಾರಣವಾಗಿರುವುದು ದಿನಗಳ ಹಿಂದೆ ಹಾಸನದಲ್ಲಿ ನಡೆದಂತಹ ಘಟನೆ. ಹೌದು ಬೇರೆ ಯಾವುದೋ ರಾಜ್ಯದಲ್ಲೋ ಅಲ್ಲ ನಮ್ಮ ರಾಜ್ಯದ ಹಾಸನದಲ್ಲೇ ಶಾಲಾ ಬಾಲಕಿಯೊಬ್ಬಳನ್ನು ಯುವಕನೋರ್ವ ಬೆನ್ನಟ್ಟಿಕೊಂಡು ಬಂದಂತಹ ಘಟನೆ ನಡೆದಿದ್ದು, ಇದರ ವೀಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವುದರ ಜೊತೆಗೆ ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡಿದೆ.

ಹೌದು ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತನೋರ್ವ ಬಾಲಕಿಯನ್ನು ಹಿಂಬಾಲಿಸಿಕೊಂಡು ಮನೆ ಬಾಗಿಲವರೆಗೂ ಬಂದಿದ್ದಾನೆ. ಅಪರಿಚಿತನೋರ್ವ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಬಗ್ಗೆ ಬಾಲಕಿಯ ಗಮನಕ್ಕೂ ಬಂದಿದ್ದು, ಕೂಡಲೇ ಬಾಲಕಿ ಓಡೋಡಿ ಬಂದು ಮನೆಯ ಗೇಟಿನ ಬಾಗಿಲು ಹಾಕಿ ಬಾಗಿಲು ತೆಗೆಯುವಂತೆ ತಾಯಿಯನ್ನು ಜೋರಾಗಿ ಅಮ್ಮ ಅಮ್ಮ ಎಂದು ಕರೆದಿದ್ದಾಳೆ. ಇತ್ತ ಆ ಕಿರಾತಕ ಬಾಲಕಿಯನ್ನು ಹಿಂಬಾಲಿಸಿಕೊಂಡು ಮನೆ ಗೇಟಿನವರೆಗೂ ಬಂದಿದ್ದು, ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಜನವರಿ 17ರಂದು ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಲೆ ಬಿಟ್ಟು ಒಬ್ಬಂಟಿಯಾಗಿ ಬರುವ ಪುಟ್ಟ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಈಗ ಆತಂಕ ಮೂಡಿದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತನಿಗಾಗಿ ಬಲೆ ಬೀಸಿದ್ದಾರೆ.

ಇದನ್ನು ಓದಿ: WPLನಿಂದಾಗಿ ಹೈಲೈಟ್ ಆಗ್ತಿರುವ 16ರ ಹರೆಯದ ದಿಯಾ ಯಾದವ್ : ಮಹಿಳಾ ಕ್ರಿಕೆಟ್‌ನ ಅತ್ಯಂತ ಕಿರಿಯ ಆಟಗಾರ್ತಿ ಈಕೆ

ವೈರಲ್ ಆದ ವೀಡಿಯೋದಲ್ಲಿ ಆಡಿಯೋ ಕೂಡ ಇದ್ದು ಬಾಲಕಿ ಜೋರಾಗಿ ಕಿರುಚಿಕೊಳ್ಳುವುದರ ಜೊತೆಗೆ ಅಪರಿಚಿತನಿಗೆ ಯಾರು ನೀವು ಎಂದು ಜೋರಾಗಿ ಕಿರುಚುತ್ತಾ ಕೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿದೆ. ಟೋಫಿ ಧರಿಸಿಕೊಂಡು ಮನೆ ಬಾಗಿಲಿನವರೆಗೂ ಬಂದಿರುವ ಆತ ಕೈ ತೋರಿಸಿ ಬೆದರಿಕೆಯೊಡ್ಡಿದಂತೆ ಮಾಡಿ ಅಲ್ಲಿಂದ ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ವೀಡಿಯೋ ನೋಡಿ ಅಂತಕಗೊಂಡ ಒಬ್ಬರು ತಂದೆ ತಾಯಿ ಶಾಲೆಯಿಂದ ಹೆಣ್ಣುಮಗಳು ಬರುವಾಗ ಶಾಲೆಯವರೆಗೆ ಹೋಗಿ ಕರ್ಕೊಂಡು ಬನ್ನಿ ಜೊತೆಯಲ್ಲಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮಗು ಕ್ಷಣದಲ್ಲಿ ಬಚವಾಗಿದೆ. ಆತನನ್ನು ಸುಮ್ಮನೆ ಬಿಟ್ಟರೆ ಅಪಾಯ ತಪ್ಪಿದ್ದಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ: ನೆರೆಮನೆಯವನೊಂದಿಗೆ ತಾಯಿಯ ಸರಸ ನೋಡಿದ ಕಂದ: ಮಹಡಿಯಿಂದ ತಳ್ಳಿ 5 ವರ್ಷದ ಮಗನ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ

Scroll to load tweet…